ಬೆಂಗಳೂರು: ಲಕ್ಕಸಂದ್ರದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ, ತಪ್ಪಿದ ಭಾರೀ ಅನಾಹುತ

ನಗರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ವಿಲ್ಸನ್ ಗಾರ್ಡನ್ ಸಮೀಪದ ಲಕ್ಕಸಂದ್ರದಲ್ಲಿ 3 ಅಂತಸ್ತಿನ ಮನೆ ಕುಸಿದಿದ್ದು, ಮನೆ ಬೀಳುವ ಭೀಕರ ದೃಶ್ಯ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ.
ಕುಸಿದುಬಿದ್ದ ಕಟ್ಟಡ
ಕುಸಿದುಬಿದ್ದ ಕಟ್ಟಡ

ಬೆಂಗಳೂರು: ನಗರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ವಿಲ್ಸನ್ ಗಾರ್ಡನ್ ಸಮೀಪದ ಲಕ್ಕಸಂದ್ರದಲ್ಲಿ 3 ಅಂತಸ್ತಿನ ಮನೆ ಕುಸಿದಿದ್ದು, ಮನೆ ಬೀಳುವ ಭೀಕರ ದೃಶ್ಯ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಮನೆ ಬಾಗಿತ್ತು. ಆದರೂ ಮನೆ ಮಾಲೀಕರು ಅಲ್ಪ ಸ್ವಲ್ಪ ರಿಪೇರಿ ಮಾಡಿಸಿ ಬಾಡಿಗೆಗೆ ಕೊಟ್ಟಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇಂದು ಬೆಳಗ್ಗೆ ಮನೆ ಕುಸಿತವಾಗುವುದಕ್ಕೆ ಆರಂಭವಾಗಿದ್ದು, ತಕ್ಷಣವೇ ಎಚ್ಚೇತುಕೊಂಡ ಮನೆಯಲ್ಲಿದ್ದ ಬಾಡಿಗೆದಾರರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ಆರಂಭಿಸುವ ವೇಳೆಗೆ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

ಮನೆಯಲ್ಲಿ ವಾಸವಿದ್ದ ಸ್ಥಳೀಯ ದಂಪತಿ ಈ ಕುರಿತು ಪ್ರತಿಕ್ರಿಯಿಸಿ, ಲಕ್ಕಸಂದ್ರದ 7ನೇ ಮುಖ್ಯರಸ್ತೆ, 14ನೇ ಕ್ರಾಸ್​ನಲ್ಲಿನ ಈ ಮೂರು ಅಂತಸ್ತಿನ ಕಟ್ಟಡವನ್ನು 1974ರಲ್ಲಿ ನಿರ್ಮಿಸಲಾಗಿದೆ. ರಾತ್ರಿ ವೇಳೆ ಈ ಹಳೆಯ ಕಟ್ಟಡ ಕುಸಿದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಈ ಕಟ್ಟಡದಲ್ಲಿ 40-45 ಮಂದಿ ಮೆಟ್ರೋ ಕಾರ್ಮಿಕರು ವಾಸಿಸುತ್ತಿದ್ದರು. ಸ್ವಲ್ಪದರಲ್ಲಿ ಪಾರಾಗಿ ಮನೆಯಿಂದ ಹೊರಬಂದಿದ್ದಾರೆ. ಯಾವುದೇ ಅನಾಹುತ ಸಂಭವಿಸಲಿಲ್ಲ ಎಂದು ತಿಳಿಸಿದರು.

ಮನೆ ಬೀಳುವಾಗ ನಾವು ಕೂಡ ನಮ್ಮ ಮನೆಯಲ್ಲಿದ್ದೇವೆ. ಇಂದು ಬೆಳಗ್ಗೆ 10-10.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ರಾತ್ರಿ ಈ ಘಟನೆ ನಡೆದಿದ್ದರೇ, 40-50 ಜನ ಮೃತಪಡುತ್ತಿದ್ದರು. ಈ ಹಿಂದೆಯೇ ಮನೆ ಮಾಲೀಕರಿಗೆ ಮನೆ ತೆರವುಗೊಳಿಸುವಂತೆ ಸೂಚಿಸಿದ್ದೇವು. ಆದರೆ, ಅವರು ಈ ಕಡೆ ಕಿವಿಗೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮನೆ ಬೀಳುವಾಗ ನಾವು ಕೂಡ ನಮ್ಮ ಮನೆಯಲ್ಲೇ ಇದ್ದೇವು. ಮನೆಯಲ್ಲಿ ನಾಲ್ವರಿದ್ದೇವೆ. ಸದ್ಯ ನಾವೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದೇವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com