ಒಂದೇ ಕುಟುಂಬದ ಐವರ ಸಾವು ಪ್ರಕರಣ: ಆತ್ಮಹತ್ಯೆಗೂ ಮುನ್ನ ತನ್ನ 9 ತಿಂಗಳ ಮಗುವನ್ನೇ ಕೊಂದ ತಾಯಿ!

ನಗರದ ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.
ಕುಟುಂಬದ ಐವರ ಸಾವು ಪ್ರಕರಣ
ಕುಟುಂಬದ ಐವರ ಸಾವು ಪ್ರಕರಣ
Updated on

ಬೆಂಗಳೂರು: ನಗರದ ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.

ಮೃತರ ಮರಣೋತ್ತರ ಪರೀಕ್ಷೆಯ ವರದಿ ಸದ್ಯ ಬ್ಯಾಡರಹಳ್ಳಿ ಪೊಲೀಸರ ಕೈ ಸೇರಿದ್ದು, ಈ ವೇಳೆ ಅಚ್ಚರಿಕೆಯ ಅಂಶವೊಂದು ಬಹಿರಂಗಗೊಂಡಿದೆ. ಸಂಪಾದಕ ಶಂಕರ್ ಕುಟುಂಬದ 9 ತಿಂಗಳ ಗಂಡು ಮಗು ಸೇರಿ 5 ಮಂದಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ ಪೊಲೀಸರು ಮನೆಯ ಯಜಮಾನ ಶಂಕರ್ ಹಾಗೂ ಇಬ್ಬರೂ ಅಳಿಯಂದಿರ ವಿಚಾರಣೆ ನಡೆಸಿದ್ದರು. ಈಗ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈ ಸೇರಿದೆ.

ತಾಯಿ ಸಿಂಧೂರಾಣಿಯಿಂದಲೇ 9 ತಿಂಗಳ ಮಗು ಹತ್ಯೆಯಾಗಿದೆ ಎಂದು ಮೆಡಿಕಲ್ ರಿಪೋರ್ಟ್‌ನಲ್ಲಿ ಸ್ಪಷ್ಟವಾಗಿದೆ. ಹಸಿರು ಬಣ್ಣದ ಬಟ್ಟೆಯಿಂದ ಮಗುವಿನ ಕತ್ತನ್ನು ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ. ಮಗುವನ್ನ ಹತ್ಯೆ ಮಾಡಿ ಬಳಿಕ ತಾಯಿ ಸಿಂಧೂರಾಣಿ ನೇಣು ಬಿಗಿದುಕೊಂಡಿದ್ದಾರೆ. ಒಂಬತ್ತು ತಿಂಗಳ ಹಸುಗೂಸನ್ನು ತಾಯಿಯೇ ಕೊಲೆ ಮಾಡಿದ್ದಾಳೆ. ಹಸಿರು ಬಣ್ಣದ ಬಟ್ಟೆಯಿಂದ ಉಸಿರುಗಟ್ಟಿಸಿರುವ ಮಾಹಿತಿ ಲಭ್ಯವಾಗಿದ್ದು, ಪಿಎಂ ರಿಪೋರ್ಟ್​ನಲ್ಲಿ ಧೃಢವಾಗಿದೆ. ಮಗುವಿನ ಕೊಲೆ ರಿಪೋರ್ಟ್ ಬಂದ ಹಿನ್ನೆಲೆ ಮತ್ತೊಂದು ಎಫ್​ಐಆರ್ ದಾಖಲು ಮಾಡಿಕೊಳ್ಳಲು ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.

ಮಹಿಳೆಯರ ಜೊತೆ ಶಂಕರ್ ಚಾಟಿಂಗ್; ಮಾಹಿತಿ ಲಭ್ಯ
ಆತ್ಮಹತ್ಯೆಗೆ ಶರಣಾಗಿದ್ದ ಮಕ್ಕಳು ತನ್ನ ತಂದೆ ಶಂಕರ್ ವಿರುದ್ಧ ದೂರಿದ್ದರು. ಶಂಕರ್ ವಿರುದ್ಧ ಮಕ್ಕಳು ಡೆತ್‌ನೋಟ್‌ನಲ್ಲಿ ಆರೋಪಿಸಿದ ಹಿನ್ನೆಲೆ ಶಂಕರ್‌ಗೆ ಸೇರಿದ ಲ್ಯಾಪ್‌ಟಾಪ್, ಮೊಬೈಲ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಶಂಕರ್ ಅಳಿಯಂದಿರಿಗೆ ಸೇರಿದ ಮೊಬೈಲ್‌ ಕೂಡ ವಶಕ್ಕೆ ಪಡೆಯಲಾಗಿದೆ. ಲ್ಯಾಪ್‌ಟಾಪ್, ಮೊಬೈಲ್ ರಿಟ್ರೀವ್‌ಗೆ ಪೊಲೀಸರಿಂದ ಸಿದ್ಧತೆ ನಡೆಯುತ್ತಿದೆ. ಸಿಐಡಿ ಸೈಬರ್ ಸೆಲ್ ಎಕ್ಸ್‌ಪರ್ಟ್‌ನಿಂದ ರಿಟ್ರೀವ್‌ಗೆ ತಯಾರಿ ನಡೆಸಲಾಗುತ್ತಿದೆ. ಲ್ಯಾಪ್‌ಟಾಪ್‌ನಲ್ಲಿ ಶಂಕರ್ ಚಾಟಿಂಗ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಹಿಳೆಯರ ಜತೆ ಚಾಟಿಂಗ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಬ್ಯಾಡರಹಳ್ಳಿ ಠಾಣೆ ಪೊಲೀಸರಿಂದ ತನಿಖೆ ಮುಂದುವರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com