TNIE ವರದಿ ಇಂಪ್ಯಾಕ್ಟ್: ಬಾಲ್ಯವಿವಾಹ ಸಂತ್ರಸ್ಥೆಗೆ ಕೊನೆಗೂ ಪರಿಹಾರ, ವರದಿ ಕೇಳಿದ ರಾಜ್ಯ ಸರ್ಕಾರ!

ಬಾಲ್ಯವಿವಾಹ ಸಂತ್ರಸ್ಥೆ ಕುರಿತಂತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸುದ್ದಿ ಸಂಸ್ಥೆ ಪ್ರಕಟಿಸಿದ್ದ ವರದಿಗೆ ಕೊನೆಗೂ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಈ ಕುರಿತಂತೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಬಾಲ್ಯವಿವಾಹ ಸಂತ್ರಸ್ಥೆಗೆ ಕೊನೆಗೂ ಪರಿಹಾರ
ಬಾಲ್ಯವಿವಾಹ ಸಂತ್ರಸ್ಥೆಗೆ ಕೊನೆಗೂ ಪರಿಹಾರ
Updated on

ಬೆಂಗಳೂರು: ಬಾಲ್ಯವಿವಾಹ ಸಂತ್ರಸ್ಥೆ ಕುರಿತಂತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸುದ್ದಿ ಸಂಸ್ಥೆ ಪ್ರಕಟಿಸಿದ್ದ ವರದಿಗೆ ಕೊನೆಗೂ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಈ ಕುರಿತಂತೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಆಗಸ್ಟ್ 20 ರಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಕನ್ನಡಪ್ರಭ.ಕಾಮ್ ನಲ್ಲಿ ವರದಿಯಾಗಿದ್ದ 15 ನೇ ವಯಸ್ಸಿನಲ್ಲಿ ವಿವಾಹವಾಗಿ 21ನೇ ವಯಸ್ಸಿಗೆ ವಿಧವೆಯಾದ 2 ಮಕ್ಕಳ ತಾಯಿಯ ಕುರಿತ ಸುದ್ದಿಗೆ ರಾಜ್ಯ ಸರ್ಕಾರ ಸ್ಬಂದಿಸಿದೆ. ಈ ವರದಿಗೆ ಸಂಬಂಧಿಸಿದಂತೆ ಪೂರ್ವಭಾವಿ ಕ್ರಮ ಮತ್ತು ತಕ್ಷಣದ ಪ್ರತಿಕ್ರಿಯೆಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (DWCD) ನಿರ್ದೇಶಕರು ಜಿಲ್ಲಾಡಳಿತಕ್ಕೆ ಪತ್ರ ಬರೆದು ವರದಿ ಕೇಳಿದ್ದಾರೆ.

ಮಕ್ಕಳ ರಕ್ಷಣಾಧಿಕಾರಿ (ಡಿಸಿಪಿಯು), ಚಾಮರಾಜನಗರ ಜಿಲ್ಲೆ, ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ), ಕೊಳ್ಳೇಗಾಲ ತಾಲೂಕು, “21 ವರ್ಷದ (ಸುದ್ದಿ ವರದಿಯಲ್ಲಿ ಉಲ್ಲೇಖಿಸಲಾಗಿದೆ) ಬಾಲ್ಯ ವಿವಾಹಕ್ಕೆ ಬಲಿಯಾದವರಿಗೆ ಅಗತ್ಯ ಸೇವೆಗಳನ್ನು ಒದಗಿಸಲು ಬಾಲ್ಯ ವಿವಾಹ ನಿಷೇಧ ಕಾಯಿದೆ (ಪಿಸಿಎಂಎ), 2006, ಮತ್ತು ಕರ್ನಾಟಕ ತಿದ್ದುಪಡಿ, 2016, ಸಮಗ್ರ ವರದಿಯನ್ನು ಸಿದ್ಧಪಡಿಸಿ ಆಗಸ್ಟ್ 24 ರೊಳಗೆ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು” ಎಂದು ಆಗಸ್ಟ್ 20 ರ ಪತ್ರದಲ್ಲಿ ತಿಳಿಸಲಾಗಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಪೀಪಲ್ಸ್ ಮೂವ್‌ಮೆಂಟ್ ಫಾರ್ ಸೆಲ್ಫ್-ರಿಲಯನ್ಸ್ (ಪಿಎಂಎಸ್‌ಆರ್)ನ ಯೋಜನಾ ನಿರ್ದೇಶಕ ಮತ್ತು ಕಾರ್ಯದರ್ಶಿ ಅಡಿಸ್ ಅರ್ನಾಲ್ಡ್ ಅವರು, 'ಶನಿವಾರ ಸಂಜೆ, ಡಿಡಬ್ಲ್ಯೂಸಿಡಿಯ ನಿರ್ದೇಶಕರ ಪತ್ರವನ್ನು ಸ್ವೀಕರಿಸಿದ ನಂತರ ಕೊಳ್ಳೇಗಾಲ ತಾಲೂಕಿನ ಸಿಡಿಪಿಒ ಅವರಿಗೆ ಕರೆ ಮಾಡಿದರು. “ಇಂದು, ಸಿಡಿಪಿಒ ಲತಾ ಅವರ ವಿವರಗಳನ್ನು ಪಡೆಯಲು ತಮ್ಮ ಸಿಬ್ಬಂದಿಯನ್ನು (ಅಂಗನವಾಡಿಗಳ ಮೇಲ್ವಿಚಾರಕರು) ನಮ್ಮ ಕಚೇರಿಗೆ ಕಳುಹಿಸಿದ್ದಾರೆ. ಸೋಮವಾರ, ನಮ್ಮ ಸಂಯೋಜಕರಿಗೆ ಸಿಡಿಪಿಒ ಅವರನ್ನು ಭೇಟಿ ಮಾಡಲು ಅವರಿಗೆ ಸಹಾಯ ಮಾಡುವ ಮಾರ್ಗಗಳನ್ನು ಚರ್ಚಿಸಲು ಕೇಳಲಾಗಿದೆ ಎಂದು ಹೇಳಿದ್ದಾರೆ.

ಅಧಿಕಾರಿಗಳಿಂದ ಬಾಲ್ಯ ವಿವಾಹ ಸಂತ್ರಸ್ತರ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹ

ಇನ್ನು ಆಗಸ್ಟ್ 12 ರಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರರು 25 ಕ್ಕೂ ಹೆಚ್ಚು ಬಾಲ್ಯವಿವಾಹ ಸಂತ್ರಸ್ಥ ಯುವತಿಯರನ್ನು ಭೇಟಿ ಮಾಡಿದ್ದರು. ಅವರಲ್ಲಿ ಹೆಚ್ಚಿನವರು 14-15 ವರ್ಷ ವಯಸ್ಸಿನಲ್ಲೇ ಮಕ್ಕಳಿಗೆ ಜನ್ಮ ನೀಡಿದವರಾಗಿದ್ದಾರೆ. ಈ ಪೈಕಿ ಒಬ್ಬರು, 15 ನೇ ವಯಸ್ಸಿನಲ್ಲಿ ವಿವಾಹವಾದ ಲಾತ್ ಹೆಚ್ ಎ (ಹೆಸರು ಬದಲಾಯಿಸಲಾಗಿದೆ, 21), ಆರು ಮತ್ತು ನಾಲ್ಕು ವರ್ಷದ ಇಬ್ಬರು ಮಕ್ಕಳ ತಾಯಿ. ಕುಡಿತದ ವ್ಯಸನಿಯಾಗಿದ್ದ ಆಕೆಯ ಪತಿ ಕೆಲವು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆ ತನ್ನ ಮಕ್ಕಳಿಗಾಗಿಯೇ ಜೀವನ ನಡೆಸುವಂತಾಗಿದೆ. ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಕನ್ನಡಪ್ರಭ.ಕಾಮ್  ಸುದೀರ್ಘ ವರದಿ ಪ್ರಕಟಿಸಿದ್ದವು.

ವಿವಾಹಿತ ಹದಿಹರೆಯದ ಬಾಲಕಿಯರ ಸಬಲೀಕರಣಕ್ಕಾಗಿ ಉಪಕ್ರಮಗಳು (IMAGE) 2.0 - ಅಜೀಂ ಪ್ರೇಮ್‌ಜಿ ಫೌಂಡೇಶನ್‌ನಿಂದ ಬೆಂಬಲಿತವಾದ ಯೋಜನೆಯಾಗಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ ಉದ್ಯೋಗ-ಆಧಾರಿತ ಕೌಶಲ್ಯಗಳು ಮತ್ತು ವೃತ್ತಿಪರ ತರಬೇತಿ ಸೇರಿದಂತೆ ವಿವಿಧ ಉಪಕ್ರಮಗಳ ಮೂಲಕ ವಿವಾಹಿತ ಹದಿಹರೆಯದ ಹುಡುಗಿಯರನ್ನು ಸಬಲೀಕರಣಗೊಳಿಸಲು PMSR ನಿಂದ ಜಾರಿಗೊಳಿಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com