ಸಂತ್ರಸ್ತೆ ಮತ್ತು ಆರೋಪಿ ನಡುವಿನ ವಿವಾಹ ಒಪ್ಪಿಕೊಂಡ ಹೈಕೋರ್ಟ್, ಆರೋಪಿ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಜಾ

ಸಂತ್ರಸ್ತೆ ಮತ್ತು ಆರೋಪಿ ನಡುವಿನ ವಿವಾಹ ಸಂಬಂಧ ಇತ್ಯರ್ಥಕ್ಕೆ ಸಮ್ಮತಿ ನೀಡಿರುವ ಕರ್ನಾಟಕ ಹೈಕೋರ್ಟ್, ಆರೋಪಿ ವಿರುದ್ಧ ಐಪಿಸಿ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ವಜಾಮಾಡಿದೆ.
ಹೈಕೋರ್ಟ್
ಹೈಕೋರ್ಟ್
Updated on

ಬೆಂಗಳೂರು: ಸಂತ್ರಸ್ತೆ ಮತ್ತು ಆರೋಪಿ ನಡುವಿನ ವಿವಾಹ ಸಂಬಂಧ ಇತ್ಯರ್ಥಕ್ಕೆ ಸಮ್ಮತಿ ನೀಡಿರುವ ಕರ್ನಾಟಕ ಹೈಕೋರ್ಟ್, ಆರೋಪಿ ವಿರುದ್ಧ ಐಪಿಸಿ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ವಜಾಮಾಡಿದೆ.

'ಸಂತ್ರಸ್ತೆ ಮತ್ತು ಆರೋಪಿ ನಡುವಿನ ವಿವಾಹವನ್ನು ನೋಂದಾಯಿಸಲಾಗಿದೆ. ಇವರನ್ನು ಕಾನೂನುಬದ್ಧವಾಗಿ ವಿವಾಹವಾದ ಪತಿ ಮತ್ತು ಪತ್ನಿ ಎಂದು ಚಿತ್ರಿಸುವ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ದಂಪತಿಯ ಮಗುವಿಗೆ ಜನನ ಪ್ರಮಾಣಪತ್ರ ನೀಡಲಾಗಿದೆ. ಈ ರೀತಿಯ ಪ್ರಕರಣಗಳಲ್ಲಿ  ಪ್ರಾಸಿಕ್ಯೂಷನ್, ಅರ್ಜಿದಾರ-ಆರೋಪಿಗಳ ವಿರುದ್ಧದ ಅಪರಾಧವನ್ನು ಸಾಬೀತುಪಡಿಸುವುದು ಕಷ್ಟವಾಗುತ್ತದೆ' ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, 23 ವರ್ಷದ ಆರೋಪಿಯೊಬ್ಬರು ತಮ್ಮ ವಕೀಲ ಕೆ.ಜಿ ಅಯ್ಯಪ್ಪ ಅವರ ಮೂಲಕ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸುವಾಗ ಹೇಳಿದರು.

ತನ್ನ ಮತ್ತು ಆರೋಪಿಯ ನಡುವಿನ ದೈಹಿಕ ಸಂಬಂಧವು ಸಮ್ಮತಿಯಿಂದ ಕೂಡಿತ್ತು ಎಂದು ಸಂತ್ರಸ್ತೆ ಸೆಷನ್ಸ್ ನ್ಯಾಯಾಲಯದ ಮುಂದೆ ಹೇಳಿದ್ದರು. ಆ ಸಮಯದಲ್ಲಿ ಆಕೆಗೆ 17 ವರ್ಷ ವಯಸ್ಸಾಗಿತ್ತು ಮತ್ತು ಅರ್ಜಿದಾರರ ವಯಸ್ಸು 20 ಆಗಿತ್ತು.

ಆಪಾದಿತ ಘಟನೆಯ ಸುಮಾರು ಒಂದು ವರ್ಷದ ನಂತರ ಮಾರ್ಚ್ 5, 2020 ರಂದು, ತನಗೆ 18 ವರ್ಷ ವಯಸ್ಸಾಗಿತ್ತು. ತಾನು ಮತ್ತು ಆರೋಪಿ ಇಬ್ಬರೂ ಪ್ರೀತಿಸುತ್ತಿದ್ದೇವೆ ಎಂದು ಆಕೆ  ಅಫಿಡವಿಟ್ ಸಲ್ಲಿಸಿದ್ದರು. ಇದಾದ ಬಳಿಕ 18 ತಿಂಗಳಿಗೂ ಅಧಿಕ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಜಾಮೀನು ನೀಡಲಾಗಿತ್ತು. 2020ರ ನವೆಂಬರ್‌ನಲ್ಲಿ ಆರೋಪಿ ಮತ್ತು ಸಂತ್ರಸ್ತೆ ವಿವಾಹವಾಗಿದ್ದರು.

ವಿಚಾರಣೆಯಲ್ಲಿ ಸಂತ್ರಸ್ತೆಯು ಪ್ರತಿಕೂಲವಾಗಿ ವರ್ತಿಸಿದರೆ ಮತ್ತು ಅರ್ಜಿದಾರರು ಎಲ್ಲಾ ಅಪರಾಧಗಳಿಂದ ಖುಲಾಸೆಗೊಂಡರೆ, ಅಪರಾಧದ ಕತ್ತಿಯು ಆರೋಪಿಯ ಆತ್ಮವನ್ನು ಸೀಳುತ್ತದೆ. ಇದು ನೋವಿನಿಂದ ಕೊನೆಯಾಗುವುದಿಲ್ಲ. ಆದರೆ ಅಪರಾಧದ ನ್ಯಾಯ ವ್ಯವಸ್ಥೆಯಲ್ಲಿನ ಪ್ರಕ್ರಿಯೆಯು ಅಂತಹ ನೋವನ್ನು ಉಂಟುಮಾಡುತ್ತದೆ  ಎಂದು ನ್ಯಾಯಾಲಯ ಹೇಳಿದೆ. ಇಂತಹ ಪ್ರಕರಣಗಳಿಗೆ ನ್ಯಾಯಾಲಯವು ಬಾಗಿಲು ಮುಚ್ಚಿದರೆ, ವಿಚಾರಣೆಯು ನ್ಯಾಯದ ಗರ್ಭಪಾತಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಈ ವಿಚಾರಣೆಯನ್ನು ಮುಕ್ತಾಯಗೊಳಿಸಲು ವಿರೋಧಿಸಿದ ಸರ್ಕಾರಿ ವಕೀಲರ ಮುಂದೆ, ಸಂತ್ರಸ್ತೆ ಮತ್ತು ಆರೋಪಿಗಳ ನಡುವಿನ ವಿವಾಹದ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಿದ ಹಲವಾರು ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ನಾಗಪ್ರಸನ್ನ, 'ಆ ತೀರ್ಪುಗಳನ್ನು ಅನುಸರಿಸುವುದು ಮತ್ತು ಪ್ರಕ್ರಿಯೆಗಳನ್ನು ರದ್ದುಗೊಳಿಸುವುದು ಸೂಕ್ತವೆಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com