ಬೆಂಗಳೂರು ಮೆಟ್ರೋ ರೈಲು: 3ನೇ ಹಂತದ ಡಿಪಿಆರ್ ಸರ್ಕಾರದ ಅನುಮೋದನೆಗೆ ಸಿದ್ಧ

ಬಿಎಂಆರ್ ಸಿಎಲ್ 3 ನೇ ಹಂತದ ಅಂತಿಮ ವಿವರವಾದ ಯೋಜನಾ ವರದಿಗೆ ರಾಜ್ಯ ಸರ್ಕಾರದ ಅನುಮೋದನೆ ಪಡೆಯಲು ಸಜ್ಜಾಗಿದೆ. ಇದನ್ನು ರೈಲ್ವೆ ಸಚಿವಾಲಯದ ಸಲಹಾ ಸಂಸ್ಥೆಯಾದ ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವಿಸ್  ಲಿಮಿಟೆಡ್ ಸಲ್ಲಿಸಿದೆ.
ಮೆಟ್ರೋ ನಿಲ್ದಾಣದ ಚಿತ್ರ
ಮೆಟ್ರೋ ನಿಲ್ದಾಣದ ಚಿತ್ರ
Updated on

ಬೆಂಗಳೂರು: ಬಿಎಂಆರ್ ಸಿಎಲ್ 3 ನೇ ಹಂತದ ಅಂತಿಮ ವಿವರವಾದ ಯೋಜನಾ ವರದಿಗೆ ರಾಜ್ಯ ಸರ್ಕಾರದ ಅನುಮೋದನೆ ಪಡೆಯಲು ಸಜ್ಜಾಗಿದೆ. ಇದನ್ನು ರೈಲ್ವೆ ಸಚಿವಾಲಯದ ಸಲಹಾ ಸಂಸ್ಥೆಯಾದ ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವಿಸ್  ಲಿಮಿಟೆಡ್ ಸಲ್ಲಿಸಿದೆ. 44.65 ಕಿಮೀ ಎತ್ತರದ ಯೋಜನೆಗೆ 13,000 ಕೋಟಿ ರೂಪಾಯಿ ವೆಚ್ಚವಾಗಲಿದೆ ಮತ್ತು 2028 ರಲ್ಲಿ ಇದು ಕಾರ್ಯಾರಂಭ ಮಾಡಿದಾಗ ದಿನಕ್ಕೆ 4.65 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ ಎಂದು ಬಿಎಂಆರ್ ಸಿಎಲ್ ಅಂದಾಜಿಸಿದೆ.

ಬುಧವಾರ ಬಿಎಂಆರ್ ಸಿಎಲ್  ಅಂತಿಮ ಸುತ್ತಿನ ಚರ್ಚೆ ನಡೆಸಿದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಶೀಘ್ರವೇ ಡಿಪಿಆರ್ ನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುವುದು ಮತ್ತು ಕೇಂದ್ರ ಸರ್ಕಾರದ ಅನುಮತಿಗೂ ಅದನ್ನು ಕಳುಹಿಸಲಾಗುವುದು ಎಂದು ಅವರು ತಿಳಿಸಿದರು.

ಪ್ರಸ್ತುತ ದರದಂತೆ ಮೂರನೇ ಹಂತದ ಯೋಜನೆಗೆ ಸುಮಾರು 13,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಅದು ಪೂರ್ಣಗೊಳ್ಳುವ ವೇಳೆಗೆ (228) ಕಟ್ಟಡ ನಿರ್ಮಾಣ, ಸರಕುಗಳ ವೆಚ್ಚ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. ಬಿಎಂಆರ್ ಸಿಎಲ್ ತನ್ನ ಅಂತಿಮ ಡಿಪಿಆರ್ ನಲ್ಲಿ  RITES ಪ್ರಸ್ತಾಪಿಸಿದ ಎರಡು ಕಾರಿಡಾರ್‌ಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.

ಮೊದಲ ಕಾರಿಡಾರ್ ಜೆಪಿ ನಗರದಿಂದ ಕೆಂಪಾಪುರ 4ನೇ ಹಂತದವರೆಗೂ 32.15ಕಿ. ಮೀ ದೂರದಲ್ಲಿ 22 ನಿಲ್ದಾಣಗಳು ಬರಲಿವೆ ಮತ್ತು ಕಾರಿಡಾರ್ 2ರಲ್ಲಿ ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೂ 12. ಕಿ. ಮೀ ದೂರದಲ್ಲಿ 9 ನಿಲ್ದಾಣಗಳು ಬರಲಿವೆ. 2028 ರಲ್ಲಿ ಎರಡೂ ಕಾರಿಡಾರ್‌ಗಳಲ್ಲಿ ದಿನಕ್ಕೆ 4.65 ಲಕ್ಷ ಪ್ರಯಾಣಿಕರನ್ನು ಪ್ರಯಾಣಿಸಬಹುದೆಂದು ಯೋಜಿಸುತ್ತಿದ್ದೇವೆ ಎಂದು ಅವರು ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com