ಹೂಡಿಕೆದಾರರ ಸಮಾವೇಶ ಆಯ್ತು; ಈಗ ಹೂಡಿಕೆಗಳ ಸಾಧಿಸುವತ್ತ ಸರ್ಕಾರ ಗಮನ!

ಇತ್ತೀಚೆಗೆ ನಡೆದ ಜಾಗತಿಕ ಹೂಡಿಕೆದಾರರ ಸಭೆ (ಜಿಐಎಂ) ಸುಮಾರು 10 ಲಕ್ಷ ಕೋಟಿ ಹೂಡಿಕೆಯನ್ನು ಆಕರ್ಷಿಸಿದ ನಂತರ, ರಾಜ್ಯ ಕೈಗಾರಿಕಾ ಇಲಾಖೆಯು ಹೂಡಿಕೆಗಳ ಸಾಧಿಸುವತ್ತ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ.
ಜಾಗತಿಕ ಹೂಡಿಕೆದಾರರ ಸಮಾವೇಶ.
ಜಾಗತಿಕ ಹೂಡಿಕೆದಾರರ ಸಮಾವೇಶ.

ಬೆಂಗಳೂರು: ಇತ್ತೀಚೆಗೆ ನಡೆದ ಜಾಗತಿಕ ಹೂಡಿಕೆದಾರರ ಸಭೆ (ಜಿಐಎಂ) ಸುಮಾರು 10 ಲಕ್ಷ ಕೋಟಿ ಹೂಡಿಕೆಯನ್ನು ಆಕರ್ಷಿಸಿದ ನಂತರ, ರಾಜ್ಯ ಕೈಗಾರಿಕಾ ಇಲಾಖೆಯು ಹೂಡಿಕೆಗಳ ಸಾಧಿಸುವತ್ತ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ.

ಈ ಸಂಬಂಧ ಮಾತನಾಡಿರುವ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು, ಹೂಡಿಕೆ ಪ್ರಸ್ತಾವನೆಗಳನ್ನು ವಿಭಜಿಸುವ ಪ್ರಕ್ರಿಯೆ ಆರಂಭವಾಗಿದೆ. 90 ದಿನಗಳಲ್ಲಿ ಹೂಡಿಕೆಗಳನ್ನು ಸಾಧಿಸುವ ಯೋಜನೆಯಲ್ಲಿ ಕೆಲಸ ಮಾಡುತ್ತೇವೆಂದು ಹೇಳಿದ್ದಾರೆ.

ಎಲ್ಲಾ ಪ್ರಸ್ತಾವನೆಗಳನ್ನು 90 ದಿನಗಳಲ್ಲಿ ನಿರ್ಧರಿಸಲು ಸರ್ಕಾರ ಉತ್ಸುಕವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಇಲಾಖೆಯು ವಿವಿಧ ಇಲಾಖೆಗಳೊಂದಿಗೆ ನಿಕಟ ಸಮನ್ವಯದಿಂದ ಕೆಲಸ ಮಾಡಲಿದೆ ಮತ್ತು ಪ್ರಸ್ತಾವನೆಗಳ್ನು ಹೆಚ್ಚು ಕಾಲ ಬಾಕಿ ಉಳಿಸಿಕೊಳ್ಳಳು ಸರ್ಕಾರವು ಅನುಮತಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಬಾರಿಯ ಜಾಗತಿಕ ಹೂಡಿಕೆದಾರರ ಸಮಾವೇಶ ಕಳೆದ ಬಾರಿಗಿಂತ ಭಿನ್ನವಾಗಿತ್ತು. ಈ ಬಾರಿ ಹೂಡಿಕೆಗಳಲ್ಲಿ ಹೆಚ್ಚಿನ ತಿಳುವಳಿಕಾ ಒಪ್ಪಂದಗಳು ಸಾಕಾರಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಉತ್ಸುಕವಾಗಿದೆ. ಕೈಗಾರಿಕಾ ಇಲಾಖೆ, ಇತರ ಇಲಾಖೆಗಳು ಮತ್ತು ಕಂಪನಿಗಳ ಸಂಯೋಜಕರು ಹೂಡಿಕೆ ಪ್ರಸ್ತಾಪಗಳನ್ನು ಪರಿಶೀಲಿಸಲು ಮತ್ತು ಭೂಮಿ, ನೀರು ಮತ್ತು ವಿದ್ಯುತ್‌ಗೆ ಅವರ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಲು ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಇದರಿಂದಾಗಿ ಸೂಕ್ತ ನಿರ್ಧಾರಗಳನ್ನು ಶೀಘ್ರವಾಗಿ ತೆಗೆದುಕೊಳ್ಳಬಹುದು ಎಂದು ನಿರಾಣಿ ಹೇಳಿದರು.

ನಾವು ಪ್ರಕ್ರಿಯೆಯನ್ನು ವೇಗಗೊಳಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ಸಿಎಂ ನಿರ್ದೇಶನದಂತೆ 90 ದಿನಗಳಲ್ಲಿ ಪೂರ್ಣಗೊಳಿಸುತ್ತೇವೆ" ಎಂದು ಹೇಳಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕೈಗಾರಿಕಾ ಅಭಿವೃದ್ಧಿ ಆಯುಕ್ತ ಗುಂಜನ್ ಕೃಷ್ಣ ಮಾತನಾಡಿ, ಈ ಬಾರಿ ಪರಿವರ್ತನೆಯು ತುಂಬಾ ಹೆಚ್ಚಾಗಿರುತ್ತದೆ. ಈಗಾಗಲೇ ಆ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಇಲಾಖೆಯು ಪ್ರತಿಯೊಂದು ಯೋಜನೆಗಳನ್ನು ಪರಿಶೀಲಿಸುತ್ತಿದೆ ಮತ್ತು ಪ್ರಕ್ರಿಯೆಯನ್ನು ವೇಗಗತಿಯಲ್ಲಿ ಕಾರ್ಯಗತಿಗೆ ತರಲಾಗುತ್ತದೆ ಎಂದು ಹೇಳಿದರು.

ಕೆಲವು ಯೋಜನೆಗಳು ಆರಂಭಿಕ ಹಂತದಲ್ಲಿವೆ, ಕೆಲವು ಯೋಜನೆಗಳಿಗೆ ಭೂಮಿ ಮತ್ತು ಕೆಲವು ಯೋಜನೆಗಳಿಗೆ ನೀತಿಯ ಚೌಕಟ್ಟಿನ ಅಗತ್ಯವಿರುತ್ತದೆ ಮತ್ತು ಅವುಗಳನ್ನು ಮುಂದುವರಿಸಲು ಕ್ರಮಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಕೈಗಾರಿಕಾ ಇಲಾಖೆಯ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಉನ್ನತ ಮಟ್ಟದ ಕ್ಲಿಯರೆನ್ಸ್ ಸಮಿತಿ (ಎಸ್‌ಎಚ್‌ಎಲ್‌ಸಿಸಿ) ಸಭೆಯು ಕೆಲವು ಹೂಡಿಕೆ ಪ್ರಸ್ತಾಪಗಳನ್ನು ತೆರವುಗೊಳಿಸಲು ಶೀಘ್ರದಲ್ಲೇ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಜಿಐಎಂ ಮೊದಲು, ಸರ್ಕಾರವು 2.83 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಪ್ರಸ್ತಾವನೆಗಳನ್ನು ತೆರವುಗೊಳಿಸಿತ್ತು. ಈ ತಿಂಗಳ ಆರಂಭದಲ್ಲಿ ಜಿಐಎಂ ಅವಧಿಯಲ್ಲಿ ರಾಜ್ಯವು 9.82 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಪ್ರಸ್ತಾವನೆಗಳನ್ನು ಸ್ವೀಕರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com