ಬೆಂಗಳೂರಿನಲ್ಲಿ ರ್‍ಯಾಪಿಡ್ ರಸ್ತೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ; ವೆಚ್ಚ ಕಡಿತಕ್ಕೆ ಅಧಿಕಾರಿಗಳಿಗೆ ನಿರ್ದೇಶನ

 ಬಿಬಿಎಂಪಿಯಿಂದ ಸಿ.ವಿ. ರಾಮನ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ  ಪ್ರಾಯೋಗಿಕವಾಗಿ ನಿರ್ಮಿಸಿರುವ  ರ್‍ಯಾಪಿಡ್ ರಸ್ತೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಉದ್ಘಾಟಿಸಿದರು.
ರ್‍ಯಾಪಿಡ್ ರಸ್ತೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
ರ್‍ಯಾಪಿಡ್ ರಸ್ತೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಭಿನ್ನಮಂಗಲ ಜಂಕ್ಷನ್ ನಲ್ಲಿ  ಬಹುನಿರೀಕ್ಷಿತ ರ್‍ಯಾಪಿಡ್ ರಸ್ತೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಉದ್ಘಾಟಿಸಿದರು. ಕಾಮಗಾರಿ ವೆಚ್ಚ ಕಡಿಮೆಯಿರಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು. 

ಭಿನ್ನಮಂಗಲ, ಇಂದಿರಾ ನಗರ ಜಂಕ್ಷನ್ ನ 100 ಅಡಿ ರಸ್ತೆ ಮತ್ತು ಹಳೆ ಮದ್ರಾಸ್ ರಸ್ತೆ ನಡುವಣ ಕೈಗೆತ್ತಿಕೊಂಡಿರುವ ರ್‍ಯಾಪಿಡ್ ರಸ್ತೆ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ, ವೈಟ್ ಟಾಪಿಂಗ್ ಯೋಜನೆಗೆ ಹೋಲಿಸಿದರೆ ಇದರಲ್ಲಿ ವೇಗವಾಗಿ ಕೆಲಸವಾಗಲಿದೆ. ಪ್ರಾಯೋಗಿಕವಾಗಿ ಅನುಷ್ಠಾನಗೊಂಡಿರುವ ಯೋಜನೆಯನ್ನು 15 ದಿನಗಳ ಕಾಲ ಪರಿಶೀಲಿಸಲಾಗುತ್ತದೆ. ಸುಮಾರು 20 ಟನ್ ಭಾರವುಳ್ಳ ವಾಹನಗಳು ಈ ರಸ್ತೆ ಮೇಲೆ ಸಂಚರಿಸಬಹುದು. ಪ್ರಿ ಕಾಸ್ಟ್ ತಂತ್ರಜ್ಞಾನ ಬಳಸಿ ಈ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ವೈಟ್ ಟಾಪಿಂಗ್ ಗೆ ಹೋಲಿಸಿದರೆ ವೆಚ್ಚ ಹೆಚ್ಚಾಗಿದ್ದು, ವೆಚ್ಚ ಕಡಿಮೆ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಈ  ಬಗ್ಗೆ ವರದಿ ಸಲಿಸಲು ನಿರ್ದೇಶಿಸಲಾಗಿದೆ ಎಂದರು. 

ಬೆಂಗಳೂರಿನ ರಸ್ತೆ ನಿರ್ಮಾಣ ಮಾಡುವ ಸಂದರ್ಭಗಳಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೆವು. ವೈಟ್ ಟಾಪಿಂಗ್ ಬಹಳ ಸಮಯ ತೆಗೆದುಕೊಳ್ಳುತ್ತದೆ. ಒಂದು ಬಾರಿ ವೈಟ್ ಟಾಪಿಂಗ್ ಆದ ನಂತರ ಸಮಸ್ಯೆ ಉಂಟಾದಲ್ಲಿ ಮತ್ತೆ ಅದನ್ನು ಒಡೆದು ತೆಗೆಯುವುದು ದೊಡ್ಡ ಆತಂಕದ ಕೆಲಸ. ಹೀಗಾಗಿ ರ್‍ಯಾಪಿಡ್ ತಂತ್ರಜ್ಞಾನ ಬಂದಿದೆ. ಭಾರಿ ವಾಹನಗಳ ಸಂಚಾರದಿಂದ ಆಗುವ ಪರಿಣಾಮಗಳ ಬಗ್ಗೆ ಸಂಪೂರ್ಣ ವರದಿ ಕೇಳಲಾಗಿದೆ. ರಸ್ತೆ ಗುಣಮಟ್ಟವಿರಬೇಕು ಹಾಗೂ ವೆಚ್ಚವೂ ಸೂಕ್ತವಾಗಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಗೊಂಡಿದ್ದು, ಕಡಿಮೆ ವೆಚ್ಚದಲ್ಲಿ ಆಗುವುದಾದರೆ ಬೆಂಗಳೂರಿನ ಇತರ ಸಂಚಾರ ದಟ್ಟಣೆಯುಳ್ಳ, ಕ್ಷಿಪ್ರವಾಗಿ ರಸ್ತೆಯಾಗಬೇಕಿರುವ ಸ್ಥಳಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. 

ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಗೊಂಡಿದ್ದು, ಕಡಿಮೆ ವೆಚ್ಚದಲ್ಲಿ ಆಗುವುದಾದರೆ ಬೆಂಗಳೂರಿನ ಇತರ ಸಂಚಾರ ದಟ್ಟಣೆಯುಳ್ಳ, ಕ್ಷಿಪ್ರವಾಗಿ ರಸ್ತೆಯಾಗಬೇಕಿರುವ ಸ್ಥಳಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. 

ಬಿಬಿಎಂಪಿ ಪ್ರಕಾರ, ವೈಟ್ ಟಾಪಿಂಗ್ ಕೆಲಸಕ್ಕೆ ಹೋಲಿಸಿದಾಗ 1 ಕಿ.ಮೀ. ಕೆಲಸಕ್ಕೆ ಶೇ. 20 ಕ್ಕಿಂತಲೂ ಹೆಚ್ಚಾಗಿದೆ. ಅಲ್ಲದೇ ಇದಕ್ಕೆ ತೆಗೆದುಕೊಳ್ಳುವ ಸಮಯವೂ ಹೆಚ್ಚಾಗಿದೆ. ಬೆಂಗಳೂರಿನಂತಹ ಸಂಚಾರ ದಟ್ಟಣೆ ಹೆಚ್ಚಾಗಿರುವ ನಗರಗಳಿಗೆ ರ್‍ಯಾಪಿಡ್ ರಸ್ತೆ ಉತ್ತಮ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಎನ್ ಜಿಇಎಫ್, ಬೈಯಪ್ಪನಹಳ್ಳಿ ಮತ್ತು ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ  ಬಿಬಿಎಂಪಿ ಈ ಮಾರ್ಗದಲ್ಲಿ ರ್‍ಯಾಪಿಡ್ ರಸ್ತೆ ಮಾಡುತ್ತಿದೆ. 

ಪ್ರತಿ ಕಿಲೋ ಮೀಟರ್ ರ್‍ಯಾಪಿಡ್  ರಸ್ತೆಗೆ ರೂ. 9 ಕೋಟಿ ವೆಚ್ಚ ವಾಗುತ್ತಿದ್ದು, ವೈಟ್ ಟಾಪಿಂಗ್ ಗೆ ಹೋಲಿಸಿದರೆ ಶೇ. 20ಕ್ಕಿಂತಲೂ ಹೆಚ್ಚು ವೆಚ್ಚವಾಗುತ್ತಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com