ಬೆಂಗಳೂರು: ಮಹಿಳೆಯ ಗರ್ಭಾಶಯದಿಂದ 2 ಕೆಜಿ ಫೈಬ್ರಾಯ್ಡ್ ಹೊರತೆಗೆದ ವೈದ್ಯರು!

24 ವರ್ಷದ ಮಹಿಳೆಯೊಬ್ಬರಿಗೆ ಗರ್ಭಾಶಯದಲ್ಲಿದ್ದ ಸುಮಾರು 2 ಕೆಜಿ ತೂಕದ ಗಾತ್ರದ ಫೈಬ್ರಾಯ್ಡ್'ನ್ನು ವೈದ್ಯರು ಆಪರೇಷನ್ ಮಾಡಿ ಹೊರ ತೆಗೆದು ಮಹಿಳೆಗೆ ಪುನರ್ಜನ್ಮ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 24 ವರ್ಷದ ಮಹಿಳೆಯೊಬ್ಬರಿಗೆ ಗರ್ಭಾಶಯದಲ್ಲಿದ್ದ ಸುಮಾರು 2 ಕೆಜಿ ತೂಕದ ಗಾತ್ರದ ಫೈಬ್ರಾಯ್ಡ್'ನ್ನು ವೈದ್ಯರು ಆಪರೇಷನ್ ಮಾಡಿ ಹೊರ ತೆಗೆದು ಮಹಿಳೆಗೆ ಪುನರ್ಜನ್ಮ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕಳೆದ ಆರು ತಿಂಗಳಿನಿಂದ, ಮಹಿಳೆಯು ದಣಿವು, ಉಸಿರಾಟದ ತೊಂದರೆ, ಉಬ್ಬಿದ ಹೊಟ್ಟೆ ಹಾಗೂ ಇತರೆ ರೋಗಲಕ್ಷಣಗಳಿಂದ ಬಳಲುತ್ತಿದ್ದರು. ಆದಾಗ್ಯೂ, ತನ್ನ ಮದುವೆ ಸಿದ್ಧತೆಗಳು ಮುಂದುವರೆದಿದ್ದ ಹಿನ್ನೆಲೆಯಲ್ಲಿ ಈ ಲಕ್ಷಣಗಳನ್ನು ನಿರ್ಲಕ್ಷಿಸಿದ್ದರು.

ಮದುವೆ ಸಿದ್ಧತೆಗಳ ನಡುವಲ್ಲೇ ಒಂದು ದಿನ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿಮೋಗ್ಲೋಬಿನ್ ಮಟ್ಟವು 3 (ಸಾಮಾನ್ಯ ಮಟ್ಟವು 11)ಕ್ಕೆ ಇಳಿದಿರುವ ಜೊತೆಗೆ ತೀವ್ರ ರಕ್ತಹೀನತೆಯಿಂದ ಮಹಿಳೆ ಬಳಲುತ್ತಿರುವುದು ಈ ವೇಳೆ ಕಂಡುಬಂದಿತ್ತು.

ಬಳಿಕ ಹೆಚ್ಚಿನ ಪರೀಕ್ಷೆ ವೇಳೆ ಮಹಿಳೆಯ ಗರ್ಭಾಶಯದಲ್ಲಿ ದೊಡ್ಡ ಗಾತ್ರದ ಫೈಬ್ರಾಯ್ಡ್ ಇರುವುದು ಪತ್ತೆಯಾಗಿತ್ತು, ಆಕೆಯ ಗರ್ಭಾಶಯವು ಸುಮಾರು ಎಂಟು ತಿಂಗಳ ಗರ್ಭಿಣಿ ಮಹಿಳೆಯಂತೆ ಕಾಣುತ್ತಿತ್ತು.

ಇದೀಗ ನಗರದ ಖಾಸಗಿ ಆಸ್ಪತ್ರೆಯು ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಗರ್ಭಾಶಯದಿಂದ 2 ಕೆಜಿ ಫೈಬ್ರಾಯ್ಡ್'ನ್ನು ಹೊರತೆಗೆದಿದೆ.

ಎರಡು ದಿನಗಳಲ್ಲಿ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಪ್ರಸೂತಿ, ಸ್ತ್ರೀರೋಗ ತಜ್ಞ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜನ್ ಡಾ.ಶ್ವೇತಾ ಎಸ್ ಕಾಮತ್ ಹೇಳಿದ್ದಾರೆ.

ಫೈಬ್ರಾಯ್ಡ್ ಅನ್ನು ಸಣ್ಣ ಛೇದನದ ಮೂಲಕ ಲ್ಯಾಪರೊಸ್ಕೋಪಿಕ್ ಮೂಲಕ ತೆಗೆದುಹಾಕಲಾಯಿತು, ಇದರಿಂದ ಮಹಿಳೆ ವೇಗವಾಗಿ ಚೇತರಿಸಿಕೊಳ್ಳಲಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com