ಮಾಂಡೌಸ್ ಎಫೆಕ್ಟ್: ನಗರದ ಮಾರುಕಟ್ಟೆಗಳಲ್ಲಿ ವ್ಯಾಪಾರ ಶೇ.80ರಷ್ಟು ಕುಸಿತ

ಮಾಂಡೌಸ್ ಚಂಡಮಾರುತವು ಬೆಂಗಳೂರಿನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ. ನಿರಂತರ ಮಳೆ ಮತ್ತು ಶೀತ ಹವಾಮಾನದಿಂದಾಗಿ ಕಳೆದ ನಾಲ್ಕು ದಿನಗಳಿಂದ ನಗರದ ಮಾರುಕಟ್ಟೆಗಳಲ್ಲಿನ ವ್ಯಾಪಾರವು ಶೇ.80 ರಷ್ಟು ಕುಸಿತ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾಂಡೌಸ್ ಚಂಡಮಾರುತವು ಬೆಂಗಳೂರಿನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ. ನಿರಂತರ ಮಳೆ ಮತ್ತು ಶೀತ ಹವಾಮಾನದಿಂದಾಗಿ ಕಳೆದ ನಾಲ್ಕು ದಿನಗಳಿಂದ ನಗರದ ಮಾರುಕಟ್ಟೆಗಳಲ್ಲಿನ ವ್ಯಾಪಾರವು ಶೇ.80 ರಷ್ಟು ಕುಸಿತ ಕಂಡಿದೆ.

ಸಾಮಾನ್ಯವಾಗಿ, ಡಿಸೆಂಬರ್‌ನಲ್ಲಿ ವ್ಯಾಪಾರಿಗಳು ಉತ್ತಮ ವ್ಯಾಪಾರ ಮಾಡುತ್ತಿದ್ದರು. ಈ ತಿಂಗಳಿನಲ್ಲಿ ಕ್ರಿಸ್‌ಮಸ್‌ ಇರುವ ಹಿನ್ನೆಲೆಯಲ್ಲಿ ಜನರು ಉಡುಗೊರೆ ವಸ್ತುಗಳನ್ನು ಖರೀದಿಸುತ್ತಿದ್ದರು. ಆದರೆ ಚಂಡಮಾರುತದ ಪರಿಣಾಮ ಖರೀದಿಯಲ್ಲಿ ಕುಸಿತ ಕಂಡುಬಂದಿದೆ.

ಕೃಷ್ಣರಾಜೇಂದ್ರ ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಜಿ.ಎನ್.ದಿವಾಕರ್ ಮಾತನಾಡಿ, ‘ಮಾರುಕಟ್ಟೆಯ ಹಲವು ಅಂಗಡಿಗಳಲ್ಲಿ ವ್ಯಾಪಾರ ಬಹುತೇಕ ಶೂನ್ಯವಾಗಿದೆ. ಮಾರುಕಟ್ಟೆಯಲ್ಲಿ 25ಕ್ಕೂ ಹೆಚ್ಚು ವಿವಿಧ ರೀತಿಯ ವ್ಯಾಪಾರವನ್ನು ನಡೆಸಲಾಗುತ್ತಿದೆ, 2,100 ಮಳಿಗೆಗಳಿಗಳಿದ್ದು, 25,000 ವ್ಯಾಪಾರಿಗಳಿದ್ದಾರೆ. ಆದರೆ, ಮಳೆಯ ಪರಿಣಾಮ ಶುಕ್ರವಾರದಿಂದ ವ್ಯಾಪಾರಕ್ಕೆ ಭಾರೀ ಹೊಡೆತ ಬಿದ್ದಿದೆ. ವ್ಯಾಪಾರದಲ್ಲಿ ಶೇ.80ರಷ್ಟು ಕುಸಿತ ಕಂಡು ಬಂದಿದೆ ಎಂದು ಹೇಳಿದ್ದಾರೆ.

ರಸೆಲ್ ಮಾರ್ಕೆಟ್‌ನಲ್ಲಿ 471 ಮಳಿಗೆಗಳು ಮತ್ತು ಶಿವಾಜಿನಗರದ ಇತರ ಏಳು ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು ತೀವ್ರ ಸಮಸ್ಯೆ ಅನುಭವಿಸಿದ್ದಾರೆ ಎಂದು ಮಹಮ್ಮದ್ ಇದ್ರೀರ್ ಚೌದ್ರಿ ಹೇಳಿದರು.

ಈ ಪ್ರದೇಶಗಳಲ್ಲಿ, ಅನೇಕ ಬೀದಿ ವ್ಯಾಪಾರಿಗಳಿದ್ದಾರೆ, ಅಲ್ಲಿ ಅವರು ಮೀನು ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಆದರೆ ಮಳೆಯಿಂದಾಗಿ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮಳೆ ಸುರಿದಾಗ ಜನರು ನಿಂತುಕೊಳ್ಳಲು ಬಿಬಿಎಂಪಿ ಆಶ್ರಯ ತಾಣವನ್ನು ನಿರ್ಮಿಸಬೇಕು. ಇದರಿಂದ ಮಳೆ ನಿಲ್ಲುವವರೆಗೂ ಜನರು ಅಲ್ಲಿ ನಿಂತು ನಂತರ ಖರೀದಿ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಮಡಿವಾಳ ತರಕಾರಿ ಮಾರುಕಟ್ಟೆಯಲ್ಲಿ ಹೊಸಕೋಟೆ, ಆನೇಕಲ್, ಹೊಸೂರು, ಮಾಲೂರು, ಚನ್ನಸಂದ್ರ, ಕೋಲಾರ, ಕನಕಪುರ ಭಾಗದ ರೈತರು ಮಳೆಯಿಂದಾಗಿ ಇಲ್ಲಿಗೆ ತಮ್ಮ ಉತ್ಪನ್ನಗಳನ್ನು ತರಲು ಸಾಧ್ಯವಾಗುತ್ತಿಲ್ಲ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.

“ಸರಬರಾಜು ಕಡಿಮೆಯಾಗಿದೆ ಮತ್ತು ಕಳೆದ ನಾಲ್ಕು ದಿನಗಳಿಂದ ಗ್ರಾಹಕರಿಲ್ಲ. ಮಾರುಕಟ್ಟೆಯಲ್ಲಿ ಸುಮಾರು 300 ವರ್ತಕರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಮಡಿವಾಳ ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಎ ಪ್ಯಾರೇಜನ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com