ಬಿಆರ್‌ಟಿಯಲ್ಲಿ ಅನುಮಾನಸ್ಪಾದವಾಗಿ ಗಂಡು ಹುಲಿ ಸಾವು

ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಂಡು ಹುಲಿಯೊಂದು ಶವವಾಗಿ ಪತ್ತೆಯಾಗಿರುವುದು ಸಂರಕ್ಷಕರಲ್ಲಿ ಹಲವು ಪ್ರಶ್ನೆಗಳು ಮತ್ತು ಅನುಮಾನಗಳನ್ನು ಹುಟ್ಟುಹಾಕಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಂಡು ಹುಲಿಯೊಂದು ಶವವಾಗಿ ಪತ್ತೆಯಾಗಿರುವುದು ಸಂರಕ್ಷಕರಲ್ಲಿ ಹಲವು ಪ್ರಶ್ನೆಗಳು ಮತ್ತು ಅನುಮಾನಗಳನ್ನು ಹುಟ್ಟುಹಾಕಿದೆ.

ಕೊಳ್ಳೇಗಾಲ ವನ್ಯಜೀವಿ ವಲಯದ ಜಲಮೂಲದ ಬಳಿ ಶನಿವಾರ ಗಸ್ತು ತಿರುಗುತ್ತಿದ್ದ ತಂಡಕ್ಕೆ ಹುಲಿಯ ಶವ ದೊರೆತಿದೆ.

5-7 ವರ್ಷ ವಯಸ್ಸಿನ ಗಂಡು ಹುಲಿ ಇದಾಗಿದ್ದು, ಹುಲಿಯ ಕಣ್ಣು ಮತ್ತು ಮುಖದ ಮೇಲೆ ತೀವ್ರ ಗಾಯಗಳಾಗಿರುವುದು ಕಂಡು ಬಂದಿದೆ. ಮತ್ತೊಂದು ಪ್ರಾಣಿಯ ಜೊತೆಗೆ ಕಾದಾಡಿ ಹುಲಿ ಸತ್ತಿರಬಹುದು ಎಂದು ಕರ್ನಾಟಕ ಅರಣ್ಯ ಅಧಿಕಾರಿಗಳು ಹೇಳಿದ್ದಾರೆ,

ಆದರೆ ಸಂರಕ್ಷಣಾಕಾರರು ಮತ್ತು ಕಾರ್ಯಕರ್ತರು ಇದನ್ನು ನಿರಾಕರಿಸಿದ್ದು, ವಿಷ ಅಥವಾ ಬೇಟೆ ಕಾರಣದಿಂದ ಹುಲಿ ಸತ್ತಿರಬಹುದು. ಆದರೆ, ಈ ವಿಚಾರ ಕುರಿತು ಅರಣ್ಯ ಇಲಾಖೆ ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸುತ್ತಿಲ್ಲ. ಇಲಾಖೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಹುಲಿಯ ಮರಣೋತ್ತರ ಪರೀಕ್ಷೆಯದ ವರದಿಗಳಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ನಡುವೆ ವೈದ್ಯರು ಬೇಟೆಯಾಡಿರುವ, ವಿಷ ಹಾಕಿರುವ ಶಂಕೆಗಳನ್ನು ತಳ್ಳಿಹಾಕಿದ್ದಾರೆ. ಹುಲಿಯ ಎಲ್ಲಾ ಕೋರೆ ಹಲ್ಲುಗಳು, ಉಗುರುಗಳು ಹಾಗೂ ಚರ್ಮ ಸಾಮಾನ್ಯವಾಗಿದ್ದು, ನಾಲಿಗೆ ಕಪ್ಪಾಗದ ಕಾರಣ ವಿಷ ಹಾಕಿರುವ ಸಾಧ್ಯತೆಗಳೂ ಕಡಿಮೆ ಇದೆ. ಶವ ಪತ್ತೆಯಾದ ನೀರಿನ ಜಲಮೂಲದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಬಿಆರ್‌ಟಿ ನಿರ್ದೇಶಕ ದೀಪ್ ಜೆ ಗುತ್ತಿಗೆದಾರ ಹೇಳಿದ್ದಾರೆ.

ಪ್ರಾಥಮಿಕ ಪರೀಕ್ಷಾ ವರದಿಯಲ್ಲಿ ಹುಲಿಯ ಹೊಟ್ಟೆ ಖಾಲಿಯಾಗಿದ್ದದ್ದು, ಹಸಿವಿನಿಂದ ಬಳಲುತ್ತಿದ್ದದ್ದು ಹಾಗೂ 10 ದಿನಗಳಿಂದ ಏನನ್ನೂ ತಿನ್ನದೇ ಇರುವುದು ಕಂಡು ಬಂದಿದೆ ಎಂದು ತಿಳಿದುಬಂದಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಹುಲಿ ಸಾವನ್ನಪ್ಪಿದ ಮೊದಲ ಘಟನೆ ಇದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com