2ಎ ಮೀಸಲಾತಿಗೆ ಆಗ್ರಹ: ಪಂಚಮಸಾಲಿಗಳ ವಿರುದ್ಧ ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟ ಪ್ರತಿಭಟನೆ

2ಎ ಮೀಸಲಾತಿಗೆ ಆಗ್ರಹಿಸುತ್ತಿರುವ ಪಂಚಮಸಾಲಿ ಲಿಂಗಾಯತರ ವಿರುದ್ಧ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ಡಿ.26ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಧರಣಿ ನಡೆಸಲು ಮುಂದಾಗಿದ್ದಾರೆ.
ಪಂಚಮಸಾಲಿ
ಪಂಚಮಸಾಲಿ

ಬೆಂಗಳೂರು: 2ಎ ಮೀಸಲಾತಿಗೆ ಆಗ್ರಹಿಸುತ್ತಿರುವ ಪಂಚಮಸಾಲಿ ಲಿಂಗಾಯತರ ವಿರುದ್ಧ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ಡಿ.26ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಧರಣಿ ನಡೆಸಲು ಮುಂದಾಗಿದ್ದಾರೆ.

ಪ್ರತಿಭಟನೆಯಲ್ಲಿ ಕೈಜೋಡಿಸುವಂತೆ ಒಕ್ಕೂಟವು ರಾಜ್ಯಾದ್ಯಂತ ಎಲ್ಲಾ ಸದಸ್ಯರಿಗೆ ಮನವಿ ಮಾಡಿಕೊಂಡಿದೆ.

“ಪಂಚಮಸಾಲಿಗಳು 3ಬಿ ಅಡಿಯಲ್ಲಿ ಮೀಸಲಾತಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಶೇ,50ರಷ್ಟು ಸಾಮಾನ್ಯ ಮೀಸಲಾತಿಯನ್ನು ಬಳಸುವ ಅವಕಾಶವನ್ನು ಹೊಂದಿರುವಾಗ, 104 ಜಾತಿಗಳು ಹಂಚಿಕೊಂಡಿರುವ 2ಎ ಮೀಸಲಾತಿಯನ್ನೇಕೆ ಬಯಸುತ್ತಿದ್ದಾರೆಂದು ಒಕ್ಕೂಟದ ಸದಸ್ಯರು ಪ್ರಶ್ನಿಸಿದ್ದಾರೆ.

ಪಂಚಮಸಾಲಿಗಳಿಗೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಸರ್ಕಾರ ನೀಡಲು ಮುಂದಾಗಿದ್ದೇ ಅದರೆ, ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಒಕ್ಕೂಟ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್ ವೆಂಕಟರಾಮಯ್ಯ ಅವರು ಹೇಳಿದ್ದಾರೆ.

ಯಾವುದೇ ವೈಜ್ಞಾನಿಕ ಅಧ್ಯಯನ ನಡೆಸದೆ ಸರ್ಕಾರ ಮೀಸಲಾತಿಯನ್ನು ಅವರಿಗೆ ನೀಡಿದ್ದೇ ಆದರೆ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದೇ ವೇಳೆ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜು ನೇತೃತ್ವದ ಸಮಿತಿ ನಡೆಸಿದ ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು ಸರ್ಕಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಕರ್ನಾಟಕವು ಮೀಸಲಾತಿಯನ್ನು ಮರು ವರ್ಗೀಕರಿಸುವ ಮೊದಲು ವೈಜ್ಞಾನಿಕ ಅಧ್ಯಯನಗಳನ್ನು ನಡೆಸಬೇಕು. ಆದರೆ ಸ್ಥಿತಿವಂತ ಸಮುದಾಯಗಳು ರಾಜಕೀಯ ಕಾರಣಗಳಿಗಾಗಿ ಪ್ರವರ್ಗ 1 ಮತ್ತು 2 ರ ಅಡಿಯಲ್ಲಿ ಮೀಸಲಾತಿಯನ್ನು ಪಡೆದುಕೊಳ್ಳುತ್ತಿವೆ ಎಂದು ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ತಿಳಿಸಿದ್ದಾರೆ.

“ಪ್ರವರ್ಗ 1 ರ ಅಡಿಯಲ್ಲಿ, 4 ಶೇಕಡಾ ಮೀಸಲಾತಿಗೆ 95 ಜಾತಿಗಳಿವೆ, ಆದರೆ 2ಎಗೆ 104 ಜಾತಿಗಳಿವೆ. ಶೇ.15 ಮೀಸಲಾತಿಯನ್ನು ಮಾತ್ರ ಈ ಜಾತಿಗಳು ಪಡೆಯುತ್ತಿವೆ, ಅದಕ್ಕಾಗಿಯೇ ಪಂಚಮಸಾಲಿಗಳು ಆ ಮೀಸಲಾತಿಯನ್ನೂ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ವಾಸ್ತವವಾಗಿ, ಇದು ವಂಚಿತರಾದ ಕುಶಲಕರ್ಮಿಗಳ ಸಮುದಾಯಕ್ಕೆ ಹೋಗಬೇಕು. ವೈಜ್ಞಾನಿಕ ಅಧ್ಯಯನವಿಲ್ಲದೆ ಮೀಸಲಾತಿಗಳು ಮರು ವಿಂಗಡಣೆ ಮಾಡುವುದು ತಪ್ಪು' ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾಂತ್ ಹೇಳಿದರು.

ಈ ನಡುವೆ ಹೇಳಿಕೆ ನೀಡಿರುವ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮಿಗಳು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಪ್ರಕಟಿಸಿದರೆ ಅವರನ್ನು ಗುರುವಾರ ಸನ್ಮಾನಿಸುತ್ತೇವೆ. ಇಲ್ಲದಿದ್ದರೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಸಿದ್ದಾರೆ.

ಬುಧವಾರ ಸುವರ್ಣಸೌಧ ಸಮೀಪದ ಬಸ್ತವಾಡ ಗ್ರಾಮದ ‘ವಿರಾಟ್ ಪಂಚಶಕ್ತಿ ಪಂಚಮಸಾಲಿ ಸಮಾವೇಶ’ದಲ್ಲಿ ಸ್ವಾಮೀಜಿಗಳು ಮಾತನಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com