ಮೈಸೂರು: ಪಾರಂಪರಿಕ ಕಟ್ಟಡಗಳ ರಕ್ಷಣಾ ಕಾರ್ಯಕ್ಕೆ ಬಳಸುವ ಕಟ್ಟಡವೇ ಶಿಥಿಲಾವಸ್ಥೆಯಲ್ಲಿ!

ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳನ್ನು ಹೇಗೆ ಸಂರಕ್ಷಿಸಬೇಕು ಎಂಬ ಬಗ್ಗೆ ಚರ್ಚಿಸಲು ಅಧಿಕಾರಿಗಳು ಸಭೆ ನಡೆಸುತ್ತಿದ್ದ 127 ವರ್ಷಗಳಷ್ಟು ಹಳೆಯದಾದ ಕಟ್ಟಡವೇ ನಿರ್ವಹಣೆಯಿಲ್ಲದೆ ಶಿಥಿಲಾವಸ್ಥೆ ತಲುಪಿದೆ.
ಶಿಥಿಲಾವಸ್ಥೆ ತಲುಪಿರುವ ಕಟ್ಟಡ.
ಶಿಥಿಲಾವಸ್ಥೆ ತಲುಪಿರುವ ಕಟ್ಟಡ.

ಮೈಸೂರು: ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳನ್ನು ಹೇಗೆ ಸಂರಕ್ಷಿಸಬೇಕು ಎಂಬ ಬಗ್ಗೆ ಚರ್ಚಿಸಲು ಅಧಿಕಾರಿಗಳು ಸಭೆ ನಡೆಸುತ್ತಿದ್ದ 127 ವರ್ಷಗಳಷ್ಟು ಹಳೆಯದಾದ ಕಟ್ಟಡವೇ ನಿರ್ವಹಣೆಯಿಲ್ಲದೆ ಶಿಥಿಲಾವಸ್ಥೆ ತಲುಪಿದೆ.

ಈ ಕಟ್ಟಡವು ಜಿಲ್ಲಾಧಿಕಾರಿಗಳ (ಡಿಸಿ) ಕಚೇರಿಯನ್ನು ಹೊಂದಿದ್ದು, ಇಲ್ಲಿ ಮೈಸೂರು ಜಿಲ್ಲಾ ಪರಂಪರೆ ಸಮಿತಿಯು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಪಾರಂಪರಿಕ ರಚನೆಗಳ ನಿರ್ವಹಣೆ ಮತ್ತು ನವೀಕರಣದ ಬಗ್ಗೆ ಚರ್ಚಿಸಲು ಸಭೆಗಳನ್ನು ನಡೆಸುತ್ತದೆ.

ಈ ಸಮಿತಿಯು ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಪಾರಂಪರಿಕ ತಜ್ಞರನ್ನು ಕೂಡ ಒಳಗೊಂಡಿದೆ. ವರ್ಷಾನುಗಟ್ಟಲೆ ನಿರ್ವಹಣೆ ಕೊರತೆಯಿಂದಾಗಿ ಕಟ್ಟಡದ ಗೋಡೆಗಳ ಒಳಗೆ ಬೃಹತ್ ಗಾತ್ರದ ಗಿಡಗಳು ಹಾಗೂ ಕಳೆಗಳು ಬೆಳೆದಿದ್ದು, ಇದರಿಂದ ಬಿರುಕು ಬಿಟ್ಟಿದೆ.

ಇದರಿಂದಾಗಿ ಪಾರಂಪರಿಕ ಕಟ್ಟಡದಲ್ಲಿರುವ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು ಸಿಬ್ಬಂದಿಯ ಜೀವ ಅಪಾಯದಲ್ಲಿದೆ.

ಮೈಸೂರು ಜಿಲ್ಲಾ ಪರಂಪರೆ ಸಮಿತಿ ಸದಸ್ಯ ಪ್ರೊ.ಎನ್.ಎಸ್.ರಂಗರಾಜು ಅವರು ಮಾತನಾಡಿ, ಗುಮ್ಮಟದ ಮೇಲಿನ ಕಲಶದ ಸುತ್ತಲಿನ ಪ್ಲಾಸ್ಟರ್‌ ಕಳಚಿ ಎರಡು ವರ್ಷಗಳೇ ಕಳೆದಿವೆ. ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

27 ಕೊಠಡಿಗಳೊಂದಿಗೆ ಎರಡು ಅಂತಸ್ತಿರುವ ಡಿಸಿ ಕಚೇರಿಯನ್ನು 1895 ರಲ್ಲಿ ಮೈಸೂರು ಮಹಾರಾಜರು ನಿರ್ಮಿಸಿದ್ದರು, ಈ ಕಟ್ಟಡದಲ್ಲಿ ಮೈಸೂರು ಪ್ರತಿನಿಧಿಗಳು ಸಭೆಗಳನ್ನು ನಡೆಯುತ್ತಿದ್ದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಬನ್ನೂರು ರಸ್ತೆಯ ಸಿದ್ದಾರ್ಥ ಲೇಔಟ್‌ನಲ್ಲಿ ನೂತನ ಜಿಲ್ಲಾ ಕಚೇರಿ ಸಂಕೀರ್ಣ ನಿರ್ಮಿಸಿದ್ದರೂ, ನೂತನ ಕಟ್ಟಡಕ್ಕೆ ಇನ್ನೂ ಕಚೇರಿ ಸ್ಥಳಾಂತರವಾಗಿಲ್ಲ.

ಗುಮ್ಮಟದ ಮೇಲೆ ಬೆಳೆಯುತ್ತಿರುವ ಹೆಚ್ಚಿನ ಸಸ್ಯಗಳು ಅರಳಿ ಮರ ಜಾತಿಗೆ ಸೇರಿದ್ದಾಗಿದೆ. ಇವುಗಳ ಬೀಜಗಳನ್ನು ಪಕ್ಷಿಗಳನ್ನು ಆಕರ್ಷಿಸುತ್ತವೆ. ಕಟ್ಟಡದಲ್ಲಿ ಮಳೆ ನೀರು ನಿಲ್ಲಲು ಆರಂಭಿಸಿದಾಗ ಗಿಡಗಳು ಬೆಳೆಯಲಾರಂಭಿಸಿದ್ದವು. ಮರಳು ಮತ್ತು ತೇವಾಂಶವು ಬೇರುಗಳನ್ನು ಗೋಡೆಗಳ ಒಳಗೆ ಹರಡಲು ದಾರಿ ಮಾಡಿಕೊಟ್ಟಿದೆ. ನಿರ್ವಹಣೆ ಕೆಲಸ ಮಾಡುವಾಗ, ಕಾರ್ಮಿಕರು ಸಸ್ಯಗಳ ಹೊರ ಭಾಗವನ್ನೂ ಮಾತ್ರ ತೆಗೆದುಹಾಕುತ್ತಾರೆ. ಆದರೆ, ಗೋಡೆಗಳ ಒಳಗೆ ಬೇರುಗಳು ಆಳವಾಗಿ ಬೆಳೆದಿದ್ದು, ಇದು ಮತ್ತೆ ಸಸ್ಯಗಳು ಬೆಳೆಯುವಂತೆ ಮಾಡುತ್ತವೆ ಎಂದು ರಂಗರಾಜು ತಿಳಿಸಿದ್ದಾರೆ.

ಕಟ್ಟಡದ ಮೇಲೆ 4ರಿಂದ 5 ಅಡಿ ಎತ್ತರಕ್ಕೆ ಗಿಡಗಳು ಬೆಳೆದಿವೆ. ಬೇರುಗಳನ್ನು ತೆಗೆಯದಿದ್ದರೆ ಕಟ್ಟಡಕ್ಕೆ ಅಪಾಯವಿದೆ ರಂಗರಾಜು ಆತಂಕ ವ್ಯಕ್ತಪಡಿಸಿದ್ದಾರೆ.

ಮೈಸೂರು ನೇಚರ್ ಗ್ರೂಪ್ ಸದಸ್ಯ ಎಸ್ ಶೈಲಜೇಶ್ ಅವರು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ನಿರ್ವಹಣೆ ಇಲ್ಲದ ಕಾರಣ ಡಿಸಿ ಕಚೇರಿ ಕಟ್ಟಡದಲ್ಲಿ ಗಿಡಗಳು ಬೆಳೆಯುತ್ತಿವೆ ಎಂದಿದ್ದಾರೆ.

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಒಂದು ಭಾಗ ಇತ್ತೀಚೆಗೆ ಕುಸಿದ ಹಿನ್ನೆಲೆಯಲ್ಲಿ ಪ್ರೊ.ಎನ್.ಎಸ್.ರಂಗರಾಜು ನೇತೃತ್ವದ ಮೈಸೂರು ಜಿಲ್ಲಾ ಪರಂಪರೆ ಸಮಿತಿಯು ನಗರದ ಎಲ್ಲಾ ಪಾರಂಪರಿಕ ಕಟ್ಟಡಗಳ ಪರಿಶೀಲನೆ ನಡೆಸುತ್ತಿದೆ. ಸಮಿತಿಯು ಈ ಸಂಬಂಧ ಶೀಘ್ರದಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com