'ವಯಸ್ಕರ ಸಾಕ್ಷರತಾ ಕಾರ್ಯಕ್ರಮ' ಯಶಸ್ವಿಯಾಗಲು ಮಾರ್ಗದರ್ಶನದ ಅಗತ್ಯವಿದೆ: ತಜ್ಞರು

2027 ರ ವೇಳೆಗೆ 5 ಕೋಟಿ ವಯಸ್ಕರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ನವ ಭಾರತ ಸಾಕ್ಷರತಾ ಕಾರ್ಯಕ್ರಮ (ವಯಸ್ಕರ ಶಿಕ್ಷಣ ಯೋಜನೆ)ವನ್ನು ಆರಂಭಿಸಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಮಧ್ಯಸ್ಥಗಾರರಿಗೆ ಸೂಕ್ತ ಮಾರ್ಗದರ್ಶನ ನೀಡಿದರೆ ಮಾತ್ರ ಯೋಜನೆ ಯಶಸ್ವಿಯಾಗಲು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 2027 ರ ವೇಳೆಗೆ 5 ಕೋಟಿ ವಯಸ್ಕರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ನವ ಭಾರತ ಸಾಕ್ಷರತಾ ಕಾರ್ಯಕ್ರಮ (ವಯಸ್ಕರ ಶಿಕ್ಷಣ ಯೋಜನೆ)ವನ್ನು ಆರಂಭಿಸಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಮಧ್ಯಸ್ಥಗಾರರಿಗೆ ಸೂಕ್ತ ಮಾರ್ಗದರ್ಶನ ನೀಡಿದರೆ ಮಾತ್ರ ಯೋಜನೆ ಯಶಸ್ವಿಯಾಗಲು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರೋಟರಿ ಇಂಡಿಯಾ ಸಾಕ್ಷರತಾ ಮಿಷನ್ (ಆರ್‌ಐಎಲ್‌ಎಂ) ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮವನ್ನು ಪ್ರಾರಂಭಿಸಿತು. ರಾಜ್ಯ ಮಟ್ಟದಲ್ಲಿ ವಯಸ್ಕರ ಸಾಕ್ಷರತಾ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಖಾಸಗಿ ಶಾಲೆಗಳು ಮತ್ತು ಮಕ್ಕಳ ಕಲ್ಯಾಣ ಸಂಘದ (ಪಿಎಸ್‌ಸಿಡಬ್ಲ್ಯುಎ) ಸಹಯೋಗದೊಂದಿಗೆ ಸುಮಾರು 8,000 ಖಾಸಗಿ ಕರ್ನಾಟಕ ಶಾಲೆಗಳನ್ನು ಯೋಜನೆಗೆ ತೆಗೆದುಕೊಳ್ಳಲಾಗಿದೆ.

ಯೋಜನೆ ಕುರಿತು ಮಾತನಾಡಿದ ತಜ್ಞರು, ಈ ಹಿಂದೆ ಕೂಡ ಇದೇ ರೀತಿಯ ಹಲವು ಕಾರ್ಯಕ್ರಮಗಳನ್ನು ಆರಂಭಿಸಲಾಗಿತ್ತು. ಆದರೆ, ಅನುಷ್ಠಾನದಲ್ಲಿನ ನ್ಯೂನತೆಗಳಿಂದಾಗಿ ಯೋಜನೆ ವಿಫಲಗೊಂಡಿವೆ ಎಂದು ಸ್ಮರಿಸಿದ್ದಾರೆ.

ಬೆಂಗಳೂರು ಮೂಲದ ಶಿಕ್ಷಣ ತಜ್ಞ ಡಿ ಶಶಿಕುಮಾರ್ ಅವರು ಮಾತನಾಡಿ, ಯೋಜನೆ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದರು.

ಯೋಜನೆ ಯಶಸ್ವಿಯಾಗಬೇಕಾದರೆ, ಮಧ್ಯಸ್ಥಗಾರರಿಗೆ ಅರಿವು ಮೂಡಿಸುವುದು ಪ್ರಮುಖವಾಗಿದೆ. ಇಲ್ಲದೆ ಹೋದರೆ, ಅನುಷ್ಠಾನದಲ್ಲಿಯೇ ಸಮಸ್ಯೆಗಳು ಎದುರಾಗುತ್ತವೆ. ಈ ಹಿಂದೆ ಈಚ್ ಒನ್-ಟೀಚ್ ಒನ್, ಈಚ್ ಒನ್-ಟೀಚ್ ಮನಿ ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು. ಯೋಜನೆ ಉತ್ತಮವಾಗಿದ್ದರೂ ವೇಗವನ್ನು ಪಡೆಯಲು ಮತ್ತು ಜನಸಾಮಾನ್ಯರನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ವಯಸ್ಕ ಅನಕ್ಷರಸ್ಥರಿಗೆ ಮೂರು ತಿಂಗಳ ಕಾಲ ಶಿಕ್ಷಣ ನೀಡಬೇಕು, ಅದು ಅವರ ಶಾಲೆಯ ಯೋಜನೆಯ ಭಾಗವಾಗಿರುತ್ತದೆ. ವಿದ್ಯಾರ್ಥಿಗಳು ಸಹ ಕಲಿಯುತ್ತಿರುವುದರಿಂದ, ಫಲಿತಾಂಶಗಳನ್ನು ನೀಡಲು ಸಾಧ್ಯವಾಗುವಂತೆ ಶಿಕ್ಷಕರು ಬೋಧನಾ ಕೌಶಲ್ಯವನ್ನು ಸರಿಯಾಗಿ ಅಳವಡಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಶಶಿಕುಮಾರ್ ವಿವರಿಸಿದರು.

ಯೋಜನೆಯು ಬಹಳ ದೊಡ್ಡದಾಗಿದ್ದು, ಗುರಿಗಳನ್ನು ಸಾಧಿಸಲು ಬದ್ಧರಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಮಾಜದಿಂದ ದೊಡ್ಡ ಪ್ರಮಾಣದ ಒಳಗೊಳ್ಳುವಿಕೆಯ ಅಗತ್ಯವಿದೆ ಎಂದು ತಿಳಿಸಿದರು.

ಎಚ್ ರಾಜೇಂದ್ರ ಪೈ ಮಾತನಾಡಿ, ರೋಟರಿಯ ಸಂಪೂರ್ಣ ಸಾಕ್ಷರತೆ ಮತ್ತು ಗುಣಮಟ್ಟದ ಶಿಕ್ಷಣಕ್ಕಾಗಿ, ವಯಸ್ಕರ ಸಾಕ್ಷರತೆ ಮತ್ತು ಗುಣಮಟ್ಟದ ಶಿಕ್ಷಣವನ್ನು ಸುಧಾರಿಸಲು 2014 ರಲ್ಲಿ ಟೀಚ್ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಆದರೆ. ಲಾಜಿಸ್ಟಿಕ್ ಸಮಸ್ಯೆಗಳಿಂದ ಅದು ಯಶಸ್ವಿಯಾಗಲಿಲ್ಲ. ಇದುವರೆಗೆ, ಎಂಟು ವರ್ಷಗಳಲ್ಲಿ 88,005 ವಯಸ್ಕರು ಕಾರ್ಯಕ್ರಮದ ಅಡಿಯಲ್ಲಿ ಸಾಕ್ಷರತೆ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರಯಾಣ ಸಮಸ್ಯೆ ಎದುರಾಗುತ್ತಿರುವುದು ಮತ್ತು ದೂರದ ಪ್ರದೇಶಗಳ ಜನರಿಗೆ ಕಲಿಸುವ ಸಮಸ್ಯೆಗಳು ಪ್ರಮುಖವಾಗಿದೆ ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com