ಮೆಟ್ರೊ ಕಾಮಗಾರಿ ನಡೆಯುವ ಸ್ಥಳಗಳಿಂದ ಸಾಮಗ್ರಿಗಳ ಕಳ್ಳತನ: ಗುತ್ತಿಗೆದಾರರಿಗೆ ಲಕ್ಷಾಂತರ ರೂಪಾಯಿ ನಷ್ಟ

ಬೆಂಗಳೂರು ವಿಮಾನ ನಿಲ್ದಾಣ ಮಾರ್ಗದ ವೀರಣ್ಣಪಾಳ್ಯ ಮೆಟ್ರೊ ನಿಲ್ದಾಣದಲ್ಲಿ ಇತ್ತೀಚೆಗೆ ಗ್ಯಾಸ್ ಪೈಪ್‌ಲೈನ್ ಸಾಮಗ್ರಿ ಕಳ್ಳತನವಾಗಿದ್ದು, ನಿರ್ಮಾಣ ಕಾಮಗಾರಿಯನ್ನು ನಗರದ ಹಲವೆಡೆ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಸಾಮಗ್ರಿ ಕಳ್ಳತನವಾಗಿದ್ದು, ಗುತ್ತಿಗೆದಾರರಿಗೆ ಅಪಾರ ನಷ್ಟ ಉಂಟಾಗಿದೆ. ಸಾಮಾನ್ಯವಾಗಿ ರಾತ್ರಿ ವೇಳೆ ಕಳ್ಳತನಗಳು ನಡೆಯುತ್ತಿದ್ದು, ಕೆಲ ಪ್ರಕರಣಗಳಲ್ಲಿ ಎಫ್
ಮೆಟ್ರೊ ಕಾಮಗಾರಿ ನಡೆಸುವ ಕಾರ್ಮಿಕರು
ಮೆಟ್ರೊ ಕಾಮಗಾರಿ ನಡೆಸುವ ಕಾರ್ಮಿಕರು
Updated on

ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣ ಮಾರ್ಗದ ವೀರಣ್ಣಪಾಳ್ಯ ಮೆಟ್ರೊ ನಿಲ್ದಾಣದಲ್ಲಿ ಇತ್ತೀಚೆಗೆ ಗ್ಯಾಸ್ ಪೈಪ್‌ಲೈನ್ ಸಾಮಗ್ರಿ ಕಳ್ಳತನವಾಗಿದ್ದು, ನಿರ್ಮಾಣ ಕಾಮಗಾರಿಯನ್ನು ನಗರದ ಹಲವೆಡೆ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಸಾಮಗ್ರಿ ಕಳ್ಳತನವಾಗಿದ್ದು, ಗುತ್ತಿಗೆದಾರರಿಗೆ ಅಪಾರ ನಷ್ಟ ಉಂಟಾಗಿದೆ. ಸಾಮಾನ್ಯವಾಗಿ ರಾತ್ರಿ ವೇಳೆ ಕಳ್ಳತನಗಳು ನಡೆಯುತ್ತಿದ್ದು, ಕೆಲ ಪ್ರಕರಣಗಳಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ.

ಹುಸಮಾರನಹಳ್ಳಿ ಮತ್ತು ದೊಡ್ಡಜಾಲ ನಿಲ್ದಾಣಗಳ ನಡುವಿನ ಏರ್‌ಪೋರ್ಟ್‌ ಲೈನ್‌ನಲ್ಲಿ ರಾತ್ರಿ ವೇಳೆ ಸ್ಥಳದಲ್ಲಿ ನಿಗಾ ವಹಿಸುವ ಭದ್ರತಾ ಸಿಬ್ಬಂದಿಯನ್ನು ಥಳಿಸಿ, ನಿರ್ಮಾಣ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ. ಪಿಯರ್‌ಗಳ ನಿರ್ಮಾಣಕ್ಕೆ ಅಗತ್ಯವಿರುವ ಪೈಪ್‌ಗಳು, ಸಾಮಗ್ರಿಗಳು ಮತ್ತು ಸ್ಟೇಜಿಂಗ್ ಪೈಪ್‌ಗಳು ಆಗಾಗ್ಗೆ ಕಾಣೆಯಾಗುತ್ತಿದ್ದು, ಇದುವರೆಗೆ 10 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕ ಸುರಕ್ಷತೆಗೆ ಬೆದರಿಕೆಯೂ ಇತ್ತು, ಇದು ಮತ್ತಷ್ಟು ಚಿಂತೆಯನ್ನುಂಟುಮಾಡಿದೆ. ಬ್ಯಾರಿಕೇಡ್‌ಗಳನ್ನು ಜೋಡಿಸಲು ಬಳಸಿದ ಮೊಳೆಗಳನ್ನು ಸಹ ಕೆಲವೊಮ್ಮೆ ತೆಗೆದುಹಾಕಲಾಗುತ್ತದೆ. 172 ಕೆಜಿ ತೂಕದ ಬ್ಯಾರಿಕೇಡ್ ಬೋರ್ಡ್ ರಸ್ತೆಯ ಮೂಲಕ ಹಾದುಹೋಗುವ ವಾಹನ ಚಾಲಕ ಅಥವಾ ಪಾದಚಾರಿಗಳ ಮೇಲೆ ಬಿದ್ದರೆ ದೊಡ್ಡ ಅಪಘಾತವಾಗಲಿದ್ದು, ಅದಕ್ಕೆ ನಮ್ಮನ್ನು ಹೊಣೆ ಮಾಡುತ್ತಾರೆ ಎಂದು ಅವರು ವಿವರಿಸಿದರು. ಸಾಮಗ್ರಿಗಳ ಕಳ್ಳತನ ಹಿನ್ನೆಲೆಯಲ್ಲಿ ಎರಡು ಪಾಳಿಯಲ್ಲಿ ಕೆಲಸ ಮಾಡುವ 45 ಸಿಬ್ಬಂದಿಗೆ ಭದ್ರತಾ ಸಿಬ್ಬಂದಿಯ ಉಪಸ್ಥಿತಿಯನ್ನು ಬಲಪಡಿಸಲಾಗಿದೆ ಎಂದು ಮತ್ತೊಂದು ಮೂಲ ತಿಳಿಸಿದೆ.

ವಸ್ತುಗಳ ಕಳ್ಳತನವಾದರೆ ಬಿಎಂಆರ್ ಸಿಎಲ್ ಪರಿಹಾರ ನೀಡುವುದಿಲ್ಲ. ಏಕೆಂದರೆ ವಸ್ತುಗಳ ಸಂರಕ್ಷಣೆ ಗುತ್ತಿಗೆದಾರರ ಜವಾಬ್ದಾರಿಯಾಗಿದೆ. ಟಿನ್ ಫ್ಯಾಕ್ಟರಿ ಮತ್ತು ಮಹದೇವಪುರ ಎರಡೂ ನಿಲ್ದಾಣಗಳಲ್ಲಿ ವೆಲ್ಡಿಂಗ್ ವಸ್ತು, 4,000 ರಿಂದ 5,000 ರೂ.ವರೆಗಿನ ಮಾರುಕಟ್ಟೆ ಮೌಲ್ಯದ ಡೀಸೆಲ್-ಜನರೇಟರ್ ಬ್ಯಾಟರಿಗಳು, ಅರ್ಥ್ ಮೂವರ್‌ಗಳಿಗೆ ವಿದ್ಯುತ್ ಬಳಸುವ ಬ್ಯಾಟರಿಗಳು ಮತ್ತು ಹೈಡ್ರಂಟ್ ಯಂತ್ರಗಳನ್ನು ಕಳ್ಳತನ ಮಾಡಲಾಗುತ್ತಿದೆ. ಟೂಲ್‌ಬಾಕ್ಸ್‌ಗಳಲ್ಲಿ ಇರಿಸಲಾಗಿರುವ ವಿದ್ಯುತ್ ಉಪಕರಣಗಳು ಮತ್ತು ಹೆಡ್ ಕಟರ್‌ಗಳನ್ನು ಸಹ ಒಡೆದು ಕಳ್ಳತನ ಮಾಡಲಾಗಿದೆ. ಈವರೆಗೆ 15 ಲಕ್ಷ ರೂ.ಗೂ ಹೆಚ್ಚು ನಷ್ಟವಾಗಿದೆ' ಎನ್ನುತ್ತಾರೆ ಗುತ್ತಿಗೆದಾರರೊಬ್ಬರು. 

ಈ ಬೆಳವಣಿಗೆಗಳ ಬಗ್ಗೆ ತಿಳಿದಿರುವ ಇನ್ನೊಬ್ಬ ವ್ಯಕ್ತಿ, ಊಟದ ಸಮಯದಲ್ಲಿ, ಮಹಿಳೆಯರ ಗುಂಪು ಬಂದು ವಸ್ತುಗಳನ್ನು ತೆಗೆದುಕೊಂಡು ತಮ್ಮ ಚೀಲಗಳಲ್ಲಿ ಮುಚ್ಚಿಡುತ್ತಾರೆ ಎಂದು ಹೇಳಿದರು. ನಾನು ಅವರನ್ನು ಪತ್ತೆಹಚ್ಚಿ ಎಚ್ಚರಿಕೆ ನೀಡಿದರೂ ಅದು ಮುಂದುವರಿಯುತ್ತದೆ. ನಾನು ಕೆಲವರನ್ನು ಪೊಲೀಸರಿಗೆ ಒಪ್ಪಿಸಿದ್ದೇನೆ ಎಂದರು. 

ದುಷ್ಕರ್ಮಿಗಳು ದ್ವಿಚಕ್ರ ವಾಹನಗಳಲ್ಲಿ ಬಂದು ಚಾಕುಗಳನ್ನು ಝಳಪಿಸಿ ವಸ್ತು ಸಮೇತ ಪರಾರಿಯಾಗಿದ್ದಾರೆ. "ನಾವು ರಾತ್ರಿಯಿಡೀ ಕೆಲಸ ಮಾಡುವುದರಿಂದ ಇದು ತುಂಬಾ ಅಪಾಯಕಾರಿಯಾಗಿದೆ. ಇಬ್ಬರು ಹಿರಿಯ ಮೆಟ್ರೋ ಅಧಿಕಾರಿಗಳು ಇಂತಹ ಕಳ್ಳತನ ನಡೆಯುತ್ತಿರುವ ಬಗ್ಗೆ ತಮಗೆ ತಿಳಿದಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com