ವೋಟ್ ಬ್ಯಾಂಕ್ ರಾಜಕೀಯ: ದಲಿತ ಧಾರ್ಮಿಕ ಮುಖಂಡರ ಭೇಟಿಗೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮುಂದು

2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎರಡು ದಿನಗಳ ಆರ್‌ಎಸ್‌ಎಸ್‌ನ ‘ಚಿಂತನ ಮಂಥನ’ ಸಭೆಗೂ ಮುನ್ನ ಜುಲೈ 11 ರಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಚಿತ್ರದುರ್ಗದಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಭೇಟಿ ನಿಗದಿಯಾಗಿರುವುದು ಕುತೂಹಲ ಕೆರಳಿಸಿದೆ.
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್
Updated on

ಬೆಂಗಳೂರು: 2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎರಡು ದಿನಗಳ ಆರ್‌ಎಸ್‌ಎಸ್‌ನ ‘ಚಿಂತನ ಮಂಥನ’ ಸಭೆಗೂ ಮುನ್ನ ಜುಲೈ 11 ರಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಚಿತ್ರದುರ್ಗದಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಭೇಟಿ  ನಿಗದಿಯಾಗಿರುವುದು ಕುತೂಹಲ ಕೆರಳಿಸಿದೆ.

 ಚುನಾವಣೆ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಯ ಎಡ ಸಮುದಾಯವನ್ನು ಸೆಳೆಯುವುದು  ಈ ಭೇಟಿಯ ಕಾರ್ಯತಂತ್ರವಾಗಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಮೋಹತ್ ಭಾಗವತ್ ಅವರ ಜೊತೆಗಿರಲಿದ್ದಾರೆ. ಮಾದಾರ ಚನ್ನಯ್ಯ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ದಲಿತ ಧಾರ್ಮಿಕ ಮುಖಂಡರೊಂದಿಗೆ ಅವರು ಗುರುಪೀಠದಲ್ಲಿ ವಾಪಸಾಗುವ ಸಾಧ್ಯತೆಯಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ‘ಶಿಲಾನ್ಯಾಸ’ದಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ ಭಾಗವಹಿಸಿದ್ದು, ರಾಜ್ಯದಿಂದ ಆಹ್ವಾನಿತರಾದ ಧಾರ್ಮಿಕ ಮುಖಂಡರಲ್ಲಿ ಇವರು ಸೇರಿದ್ದರು. ಇತ್ತೀಚೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ನಡೆದ ಬೃಹತ್ ಸಮಾವೇಶದಲ್ಲಿ ಭಾಗವಹಿಸದೆ  ಕಾಂಗ್ರೆಸ್ ಎತ್ತಿದ ಸಮಸ್ಯೆಗಳಿಂದ ನಿರ್ಲಿಪ್ತರಾಗಿದ್ದರು.

'ನನಗೆ ಆ ಕಾರ್ಯಕ್ರಮಕ್ಕೆ ಆಹ್ವಾನ ಇರಲಿಲ್ಲ ಮತ್ತು ಭಾಗವಹಿಸಲಿಲ್ಲ. ನಮ್ಮ ಗುರುಪೀಠಕ್ಕೆ ಭೇಟಿ ನೀಡುವಂತೆ ನಾನು ಭಾಗವತ್ ಅವರನ್ನು ಸ್ವಲ್ಪ ಸಮಯದ ಹಿಂದೆ ಆಹ್ವಾನಿಸಿದ್ದೆ  ಎಂದು ಅವರು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಸಮುದಾಯದ ಮೇಲೆ ಹಿಡಿತ ಸಾಧಿಸಿರುವ ಸ್ವಾಮೀಜಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಹೆಚ್ಚಿನ ಗೌರವವನ್ನು ಹೊಂದಿರುವ ಧಾರ್ಮಿಕ ಮುಖಂಡರಲ್ಲಿ ಒಬ್ಬರು ಎಂದು ಸಮುದಾಯದ ಮುಖಂಡ ಪಾವಗಡ ಶ್ರೀರಾಮ್  ತಿಳಿಸಿದರು.

2013ರಲ್ಲಿ ಅಂದಿನ ಸಿಎಂ ಜಗದೀಶ್‌ ಶೆಟ್ಟರ್‌ ನೇತೃತ್ವದ ಬಿಜೆಪಿ ಸರ್ಕಾರ ಎಸ್‌ಸಿ ಮೀಸಲಾತಿ ಹಂಚಿಕೆಗೆ ನ್ಯಾ.ಸದಾಶಿವ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೆ ತರದ ಕಾರಣ ಸಮುದಾಯ ತಿರುಗೇಟು ನೀಡಿತ್ತು. ಸಿದ್ದರಾಮಯ್ಯ ನೇತೃತ್ವದ ಆಡಳಿತವೂ ವಿಫಲವಾದ ಕಾರಣ, ಸಮುದಾಯ ಬಿಜೆಪಿಯತ್ತ ವಾಲುವ ಮೂಲಕ 2018 ರ ವಿಧಾನಸಭೆ ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು ಎಂದು ವರದಿಯಾಗಿದೆ. 

2023 ರ ಚುನಾವಣೆಗೂ ಈ ಸಮಸ್ಯೆಯನ್ನು ಮುನ್ನಲೆಗೆ ತರುವ ಸಾಧ್ಯತೆಯಿದೆ ಮತ್ತು ಬಿಜೆಪಿ ಮತ್ತು ಆರ್‌ಎಸ್‌ಎಸ್ ಎರಡೂ ಜಾಗರೂಕತೆ ವಹಿಸುವ ಸಾಧ್ಯತೆಯಿದ್ದು, ದಲಿತ ಧಾರ್ಮಿಕ ಮುಖ್ಯಸ್ಥರನ್ನು ಭೇಟಿ ಮಾಡುವುದು ಒಂದು ತಂತ್ರವಾಗಿದೆ ಎಂದು ಮೂಲಗಳು ತಿಳಿಸಿವೆ.

ಆರ್‌ಎಸ್‌ಎಸ್ ಮುಖ್ಯಸ್ಥರು ಈ ಎಲ್ಲಾ ಗಿಮಿಕ್‌ಗಳನ್ನು ಮಾಡುವ ಬದಲು ಚುನಾವಣೆ ಎದುರಿಸಬೇಕು. ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧದ ಶೇ.40 ಕಮಿಷನ್ ಆರೋಪ ಮತ್ತು ಆರ್‌ಎಸ್‌ಎಸ್‌ಗೂ ಅದರಲ್ಲಿ ಹಣ ಸ್ವೀಕರಿಸಿದೆಯೇ ಎಂಬುದನ್ನು ಅವರು ಉತ್ತರಿಸಬೇಕು ಎಂದು ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com