ಉದ್ಘಾಟನೆಯಾದ ಒಂದೇ ವರ್ಷಕ್ಕೆ ಬಾಗಿಲು ಹಾಕಿದ ಬೆಂಗಳೂರು ರೈಲು ನಿಲ್ದಾಣದ ಸುರಂಗ ಅಕ್ವೇರಿಯಂ; ಭಾರೀ ನಷ್ಟ ಕಾರಣ!

ಭಾರಿ ನಷ್ಟವಾದ ಕಾರಣದಿಂದಾಗಿ ಭಾರತ ಮೊಟ್ಟ ಮೊದಲ ಸುಂರಗ ಅಕ್ವೇರಿಯಂ ಎಂಬ ಕೀರ್ತಿಗೆ ಭಾಜನವಾಗಿದ್ದ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದ ಸುರಂಗ ಅಕ್ವೇರಿಯಂ ಸ್ಥಗಿತಗೊಂಡಿದೆ.
ಮುಚ್ಚಿಲ್ಪಟ್ಟ ಅಕ್ವೇರಿಯಂ
ಮುಚ್ಚಿಲ್ಪಟ್ಟ ಅಕ್ವೇರಿಯಂ
Updated on

ಬೆಂಗಳೂರು: ಭಾರಿ ನಷ್ಟವಾದ ಕಾರಣದಿಂದಾಗಿ ಭಾರತ ಮೊಟ್ಟ ಮೊದಲ ರೈಲು ನಿಲ್ದಾಣ ಸುಂರಗ ಅಕ್ವೇರಿಯಂ ಎಂಬ ಕೀರ್ತಿಗೆ ಭಾಜನವಾಗಿದ್ದ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದ ಸುರಂಗ ಅಕ್ವೇರಿಯಂ ಸ್ಥಗಿತಗೊಂಡಿದೆ.

ವರ್ಷದ ಹಿಂದೆ ಅಂದರೆ ಜುಲೈ 1 2021ರಲ್ಲಿ ಕೆಎಸ್‌ಆರ್ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ) ಬೆಂಗಳೂರು ರೈಲು ನಿಲ್ದಾಣದಲ್ಲಿ ಆರಂಭವಾಗಿದ್ದ ಭಾರತದ ಮೊದಲ ಸುರಂಗ ಅಕ್ವೇರಿಯಂ ಇದೀಗ ಭಾರಿ ನಷ್ಟದ ಕಾರಣ ನೀಡಿ ಬಾಗಿಲು ಹಾಕಿದೆ. ಈ ಹಿಂದೆ ಇದೇ ಜುಲೈ 1 ರಂದು ಈ ಅಕ್ವೇರಿಯಂ ಒಂದು ವರ್ಷ ಪೂರ್ಣಗೊಳಿಸಿತು. ಅಲ್ಲದೆ ಒಪ್ಪಂದವನ್ನು ಮೂರು ವರ್ಷಗಳವರೆಗೆ ವಿಸ್ತರಿಸಲು ಅನುಮತಿ ನೀಡಲಾಗಿತ್ತು. ಆದರೆ ಆದರೆ ಮಾಲೀಕರು ನಷ್ಟದಿಂದಾಗಿ ಮುಚ್ಚಿದ್ದಾರೆ.

ಬೆಂಗಳೂರು ರೈಲ್ವೆ ವಿಭಾಗವು ಅಕ್ವೇರಿಯಂ ಮುಚ್ಚುವ ಬಗ್ಗೆ ಯಾವುದೇ ಮೂನ್ಸೂಚನೆ ನೀಡಿಲ್ಲ. ಕಾನ್ಕೋರ್ಸ್ ಪ್ರದೇಶದಲ್ಲಿ ಅದರತ್ತ ತೆರಳುತ್ತಿದ್ದ ಪ್ರಯಾಣಿಕರು ಈ ವಿಶಾಲವಾದ ಕಟ್ಟಡದ ಸುತ್ತಲೂ `ಮುಚ್ಚಿದ' ಬೋರ್ಡ್ ನೋಡಿ ಹಿಂತಿರುಗುತ್ತಿರುವುದು ಗಮನಕ್ಕೆ ಬಂದಿತು. 

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿರುವ ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ಧಿ ನಿಗಮದಿಂದ (IRSDC) ಗುತ್ತಿಗೆ ಪಡೆದಿರುವ HNI ಎಂಟರ್‌ಪ್ರೈಸಸ್‌ನ ವ್ಯವಸ್ಥಾಪಕ ಪಾಲುದಾರ ಸೈಯದ್ ಹಮೀದ್ ಹಾಸನ್ ಅವರು, "ನಾವು ಅಂದುಕೊಂಡಂತೆ ಮುನ್ನಡೆಯಲಾಗಲಿಲ್ಲ. ನಾವು ದೊಡ್ಡ ನಷ್ಟವನ್ನು ಅನುಭವಿಸಿದೆವು. ಒಂದು ವರ್ಷ ಪೂರ್ಣಗೊಂಡ ನಂತರ ದೊಡ್ಡ ನಿರ್ಧಾರಕ್ಕೆ ಬಂದಿದ್ದೇವೆ. ಆದಾಗ್ಯೂ, ಯಾವುದೇ ವಿಷಾದವಿಲ್ಲ.. ಇದು ನನಗೆ ಮತ್ತು ನಮ್ಮ ತಂಡಕ್ಕೆ ದೊಡ್ಡ ಕಲಿಕೆಯ ಅನುಭವವಾಗಿದೆ ಎಂದು ಹೇಳಿದ್ದಾರೆ.

ಇದನ್ನು ಅನುಕರಿಸುವ ದೇಶದ ಒಂದೆರಡು ರೈಲು ನಿಲ್ದಾಣಗಳು ಈ ಸಂಬಂಧ ಅವರ ಪರಿಣತಿ ಮತ್ತು ಅನುಭವವನ್ನು ಕೋರಿವೆ, "ಭವಿಷ್ಯದಲ್ಲಿ ಇದನ್ನು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಲ್ಲಿ ಸ್ಥಾಪಿಸಲು ನಾವು ಯೋಚಿಸಬಹುದು. ಏಕೆಂದರೆ ಇದು ವಿಶ್ವ ದರ್ಜೆಯ ನಿಲ್ದಾಣ ಮತ್ತು ವಿಶಾಲವೂ ಆಗಿದೆ. ಅನೇಕ ರೈಲುಗಳ ನಂತರ ಅಲ್ಲಿಗೆ ಸ್ಥಳಾಂತರಗೊಂಡಿದೆ, ನಾವು ಆ ಆಯ್ಕೆಯನ್ನು ಪರಿಗಣಿಸಬಹುದು ಹಾಸನ್ ಹೇಳಿದರು.

ಈ ಸ್ಥಳವು ಪ್ರತಿದಿನವೂ 500 ರಿಂದ 600 ಪ್ರಯಾಣಿಕರನ್ನು ಆಕರ್ಷಿಸುತ್ತಿತ್ತು. ವಾರಾಂತ್ಯದಲ್ಲಿ ಹೆಚ್ಚು ಅಂದರೆ 4,000 ಜನಸಂದಣಿಯನ್ನು ಸೆಳೆಯಲು ಅಂದಾಜಿಸಲಾಗಿತ್ತು. ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಆರ್ಥಿಕವಾಗಿ ಬೆಲೆಯ ಟಿಕೆಟ್ ಅನ್ನು ಹೆಚ್ಚಿಸಬಹುದೇ ಎಂದೂ ಯೋಚಿಸಲಾಗಿತ್ತು. ಸೀಮಿತ ಆದಾಯ ಹೊಂದಿರುವವರು ಸೇರಿದಂತೆ ಪ್ರತಿಯೊಬ್ಬರಿಗೂ ನಮ್ಮ ಜಲವಾಸಿ ಸಾಮ್ರಾಜ್ಯದ ಅನುಭವದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದು ಇದರ ಆಲೋಚನೆಯಾಗಿತ್ತು. ನಾವು ಉದ್ದೇಶಪೂರ್ವಕವಾಗಿ ಅದನ್ನು ಅತ್ಯಂತ ಕೈಗೆಟುಕುವ ದರದಲ್ಲಿ ಪ್ರವೇಶ ಕಲ್ಪಿಸಿದ್ದೆವು ಎಂದು ಹಾಸನ್ ಹೇಳಿದ್ದಾರೆ.

ಮುಚ್ಚಿರುವ ಕುರಿತು ಪ್ರಶ್ನಿಸಿದಾಗ, ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಅವರು ಉತ್ತರಿಸಿ, "ಒಂದು ವರ್ಷದ ಗುತ್ತಿಗೆ ಅವಧಿ ಮುಗಿದಿದೆ, ಅವರು ಅದನ್ನು ಇನ್ನೂ ಮೂರು ವರ್ಷಗಳವರೆಗೆ ವಿಸ್ತರಿಸಲು ಬಯಸುವುದಿಲ್ಲ. ಹೀಗಾಗಿ ಅದನ್ನು ಮುಚ್ಚಿದ್ದಾರೆ" ಎಂದು ಹೇಳಿದರು.

ಅಕ್ವಾಟಿಕ್ ಕಿಂಗ್ಡಮ್ ಖಂಡಿತವಾಗಿಯೂ ಒಂದು ಅನನ್ಯ ಮತ್ತು ನಿರಾಶಾದಾಯಕ ಅನುಭವವಾಗಿದೆ. 25 ರೂ.ಗಳ ಟಿಕೆಟ್ ಬೆಲೆಗೆ, ಇದು ವಿಭಿನ್ನ ಜಗತ್ತನ್ನು ತೆರೆದುಕೊಂಡಿತ್ತು. ಅದರ ಪ್ರಾರಂಭದ ನಂತರ ಪ್ರಯಾಣಿಕರಿಂದ ಉತ್ತಮ ವಿಮರ್ಶೆಗಳನ್ನು ಗಳಿಸಿತ್ತು. ಕಪ್ಪು ಡೈಮಂಡ್, ಸ್ಟಿಂಗ್ ರೇ ಮತ್ತು ಹೈ ಫಿನ್ ಶಾರ್ಕ್‌ಗಳು ಸುರಂಗ ಅಕ್ವೇರಿಯಂನಲ್ಲಿ ವಿದೇಶದ ಅನುಭವ ನೀಡಿದ್ದವು. 12 ಅಡಿ ಉದ್ದದ ಪಲುಡೇರಿಯಂ, ಅಮೆಜಾನ್ ಮಳೆಕಾಡಿನ ಮಾದರಿಯಲ್ಲಿ ಭೂಮಿಯ ಸಸ್ಯಗಳು, ಜಲಸಸ್ಯಗಳು ಮತ್ತು ಜೀವ ರೂಪಗಳ ಅಕ್ವೇರಿಯಂ ಇಲ್ಲಿ ದೊಡ್ಡ ಆಕರ್ಷಣೆಯಾಗಿತ್ತು. ಇಲ್ಲಿ ಐದು ಅಲಿಗೇಟರ್‌ಗಳು (ಮೊಸಳೆ), ಸೆಲ್ಫಿ ಪಾಯಿಂಟ್‌ಗಳು ಮತ್ತು ಮಕ್ಕಳ ವಲಯವೂ ಇತ್ತು. ಹೀಗಾಗಿ ಇದು ನಿಲ್ದಾಣದ ಪ್ರಮುಖ ಆಕರ್ಷಣೆ ಕೇಂದ್ರಗಳಲ್ಲಿ ಒಂದಾಗಬಹುದಿತ್ತು. 

ಪ್ಲಾಟ್‌ಫಾರ್ಮ್‌ಗಳು, ನಿಲ್ದಾಣದೊಳಗಿನ ಪ್ರಮುಖ ಪ್ರಯಾಣಿಕರ ಕೇಂದ್ರಗಳು, ಪ್ರಕಟಣೆಗಳ ಮೂಲಕ ಮತ್ತು ಕೆಎಸ್‌ಆರ್ ನಿಲ್ದಾಣವನ್ನು ತಲುಪುವ ರೈಲುಗಳ ಒಳಗೆ ಜಾಹೀರಾತುಗಳ ಮೂಲಕ ಸಾರ್ವಜನಿಕರ ಗಮನವನ್ನು ಸೆಳೆಯುವ ಮೂಲಕ ಇದನ್ನು ಜನಪ್ರಿಯಗೊಳಿಸಲು ರೈಲ್ವೇ ಇಲಾಖೆಯು ಖಂಡಿತವಾಗಿಯೂ ಹೆಚ್ಚಿನದನ್ನು ಮಾಡಬಹುದಿತ್ತು ಎಂದು ಸಾರ್ವಜನಿಕರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com