ಬೆಂಗಳೂರು: ಚರ್ಚ್‌ನಲ್ಲಿ ನನ್ನ ಮೇಲೆ ನಿರಂತರ ಅತ್ಯಾಚಾರ ನಡೆದಿದೆ; 12 ವರ್ಷಗಳ ನಂತರ ಸಂತ್ರಸ್ತೆ ದೂರು
ಬೆಂಗಳೂರು: ಚರ್ಚ್ ನಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು 12 ವರ್ಷಗಳ ನಂತರ ಸಂತ್ರಸ್ತೆಯೊಬ್ಬರು ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ.
ಬುಧವಾರ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ 8 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಎಂಟು ಆರೋಪಿಗಳ ಪೈಕಿ ಆರು ಮಂದಿ ವಿರುದ್ಧ, ಕೇಸ್ ಮುಚ್ಚಿ ಹಾಕಲು ಯತ್ನಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ, ಬೆಂಗಳೂರಿನ ವಿದ್ಯಾರಣ್ಯಪುರ ಬಡಾವಣೆಯ ದೊಡ್ಡಬೆಟ್ಟಹಳ್ಳಿ ಬಳಿಯ ಕಾವೇರಿ ಲೇಔಟ್‌ನ ಚರ್ಚ್‌ನಲ್ಲಿ 2010ರಲ್ಲಿ ಈ ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಗೆ 6 ವರ್ಷ ವಯಸ್ಸಾಗಿದ್ದಾಗ, ಸಂತ್ರಸ್ತೆಯನ್ನು ಕೆಲಸಕ್ಕೆ ಹೊರಡುವ ಮೊದಲು ಆಕೆಯ ಪೋಷಕರು ಚರ್ಚ್‌ಗೆ ಬಿಡುತ್ತಿದ್ದರು. ಪ್ರತಿದಿನ ಇದು ವಾಡಿಕೆಯಾಗಿತ್ತು, ಕೆಲಸದಿಂದ ಹಿಂದಿರುಗಿದ ನಂತರ ಅವಳನ್ನು ಕರೆದುಕೊಂಡು ಹೋಗುತ್ತಿದ್ದರು.
ಆರೋಪಿ ಸೈಮನ್ ಪೀಟರ್ ಚರ್ಚ್‌ನ ಪರಿಸ್ಥಿತಿಯ ಲಾಭ ಪಡೆದಿದ್ದಾನೆ, ಆಕೆಗೆ ಅಶ್ಲೀಲ ಚಿತ್ರಗಳನ್ನು ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರೋಪಿ ಸೈಮನ್ ಪೀಟರ್, ತನಗೆ 14 ವರ್ಷ ವಯಸ್ಸಾಗುವವರಗೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.
ಲೈಂಗಿಕ ದೌರ್ಜನ್ಯವನ್ನು ಸಹಿಸದ ಸಂತ್ರಸ್ತೆ, ಚರ್ಚ್‌ನಲ್ಲಿಯೇ ಉಳಿದುಕೊಂಡಿದ್ದ ಸ್ಯಾಮ್ಯುಯೆಲ್ ಡಿಸೋಜಾ ಬಳಿ ಈ ವಿಷಯವನ್ನು ಬಹಿರಂಗಪಡಿಸಿದ್ದರು. ಸಂತ್ರಸ್ತೆಗೆ ತೊಂದರೆ ನೀಡದಂತೆ ಎಚ್ಚರಿಕೆ ನೀಡಿದ್ದರು.
ಆದರೆ ಸ್ಯಾಮ್ಯುಯೆಲ್ ಡಿಸೋಜಾ ಕೂಡ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು, ಯಾರ ಬಳಿಯೂ ಹೇಳದಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ, ತನ್ನ ಪತ್ನಿ ಹಾಗೂ ಚರ್ಚ್ ನಲ್ಲಿ ಇತರರಿಗೆ ಯಾವುದೇ ರೀತಿಯ ಅನುಮಾನ ಬಾರದಂತೆ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ ಎಂದು ಆಕೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಿರಂತರ ಲೈಂಗಿಕ ಕಿರುಕುಳದಿಂದ ಖಿನ್ನತೆಗೆ ಒಳಗಾಗಿದ್ದ ಬಾಲಕಿ ಕೌನ್ಸೆಲಿಂಗ್ ಮತ್ತು ಚಿಕಿತ್ಸೆ ಬಳಿಕ ಪೊಲೀಸರಿಗೆ ದೂರು ನೀಡಿದ್ದಳು. ಅತ್ಯಾಚಾರದ ಘಟನೆಯ ಬಗ್ಗೆ ತಿಳಿದ ನಂತರವೂ ಆರು ಆರೋಪಿಗಳು ವಿಷಯವನ್ನು ಮುಚ್ಚಿಡಲು ಪ್ರಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, ಸಾಮೂಹಿಕ ಅತ್ಯಾಚಾರ ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ