ಸಮಾವೇಶದಲ್ಲಿ ಸಿದ್ದರಾಮಯ್ಯ, ಸಂಸದ ಡಿಕೆ ಸುರೇಶ್ ಮತ್ತಿತರರು
ಸಮಾವೇಶದಲ್ಲಿ ಸಿದ್ದರಾಮಯ್ಯ, ಸಂಸದ ಡಿಕೆ ಸುರೇಶ್ ಮತ್ತಿತರರು

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಜನಗಣತಿಗೆ ಅಂಗೀಕಾರ: ಸಿದ್ದರಾಮಯ್ಯ

ಹಿಂದುಳಿದ ವರ್ಗಗಳ ಓಲೈಕೆಗೆ ಪ್ರಯತ್ನಿಸುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಜಾತಿ ಸಮೀಕ್ಷೆಯನ್ನು ಒಪ್ಪಿಕೊಳ್ಳುವುದಾಗಿ ಎಸ್‌ಸಿ ಭೋವಿ ಸಮುದಾಯಕ್ಕೆ ಭರವಸೆ ನೀಡಿದ್ದಾರೆ.

ಬೆಂಗಳೂರು: ಹಿಂದುಳಿದ ವರ್ಗಗಳ ಓಲೈಕೆಗೆ ಪ್ರಯತ್ನಿಸುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಜಾತಿ ಸಮೀಕ್ಷೆಯನ್ನು ಒಪ್ಪಿಕೊಳ್ಳುವುದಾಗಿ ಎಸ್‌ಸಿ ಭೋವಿ ಸಮುದಾಯಕ್ಕೆ ಭರವಸೆ ನೀಡಿದ್ದಾರೆ.

ಬನ್ನೇರುಘಟ್ಟದಲ್ಲಿ ನಡೆದ ಭೋವಿ ಸಮುದಾಯದ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ಸಿಎಂ ಆಗಿದ್ದಾಗ ರೂ. 162 ಕೋಟಿ ಅಂದಾಜು ವೆಚ್ಚದಲ್ಲಿ ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು ಆಯೋಗ ಮಾಡಿತ್ತು. ನಂತರ ಬಂದ ಸರ್ಕಾರಗಳು ಇದನ್ನು ಇನ್ನೂ ಒಪ್ಪಿಕೊಂಡಿಲ್ಲ. ಮತ್ತೆ ಅಧಿಕಾರಕ್ಕೆ ಬಂದರೆ ನಾವು ಅದನ್ನು ಒಪ್ಪಿಕೊಳ್ಳುತ್ತೇವೆ ಎಂದರು.

ಎಲ್ಲ ಚುನಾವಣೆಗಳಲ್ಲೂ ಸಮುದಾಯ ಬೆಂಬಲ ನೀಡಿರುವುದಾಗಿ ತಿಳಿಸಿದ ಸಿದ್ದರಾಮಯ್ಯ, ಭೋವಿ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇನೆ ಎಂದರು. ಆರ್ಯ-ದ್ರಾವಿಡ ಮೂಲದ ತಮ್ಮ ಅಂಶವನ್ನು ತಳ್ಳಿಹಾಕಿದ ಅವರು, ನಾನು ಈ ಸತ್ಯವನ್ನು ಬಹಿರಂಗಪಡಿಸಿದಾಗ, ನನ್ನನ್ನು ಹಿಂದೂ ವಿರೋಧಿ ಮತ್ತು ಆರ್ ಎಸ್ ಎಸ್ ವಿರೋಧಿ ಎಂದು ಬ್ರಾಂಡ್ ಮಾಡಲಾಯಿತು ಆದರೆ ಇದರ ಬಗ್ಗೆ ಎಲ್ಲರೂ ಬಲವಾಗಿ ಮಾತನಾಡಬೇಕು ಎಂದು ಅವರು ಪ್ರತಿಪಾದಿಸಿದರು.

ಮೈಸೂರು ಸಾಮ್ರಾಜ್ಯದ ಅಂದಿನ ದಿವಾನರ ವಿರೋಧದ ನಡುವೆಯೂ 1917ರಲ್ಲೇ ಹಿಂದುಳಿದ ವರ್ಗಗಳ ಕೋಟಾವನ್ನು ಜಾರಿಗೆ ತಂದ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರ ಕೊಡುಗೆಯನ್ನು ಶ್ಲಾಘಿಸಿದ ಸಿದ್ದರಾಮಯ್ಯ, ದೇಶದಲ್ಲೇ ಪ್ರಥಮ ಬಾರಿಗೆ ಎಸ್‌ಸಿಗಳಿಗೆ ಸಿವಿಲ್ ಗುತ್ತಿಗೆ ಕಾಮಗಾರಿಯಲ್ಲಿ ಮೀಸಲಾತಿಯನ್ನು ಅವರು ನೀಡಿದ್ದರು ಎಂದು ಸ್ಮರಿಸಿದರು. 

ಬಡ್ತಿಯಲ್ಲಿ ಮೀಸಲಾತಿ, ಎಸ್‌ಸಿಪಿ/ಟಿಎಸ್‌ಪಿ ಯೋಜನೆಗಳಿಗೆ ಹಣ ಹೆಚ್ಚಳ ಮತ್ತು ಹಣವನ್ನು ಖರ್ಚು ಮಾಡಲು ವಿಫಲರಾದ ಅಧಿಕಾರಿಗಳನ್ನು ಶಿಕ್ಷಿಸುವ ಕಾನೂನು ಸೇರಿದಂತೆ ಸಿಎಂ ಆಗಿದ್ದಾಗ ಅವರು ಮಾಡಿದ ಕೆಲಸಗಳನ್ನು ಅವರು ತಿಳಿಸಿದರು. 

Related Stories

No stories found.

Advertisement

X
Kannada Prabha
www.kannadaprabha.com