2032ರ ವೇಳೆಗೆ ಹಸಿರು ಇಂಧನ ಕ್ಷೇತ್ರದಲ್ಲಿ 2.5 ಲಕ್ಷ ಕೋಟಿ ರೂ. ಹೂಡಿಕೆ ಸಾಧ್ಯತೆ: ರಾಜ್ಯ ಸರ್ಕಾರ

2023ರ ವೇಳೆಗೆ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 2.5 ಲಕ್ಷ ಕೋಟಿ ರೂಪಾಯಿ ಹೂಡಿಕೆಯನ್ನು ಕರ್ನಾಟಕ ಸರ್ಕಾರ ನಿರೀಕ್ಷಿಸುತ್ತಿದೆ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ ಕುಮಾರ್ ನಾಯಕ್ ಅವರು ಗುರುವಾರ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: 2023ರ ವೇಳೆಗೆ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 2.5 ಲಕ್ಷ ಕೋಟಿ ರೂಪಾಯಿ ಹೂಡಿಕೆಯನ್ನು ಕರ್ನಾಟಕ ಸರ್ಕಾರ ನಿರೀಕ್ಷಿಸುತ್ತಿದೆ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ ಕುಮಾರ್ ನಾಯಕ್ ಅವರು ಗುರುವಾರ ಹೇಳಿದ್ದಾರೆ.

ಜಾಗತಿಕ ಹೂಡಿಕೆ ಸಮಾವೇಶದಲ್ಲಿ 'ಇನ್‌ವೆಂಟಿಂಗ್‌ ದಿ ಎನರ್ಜಿ ಇಕೋಸಿಸ್ಟಮ್‌: ಫ್ಯೂಚರ್‌ ಆಫ್‌ ಎನರ್ಜಿ ಜನರೇಷನ್‌ ಇನ್‌ ದಿ ವರ್ಲ್ಡ್‌' ಕುರಿತ ಚರ್ಚೆಯಲ್ಲಿ ಮಾತನಾಡಿದ ಕುಮಾರ್ ಅವರು, ಉತ್ಪಾದಿಸಿದ ನವೀಕರಿಸಬಹುದಾದ ಇಂಧನವನ್ನು ಸಂಗ್ರಹಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ 10,000 ಮೆಗಾವ್ಯಾಟ್ ಘಟಕವನ್ನು ಸ್ಥಾಪಿಸಲು ಇಲಾಖೆ ಯೋಜಿಸಿದೆ ಎಂದು ಹೇಳಿದರು.

ಶರಾವತಿಯಲ್ಲಿ 2,000 ಮೆಗಾವ್ಯಾಟ್ ಸಾಮರ್ಥ್ಯದ ಪಂಪ್ ಸ್ಟೋರೇಜ್ ಘಟಕವನ್ನು ಸ್ಥಾಪಿಸುವತ್ತ ಸರ್ಕಾರ ಕೆಲಸ ಮಾಡುತ್ತಿದೆ, ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ, ಆದರೆ ಇಂಧನವನ್ನು ಸಂಗ್ರಹಿಸುವ ಮಾರ್ಗಗಳನ್ನು ಪರಿಹರಿಸುವ ಅಗತ್ಯವಿದೆ ಎಂದು ತಿಳಿಸಿದರು.

ಪೆಟ್ರೋನಾಸ್ ಹೈಡ್ರೋಜನ್‌ನ ಸಿಇಒ ಅಡ್ಲಾನ್ ಅಹ್ಮದ್ ಅವರು ಮಾತನಾಡಿ, ಹೈಡ್ರೋಜನ್ ಶಕ್ತಿ ಉತ್ಪಾದನೆಯತ್ತ ಸರ್ಕಾರ ಕೆಲಸ ಮಾಡುತ್ತಿದ್ದು, ನಮ್ಮ ಕಂಪನಿಯೂ ಸೇರಿದಂತೆ ಕೆಲವು ಕಂಪನಿಗಳು ತಂತ್ರಜ್ಞಾನಗಳಲ್ಲಿ ಕೆಲಸ ಮಾಡುತ್ತಿವೆ, ಅಲ್ಲಿ ಹೈಡ್ರೋಜನ್ ಅನ್ನು ಪರಿವರ್ತಿಸುವ ಮೂಲಕ ಅಮೋನಿಯಾವನ್ನು ಉತ್ಪಾದಿಸಲಾಗುತ್ತದೆ, ನಂತರ ಅದನ್ನು ಸಂಗ್ರಹಿಸಿ, ರವಾನಿಸಲಾಗುತ್ತದೆ. ಹಸಿರು ಇಂಧನ ಉತ್ಪಾದನೆಗೆ ಭಾರತವು ಸಾಕಷ್ಟು ಸಾಮರ್ಥ್ಯವನ್ನು ಹೊಂದಿದ್ದರೂ, ಭೂಮಿ ಮತ್ತು ಇತರ ವೆಚ್ಚದ ಅಂಶಗಳು ದುಬಾರಿಯಾಗಿದೆ ಎಂದು ಹೇಳಿದರು.

ಇನ್ನೊಂದು ವರ್ಷದಲ್ಲಿ ನಿವ್ವಳ ಇಂಧನ ಹಸಿರು ಹೈಡ್ರೋಜನ್ ರಫ್ತಿನಲ್ಲಿ ಭಾರತ ನಂಬರ್ 1 ಆಗಲಿದೆ. 1-1-1 ಯೋಜನೆಯಲ್ಲಿ ಸಹ ಕೆಲಸ ನಡೆಯುತ್ತಿದೆ, ಅಲ್ಲಿ 1 ಕೆಜಿ ಹೈಡ್ರೋಜನ್ ಶಕ್ತಿಯನ್ನು 1 ಡಾಲರ್'ಗೆ ಮಾರಾಟ ಮಾಡಲಾಗುತ್ತದೆ ಎಂದು ಆರ್‌ಐಎಲ್‌ನ ನವೀಕರಿಸಬಹುದಾದ ಇಂಧನದ ನಾಯಕ ಕಪಿಲ್ ಮಹೇಶ್ವರಿ ಹೇಳಿದರು.

ಹಿಟಾಚಿ ಎನರ್ಜಿ, ಭಾರತ ಮತ್ತು ದಕ್ಷಿಣ ಏಷ್ಯಾದ ಎಂಡಿ ಮತ್ತು ಸಿಇಒ ವೇಣು ನುಗುರಿ ಮಾತನಾಡಿ, COP26 ನಲ್ಲಿ ಕೇಂದ್ರವು ನಿಗದಿಪಡಿಸಿದ ಗುರಿಗಳನ್ನು ಸಾಧಿಸಲು, ತಂತ್ರಜ್ಞಾನಗಳು ಮತ್ತು ಅಭಿವೃದ್ಧಿಯ ವೇಗವನ್ನು ವೇಗಗೊಳಿಸಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com