
ಬೆಂಗಳೂರು: ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ಸಂಸ್ಥೆಯ ನೂತನ ಮುಖ್ಯಸ್ಥರಾಗಿ ಹರಿಕೃಷ್ಣ ಬಂಟ್ವಾಳ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಕಿಯೋನಿಕ್ಸ್ ಮುಖ್ಯಸ್ಥರಾಗಿದ್ದ ಹಿರಿಯ IPS ಅಧಿಕಾರಿ ಎಸ್ .ಎನ್.ಸಿದ್ದರಾಮಪ್ಪ ಅವರನ್ನು ಸಾರಿಗೆ ಇಲಾಖೆ ನೂತನ ಆಯುಕ್ತರಾಗಿ ವರ್ಗಾವಣೆ ಮಾಡಿದ ಬಳಿಕ ಕಿಯೋನಿಕ್ಸ್ ಮುಖ್ಯಸ್ಥರ ಹುದ್ದೆ ತೆರವಾಗಿತ್ತು.
ಇದೀಗ ಈ ಸ್ಥಾನಕ್ಕೆ ಹರಿಕೃಷ್ಣ ಬಂಟ್ವಾಳ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Advertisement