ಕೃಷಿ ಮೇಳದಲ್ಲಿ ಜನರ ಗಮನ ಸೆಳೆದ 'ಕೆಂಪು ರಾಜಮುಡಿ ಅಕ್ಕಿ'

ಮಾರುಕಟ್ಟೆಯಲ್ಲಿ ಲಭ್ಯವಿರುವ ಅಪರೂಪದ ಕೆಂಪಕ್ಕಿಗಳಲ್ಲಿ ಒಂದು ಈ ರಾಜಮುಡಿ ಅಕ್ಕಿ, ಮೈಸೂರು ಒಡೆಯರ ಕಾಲದಲ್ಲಿ ಈ ಅಕ್ಕಿಯನ್ನು ಹೆಚ್ಚು ಜನಪ್ರಿಯವಾಗಿತ್ತು. ಮೈಸೂರು ರಾಜರು ತೆರಿಗೆ ಪಾವತಿಸಲು ಸಾಧ್ಯವಾಗದ...
ಕೆಂಪು ರಾಜಮುಡಿ ಅಕ್ಕಿ
ಕೆಂಪು ರಾಜಮುಡಿ ಅಕ್ಕಿ
Updated on

ಬೆಂಗಳೂರು: ಮಾರುಕಟ್ಟೆಯಲ್ಲಿ ಲಭ್ಯವಿರುವ ಅಪರೂಪದ ಕೆಂಪಕ್ಕಿಗಳಲ್ಲಿ ಒಂದು ಈ ರಾಜಮುಡಿ ಅಕ್ಕಿ, ಮೈಸೂರು ಒಡೆಯರ ಕಾಲದಲ್ಲಿ ಈ ಅಕ್ಕಿಯನ್ನು ಹೆಚ್ಚು ಜನಪ್ರಿಯವಾಗಿತ್ತು. ಮೈಸೂರು ರಾಜರು ತೆರಿಗೆ ಪಾವತಿಸಲು ಸಾಧ್ಯವಾಗದ ಜನರಿಗೆ ಅದರ ಬದಲಾಗಿ ಪೌಷ್ಠಿಕಾಂಶದ ರಾಜಮುಡಿ ಅಕ್ಕಿ ನೀಡುವಂತೆ ಹೇಳುತ್ತಿದ್ದರು ಎಂದು ಹೇಳಲಾಗುತ್ತದೆ. ರಾಜಮುಡಿ ಅಕ್ಕಿ ಪಾಲಿಶ್ ಆಗಿರುವುದಿಲ್ಲ ಮತ್ತು ಇದು ಕೆಂಪು ಮತ್ತು ಕಂದು ಬಣ್ಣದ ಮಿಶ್ರಣದಲ್ಲಿ ಬರುತ್ತದೆ.

ರಾಜರ ಕಾಲದಲ್ಲಿ ಹೆಚ್ಚು ಜನಪ್ರಿಯವಾಗಿದ್ದ ಈ ಅಕ್ಕಿ, ನಂತರ ದಿನಗಳಲ್ಲಿ ಬಿಳಿ ಅಕ್ಕಿ ಜನಪ್ರಿಯವಾಗುತ್ತಿದ್ದಂತೆ ಮರೆಗೆ ಸರಿದಿತ್ತು. ಕಾಲ ಕಳೆದಂತೆ ಜನರಲ್ಲಿ ಸಾವಯವ ಮತ್ತು ಆರೋಗ್ಯಕರ ಅಕ್ಕಿಯ ಅರಿವು ಹೆಚ್ಚಾದಂತೆ, ಸಾಂಪ್ರದಾಯಿಕ ರಾಜಮುಡಿ ಅಕ್ಕಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ನಗರದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿಯೂ ಈ ಅಕ್ಕಿ ಹಲವರ ಗಮನ ಸೆಳೆದಿದೆ.

ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ (ಒಎಫ್ಆರ್'ಎಸ್) ಅಧಿಕಾರಿಗಳು ಮಾತನಾಡಿ, ಮೈಸೂರಿನ ಒಎಫ್ಆರ್'ಎಸ್ನ 60 ಎಕರೆ ಪ್ರದೇಶದ 4 ಎಕರೆ ಭೂಮಿಯಲ್ಲಿ ಕೆಂಪು ಬಣ್ಣದ ಭತ್ತವನ್ನು ಬೆಳೆಯಲಾಗುತ್ತಿದೆ ಎಂದು ಹೇಳಿದ್ದಾರೆ.

ಒಎಫ್ಆರ್'ಎಸ್ ಫಾರ್ಮ್ ಸೂಪರಿಂಟೆಂಡೆಂಟ್ ಪಿ ಪ್ರಕಾಶ್ ಅವರು ಮಾತನಾಡಿ, ಈ ಬೆಳೆ ಇಳುವರಿ ಮಾಡಲು 160 ದಿನಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಸಂಶೋಧನಾ ಕೇಂದ್ರವು ಎಕರೆಗೆ 12 ಕ್ವಿಂಟಾಲ್‌ಗಳನ್ನು ಅಕ್ಕಿ ಪಡೆಯುತ್ತಿದೆ. ಪ್ರಸ್ತುತ ಕೇಂದ್ರವು 351 ಬಗೆಯ ಭತ್ತವನ್ನು ಬೆಳೆಸುವಲ್ಲಿ ಯಶಸ್ವಿಯಾಗಿದೆ. ಅನೇಕ ಸ್ಥಳೀಯ ತಳಿಗಳನ್ನೂ ಕೂಡ ಕೇಂದ್ರವು ಪ್ರಚಾರ ಮಾಡುತ್ತಿದೆ ಎಂದು ತಿಳಿಸಿದರು.

ಕೀಟನಾಶಕಗಳನ್ನು ಬಳಸದೆ ಭತ್ತವನ್ನು ಬೆಳೆಸುತ್ತಿದ್ದೇವೆ. ಸ್ಥಳೀಯ ಬೆಳೆಗಳಾದ ಬಿಳಿ', 'ಕೆಂಪು', 'ಕಪ್ಪು', 'ಬಂಗಾರ ಕೋವೈ', 'ರತ್ನ ಚೂಡಿ', 'ಗಂಧಸಾಲೆ' ಮತ್ತು ಇತರೆ ಬೆಳೆಗಳ ಮೇಲೆ ಗಮನ ಹರಿಸಿದ್ದೇವೆ. ಇತರೆ ಬೆಳೆಗಳು ಈಗಾಗಲೇ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಆದರೆ, ಅವುಗಳನ್ನು ಸಾವಯವವಾಗಿ ಬೆಳಸುವುದಿಲ್ಲ. ಉತ್ಪಾದನೆ ಹೆಚ್ಚುವ ಕುರಿತು ಸಂಶೋಧನೆ ಮಾಡುತ್ತಿದ್ದೇವೆ. ಮೇಳಗಳ ಮೂಲಕ, ಆರೋಗ್ಯಕರ ಆಹಾರದ ಬಗ್ಗೆ ರೈತರು ಮತ್ತು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಕೃಷಿ ಮೇಳದಲ್ಲಿ ಸಂಶೋಧನಾ ಕೇಂದ್ರವು ಹತ್ತಾರು ಸಾವಯವ ಭತ್ತದ ತಳಿಗಳನ್ನು ಪ್ರದರ್ಶಿಸಿದ್ದು, ಮೈಸೂರಿನ ನಾಗನಹಳ್ಳಿಯ ನಿಲ್ದಾಣದ ಆವರಣದಲ್ಲಿರುವ 4 ಎಕರೆ ಪ್ರದೇಶದಲ್ಲಿ ಬೆಳೆದ ರಾಜಮುಡಿ ಅಕ್ಕಿಯನ್ನು ಕೂಡ ಪ್ರದರ್ಶಿಸಲಾಗಿದೆ. ಅಕ್ಕಿಯ ದರವನ್ನು ಕೆಜಿಗೆ 70 ರೂ.ಗೆ ನಿಗದಿಪಡಿಸಲಾಗಿದೆ ಎಂದು ಒಎಫ್‌ಆರ್‌ಎಸ್‌ನ ಸಂಶೋಧನಾ ಸಹಾಯಕ ಸುಮತ್ ಕುಮಾರ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com