ಕರ್ನಾಟಕ, ಮಹಾರಾಷ್ಟ್ರ ರಾಜ್ಯಪಾಲರ ಭೇಟಿ, ಗಡಿ ಜಿಲ್ಲೆಗಳ ಸಮಸ್ಯೆ ಕುರಿತು ಚರ್ಚೆ 

ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಪಾಲರ ಜಂಟಿ ಸಮಾವೇಶ ವೇಳೆ ಸಂಬಂಧಿತ ಗಡಿ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ.
ಜಲಾಶಯಗಳಿಂದ ನೀರು ಬಿಡುಗಡೆಯ ಸಾಂದರ್ಭಿಕ ಚಿತ್ರ
ಜಲಾಶಯಗಳಿಂದ ನೀರು ಬಿಡುಗಡೆಯ ಸಾಂದರ್ಭಿಕ ಚಿತ್ರ
Updated on

ಕಲಬುರಗಿ: ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಪಾಲರ ಜಂಟಿ ಸಮಾವೇಶ ವೇಳೆ ಸಂಬಂಧಿತ ಗಡಿ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಮಹಾರಾಷ್ಟ್ರದ ಅಣೆಕಟ್ಟುಗಳಿಂದ ದಿಢೀರ್ ನೀರು ಬಿಡುಗಡೆಯಿಂದ ಉಂಟಾಗುತ್ತಿರುವ ಪ್ರವಾಹ, ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಪ್ರಾರಂಭ ಮತ್ತು ಗಡಿಯಲ್ಲಿ ಅಪರಾಧಗಳ ನಿಯಂತ್ರಣ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಕಲಬುರಗಿ ಜಿಲ್ಲಾಡಳಿತ ಪ್ರಶ್ನೆಗಳನ್ನು ಎತಿತ್ತು.

ನೆರೆ ರಾಜ್ಯದ ಉಜ್ಜೈನಿ ಮತ್ತು ವೀರ್ ಜಲಾಶಯಗಳಿದ ಹಠಾತ್ ನೀರು  ಬಿಡುಗಡೆಯಿಂದ  ಜಿಲ್ಲೆಯಲ್ಲಿ ಪ್ರವಾಹ ಉಂಟಾಗುತ್ತಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗುತ್ತಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಯಶಂವತ್ ಗುರ್ ಕಾರ್ ಹೇಳಿದರು. ಅಪ್ಜಲ್ ಪುರ ಮತ್ತಿತರ ತಾಲೂಕುಗಳಲ್ಲಿ ಜಿಲ್ಲಾಡಳಿತದಿಂದ ಪರಿಹಾರ ಕ್ರಮ ಕೈಗೊಳ್ಳಲಾಗಿದೆ. ಆದರೆ, ಮಹಾರಾಷ್ಟ್ರ ನೀರು ಬಿಡುವ ಮುನ್ನ ಕನಿಷ್ಠ ಒಂದು ವಾರ ಮುಂಚಿತವಾಗಿ ಕರ್ನಾಟಕದ ಅಧಿಕಾರಿಗಳಿಗೆ ತಿಳಿಸಬೇಕು ಎಂದರು. 

ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ,
ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಸೊಲ್ಲಾಪುರ, ಅಕ್ಕಲಕೋಟ್ ಮತ್ತು ಉಮಾರ್ಗದಲ್ಲಿ ಕನ್ನಡ ಮಾತನಾಡುವ ಹೆಚ್ಚಿನ ಜನರಿದ್ದು,ಕನ್ನಡ ಮಾಧ್ಯಮ ಶಾಲೆಗಳನ್ನು ಮಹಾರಾಷ್ಟ್ರ ಸರ್ಕಾರ ಪ್ರೋತ್ಸಾಹಿಸಬೇಕು ಮತ್ತು ಕರ್ನಾಟಕದಲ್ಲಿ ಮಠಾಠಿ ಮಾಧ್ಯಮ ಶಾಲೆಗಳಿಗಿರುವಂತೆ ಕನ್ನಡ ಮಾಧ್ಯಮ ಶಾಲೆಗಳಿಗೂ ಅನುದಾನ ಒದಗಿಸಬೇಕು ಎಂದು ಅವರು ಹೇಳಿದರು. ಗಡಿ ಜಿಲ್ಲೆಯಲ್ಲಿ ಮದ್ಯ ಮತ್ತು ಮಾದಕ ವಸ್ತು ಅಕ್ರಮ ಸಾಗಾಟ ತಡೆಗೆ ಉಭಯ ರಾಜ್ಯಗಳ ಜಂಟಿ ಕಾರ್ಯಪಡೆಯೊಂದನ್ನು ರಚಿಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು. 

ಗಡಿ ಪ್ರದೇಶಗಳಲ್ಲಿ ಕನ್ನಡ ಮತ್ತು ಮರಾಠಿ ಎರಡೂ ನಾಮಫಲಕಗಳನ್ನು ಅಳವಡಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಸೂಚಿಸಿದರು. ಉಭಯ ರಾಜ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು  ಸ್ಥಳೀಯ ಆಡಳಿತಗಳ ನಡುವೆ ಅತ್ಯುನ್ನತ ಸಮನ್ವಯದ ಅಗತ್ಯವಿರಬೇಕು ಎಂದು ಅವರು ಒತ್ತು ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com