'ಭಾರತ್ ಗೌರವ್ ಕಾಶಿ ದರ್ಶನ್' ರೈಲು ನಿಲ್ದಾಣ ಬದಲು: 24 ಗಂಟೆಗಳಲ್ಲಿ 431 ಪ್ರಯಾಣಿಕರಿಗೆ ಮಾಹಿತಿ ನೀಡಿದ ಅಧಿಕಾರಿಗಳು!

ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಕರ್ನಾಟಕ-ಭಾರತ್ ಗೌರವ್ ದರ್ಶನ್ ಕಾಶಿ’ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಬದಲು ಯಶವಂತಪುರದಿಂದ ಸಂಚಾರವನ್ನು ಆರಂಭಿಸಲಿದೆ.
'ಭಾರತ್ ಗೌರವ್ ಕಾಶಿ ದರ್ಶನ್' ರೈಲು
'ಭಾರತ್ ಗೌರವ್ ಕಾಶಿ ದರ್ಶನ್' ರೈಲು

ಬೆಂಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ್’ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಬದಲು ಯಶವಂತಪುರದಿಂದ ಸಂಚಾರವನ್ನು ಆರಂಭಿಸಲಿದೆ.

ರಾಜ್ಯದ ದತ್ತಿ ಇಲಾಖೆಯ ಮೂಲ ಯೋಜನೆಯ ಪ್ರಕಾರ, ಎಂಟು ದಿನಗಳ ಪ್ರವಾಸಕ್ಕಾಗಿ ‘ಕರ್ನಾಟಕ-ಭಾರತ್ ಗೌರವ್ ದರ್ಶನ್ ಕಾಶಿ’ ರೈಲು ಕೆಎಸ್ಆರ್ ನಿಲ್ದಾಣದಿಂದ ಮಧ್ಯಾಹ್ನ 1.45 ಕ್ಕೆ ಹೊರಡಬೇಕಿತ್ತು. ರೈಲಿಗೆ ಚಾಲನೆ ನೀಡಲು ಪ್ರಧಾನಿ ಮೋದಿಯವರು ಆಸಕ್ತಿ ತೋರಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 10.33ಕ್ಕೆ ರೈಲಿಗೆ ಪ್ರಧಾನಿ ಮೋದಿಯವರು ಚಾಲನೆ ನೀಡಲಿದ್ದಾರೆ. ಚಾಲನೆ ನೀಡಿದ ಆರಂಭದಲ್ಲಿ ಕೆಎಸ್ಆರ್ ರೈಲು ನಿಲ್ದಾಣದಿಂದ 22 ಪ್ರಯಾಣಿಕರು ರೈಲು ಹತ್ತುತ್ತಾರೆ. ನಂತರ ರೈಲು ಯಶವಂತಪುರಕ್ಕೆ ತೆರಳಿದ್ದು, ಅಲ್ಲಿಂದ ಉಳಿದ ಪ್ರಯಾಣಿಕರೊಂದಿಗೆ ಸಂಚಾರ ಆರಂಭಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗೊಂದಲಗಳ ಕುರಿತು ಮಾಹಿತಿ ನೀಡಿರುವ ಐಆರ್'ಸಿಟಿಸಿ ಉನ್ನತಾಧಿಕಾರಿಗಳು, ಪ್ರತಿಯೊಬ್ಬ ಪ್ರಯಾಣಿಕನಿಗೂ 24 ಗಂಟೆಗೂ ಮೊದಲೇ ಬದಲಾವಣೆ ಬಗ್ಗೆ ಮಾಹಿತಿ ನೀಡಿದ್ದೇವೆ. ಪ್ರಧಾನಿ ಮೋದಿಯವರ ಭದ್ರತೆಯ ದೃಷ್ಟಿಯಿಂದ ರೈಲು ನಿಲ್ದಾಣವನ್ನು ಬದಲಿಸಲಾಗಿದೆ ಎಂದು ಹೇಳಿದರು.

ಮದ್ದೂರಿನ ಖಾಸಗಿ ಸಂಸ್ಥೆಯೊಂದರ ಸಹಾಯಕ ವ್ಯವಸ್ಥಾಪಕ ಬಿ.ಎಂ.ಲೋಕೇಶ್ ಮಾತನಾಡಿ, ರೈಲಿನಲ್ಲಿ ವೃದ್ಧ ತಂದೆ-ತಾಯಿಯೊಂದಿಗೆ ಪ್ರಯಾಣಿಸುತ್ತಿದ್ದೇನೆ, ಬುಧವಾರ ಸಂಜೆ ರೈಲ್ವೆ ಇಲಾಖೆಯಿಂದ ನಮಗೆ ಮಾಹಿತಿ ಬಂದಿತ್ತು. ಇದೀಗ ನಾವು ರೈಲಿನಲ್ಲಿ ಕೆಂಗೇರಿಗೆ ಹೋಗಿ ಅಲ್ಲಿಂದ ಮೆಟ್ರೋದಲ್ಲಿ ಯಶವಂತಪುರ ರೈಲು ನಿಲ್ದಾಣಕ್ಕೆ ಹೋಗುತ್ತೇವೆಂದು ಹೇಳಿದ್ದಾರೆ.

ವಿಜಯನಗರದಿಂದ ಕಾರಿನಲ್ಲಿ ಕುಟುಂಬದೊಂದಿಗೆ ಪ್ರಯಾಣಿಸಲಿರುವ ಅಂಶುಮನ್ ರಮೇಶ್ ರಾವ್, “ಕೆಎಸ್‌ಆರ್‌'ಗೆ ಹೋಗುವ ಬದಲು ಯಶವಂತಪುರಕ್ಕೆ ಹೋಗುತ್ತೇವಷ್ಟೇ. ಮೊದಲೇ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com