ಪಿಎಚ್​ಡಿ ಪದವಿ: ಯುಜಿಸಿ ಹೊಸ ನಿಯಮಕ್ಕೆ ವಿರೋಧ

ವಿಶ್ವವಿದ್ಯಾಲಯ ಧನಸಹಾಯ ಆಯೋಗ ಪಿಎಚ್​ಡಿ ಪದವಿಗಳ ಮೇಲೆ ಹೊರಡಿಸಿರುವ ಹೊಸ ನಿಯಮಗಳಿಗೆ ವಿರೋಧಗಳು ವ್ಯಕ್ತವಾಗುತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ವಿಶ್ವವಿದ್ಯಾಲಯ ಧನಸಹಾಯ ಆಯೋಗ ಪಿಎಚ್​ಡಿ ಪದವಿಗಳ ಮೇಲೆ ಹೊರಡಿಸಿರುವ ಹೊಸ ನಿಯಮಗಳಿಗೆ ವಿರೋಧಗಳು ವ್ಯಕ್ತವಾಗುತ್ತಿವೆ.

ಯುಜಿಸಿ ಹೊರಡಿಸಿರುವ ಹೊಸ ನಿಯಮ ನಿರ್ಧಾರವು ಪಿಎಚ್‌ಡಿ ಮಾಡುವ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಟೀಕೆ ವ್ಯಕ್ತಪಡಿಸಿದ್ದಾರೆ.

ಹೊಸ ನಿಯವು ಭಾರತದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟವನ್ನು ನಾಶಮಾಡುವ ಮತ್ತೊಂದು ಹೆಜ್ಜೆಯಾಗಿದೆ. ಕೆಲವೇ ವರ್ಷಗಳಲ್ಲಿ, ಭಾರತವು ಅತಿ ಹೆಚ್ಚು ವೈದ್ಯರನ್ನು ಹೊಂದಿರಲಿದೆ. ಆದರೆ ಅವರನ್ನು ಎಲ್ಲಿಯೂ ನೇಮಿಸಿಕೊಳ್ಳುವುದಿಲ್ಲ, ”ಎಂದು ಹವಾಮಾನ ಮತ್ತು ಸಂಶೋಧನಾ ಪ್ರತಿಷ್ಠಾನ ಅರ್ಥ್ ಹೇಳಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನ ನಿವೃತ್ತ ಹಿರಿಯ ಪ್ರಾಧ್ಯಾಪಕ ಡಾ ಜಯಂತ್ ಮೂರ್ತಿ ಅವರು ಮಾತನಾಡಿ, “ಪಿಎಚ್‌ಡಿ ಮಾಡುವಾಗ ಯಾವುದೋ ಹೊಸ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆಂಬ ಭಾವನೆ ಮೂಡುತ್ತದೆ. ಪೀರ್-ರಿವ್ಯೂಡ್ ಜರ್ನಲ್‌ನಲ್ಲಿ ಅದನ್ನು ಪ್ರಕಟಿಸುವುದು ವೈಜ್ಞಾನಿಕ ಸಮುದಾಯದಲ್ಲಿ ಅನುಮೋದನೆಯ ಮುದ್ರೆಯ ಪಡೆದಂತಾಗುತ್ತದೆ. ಸಂಶೋಧಕರು ತಮ್ಮ ಸಂಶೋಧನೆಯನ್ನು ನಕಲಿ ಜರ್ನಲ್‌ಗಳಲ್ಲಿ ಪ್ರಕಟಿಸಲು ಹಣ ನೀಡುತ್ತಿದ್ದರಿಂದ ಇದನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ.

"ಇತರ ನಿಯಮಗಳು ಉತ್ತಮ ನಂಬಿಕೆಯಲ್ಲಿದೆ ಎಂದು ತೋರುತ್ತಿರುವಾಗ, ನೀತಿಶಾಸ್ತ್ರದಲ್ಲಿನ ವೈಫಲ್ಯವನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೆಲ ವರ್ಷಗಳ ಹಿಂದೆ ಯುಜಿಸಿ ಮಾರ್ಗಸೂಚಿಗಳಲ್ಲಿನ ಬದಲಾವಣೆಯಿಂದಾಗಿ ನಕಲಿ ಜರ್ನಲ್‌ಗಳ ಸಮಸ್ಯೆ ಎದುರಿಸಿತ್ತು, ಪ್ರಾಧ್ಯಾಪಕರಾಗಲು ಜರ್ನಲ್‌ಗಳಲ್ಲಿ ಸಂಶೋಧನೆಯನ್ನು ಪ್ರಕಟಿಸುವ ಅವಶ್ಯಕತೆಯಿದೆ, ಇದರ ಪರಿಣಾಮವಾಗಿ ಜರ್ನಲ್‌ಗಳು ಪೇ-ಟು-ಪಬ್ಲಿಷ್‌ ಮೊರೆ ಹೋಗುತ್ತಿದ್ದಾರೆಂದು ಮೂರ್ತಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com