ರಾಜ್ಯದ ರೇಷ್ಮೆಗೆ ಹೆಚ್ಚಿದ ಬೇಡಿಕೆ: ಸರ್ಕಾರದಿಂದ ರೇಷ್ಮೆಗೂಡಿಗೆ ದರ ಏರಿಕೆ; ಬೆಳೆಗಾರರ ಮೊಗದಲ್ಲಿ ಮಂದಹಾಸ!

ಕಳೆದ ಕೆಲವು ತಿಂಗಳುಗಳಿಂದ ರಾಜ್ಯದ ರೇಷ್ಮೆಗೆ ಬೇಡಿಕೆ ಹೆಚ್ಚಾಗುವುದರೊಂದಿಗೆ ಹೆಚ್ಚುವರಿ ಆದಾಯದ ಮೂಲವಾಗಿ ರೇಷ್ಮೆ ಕೃಷಿಯನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರ ರೈತರಿಗೆ ಸಹಾಯ ಮಾಡುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ ಕೆಲವು ತಿಂಗಳುಗಳಿಂದ ರಾಜ್ಯದ ರೇಷ್ಮೆಗೆ ಬೇಡಿಕೆ ಹೆಚ್ಚಾಗುವುದರೊಂದಿಗೆ ಹೆಚ್ಚುವರಿ ಆದಾಯದ ಮೂಲವಾಗಿ ರೇಷ್ಮೆ ಕೃಷಿಯನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರ ರೈತರಿಗೆ ಸಹಾಯ ಮಾಡುತ್ತಿದೆ.  ಹೀಗಾಗಿ ಹೆಚ್ಚಿದ ಬೇಡಿಕೆಯೊಂದಿಗೆ, ಕೋವಿಡ್ ಸಮಯದಲ್ಲಿ ನೆಲಕ್ಕೆ ಕುಸಿದ ಬೆಲೆಗಳು ಏರಿಕೆಯಾಗುತ್ತಿವೆ.

ಕರ್ನಾಟಕವು 1.38 ಲಕ್ಷ ರೇಷ್ಮೆ ಕೃಷಿ ರೈತರನ್ನು ಹೊಂದಿದೆ, ಅವರು ರೇಷ್ಮೆಗೂಡು ಬೆಳೆಯುತ್ತಾರೆ, 7,000 ಕ್ಕೂ ಹೆಚ್ಚು ರೇಷ್ಮೆ ರೀಲರ್‌ಗಿದ್ದು, ಅವರು ರೇಷ್ಮೆಗೂಡುಗಳಿಂದ ರೇಷ್ಮೆ ನೂಲನ್ನು ತಯಾರಿಸುವುದರ ಮೂಲಕ ದೇಶದ ಬೇಡಿಕೆಯ ಸುಮಾರು 50 ಪ್ರತಿಶತವನ್ನು ಪೂರೈಸುತ್ತಾರೆ.

ವಾರ್ಷಿಕವಾಗಿ 80,396 ಟನ್‌ ರೇಷ್ಮೆ ಗೂಡು ಉತ್ಪಾದನೆಯಾಗುತ್ತದೆ, ಕಚ್ಚಾ ರೇಷ್ಮೆಯು ಸುಮಾರು 12,000 ಟನ್‌ಗಳಷ್ಟಿದೆ, ಇದು ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಕಚ್ಚಾ ರೇಷ್ಮೆಯ ಶೇಕಡಾ 48 ರಷ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಚೀನಾ ರೇಷ್ಮೆ ಆಮದು ನಿಷೇಧಿಸಿದೆ.  ಫ್ರೆಂಚ್ ರೇಷ್ಮೆಗೆ ಬೇಡಿಕೆ ಕುಸಿಯುತ್ತಿದೆ. "ಈಗ, ರೇಷ್ಮೆ ಬೆಲೆ ಕೆಜಿಗೆ 4,500-6,500 ರೂಪಾಯಿಗಳಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಇದು 8,000 ರೂಪಾಯಿಗಳಿಗೆ ತಲುಪುವ ನಿರೀಕ್ಷೆಯಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ ಸಮಯದಲ್ಲಿ, ಇದು ರೂ 2,000 ಕ್ಕಿಂತ ಕಡಿಮೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದಲ್ಲಿ ರಾಮನಗರ, ತುಮಕೂರು ಹಾಗೂ ಶಿಡ್ಲಘಟ್ಟದಲ್ಲಿ ಬೆಳೆಯುವ ರೇಷ್ಮೆ ಉತ್ತಮ ಗುಣಮಟ್ಟವೆಂದು ಪರಿಗಣಿಸಲಾಗಿದೆ. ಶತಮಾನಗಳಿಂದ ಇವು ರೇಷ್ಮೆ ಬೆಳೆಯುವ ಬೆಲ್ಟ್ ಆಗಿದ್ದವು, ಆದರೆ ಚೀನಾ ರೇಷ್ಮೆ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದ್ದರಿಂದ ರೈತರು ರೇಷ್ಮೆ ಕೃಷಿಯಿಂದ ದೂರ ಸರಿಯುತ್ತಿದ್ದಾರೆ.   ಆದರೆ ಚೀನಾ ರೇಷ್ಮೆ ನಿಷೇಧವು ಸ್ಥಳೀಯ ರೇಷ್ಮೆಗೆ ಬೇಡಿಕೆಯನ್ನು ಮರಳಿ ತಂದಿದೆ,  ಹೀಗಾಗಿ ಬೆಲೆ ಏರಿಕೆ ಕಾಣುತ್ತಿದೆ.

20 ವರ್ಷಗಳ ನಂತರ ವಾರಣಾಸಿಯ ನೇಕಾರರಿಗೆ ರಾಜ್ಯವು ರೇಷ್ಮೆ ಪೂರೈಕೆಯನ್ನು ಪುನರಾರಂಭಿಸಿದಾಗ ಅವರು ಆರಂಭಿಕ ಉತ್ತೇಜನ ದೊರೆಯಿತು. ನಮ್ಮ ರೇಷ್ಮೆ ದೇಶದಲ್ಲೇ ಅತ್ಯುತ್ತಮವಾಗಿದೆ. ವಾರಣಾಸಿಯಿಂದ 3,000 ಮೆಟ್ರಿಕ್ ಟನ್‌ಗೆ ಬೇಡಿಕೆ ಇದೆ. ಮೊದಲ ಕೆಲವು ದಿನಗಳಲ್ಲಿ, ನಾವು 300 ಮೆಟ್ರಿಕ್ ಟನ್ ಬೇಡಿಕೆ ಪಡೆದುಕೊಂಡಿದ್ದೇವೆ.

ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದೊಂದಿಗೆ ನಾವು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದೇವೆ, ಅದು ಅಲ್ಲಿನ ನೇಕಾರರಿಗೆ ಸಹಾಯಧನವನ್ನು ನೀಡುತ್ತದೆ ಇದರಿಂದ ಅವರು ನಮ್ಮಿಂದ ರೇಷ್ಮೆ ಖರೀದಿಸಬಹುದು ಎಂದು ರೇಷ್ಮೆ ಸಚಿವ ನಾರಾಯಣ ಗೌಡ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಅವರು ಕೂಡ ಮುಂದಿನ ದಿನಗಳಲ್ಲಿ ರೇಷ್ಮೆ ಬೆಲೆ ಏರಿಕೆಯಾಗಲಿದೆ ಎಂದು ಹೇಳಿದರು.

ಹೆಚ್ಚಿದ ಬೇಡಿಕೆಯನ್ನು ಪೂರೈಸಲು ಸರ್ಕಾರವು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ. ರೇಷ್ಮೆ ಕೃಷಿಯನ್ನು ಹೆಚ್ಚುವರಿ ಉದ್ಯೋಗವಾಗಿ ತೆಗೆದುಕೊಳ್ಳಲು ರೈತರನ್ನು ಪ್ರೇರೇಪಿಸಲು ನಾವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಮನೆಯಲ್ಲೇ ರೀಲರ್‌ಗಳನ್ನು ಸ್ಥಾಪಿಸಲು ಸಹಾಯಧನವನ್ನೂ ನೀಡುತ್ತಿದ್ದೇವೆ ಎಂದಿದ್ದಾರೆ.

ಆದರೆ ಇದೀಗ, ಕಳೆದ ಒಂದೂವರೆ ವರ್ಷಗಳಿಂದ ಪ್ರತಿ ಕೆಜಿಗೆ 750 ರೂ. ಬೆಲೆ ಸ್ಥಿರವಾಗಿದ್ದು, ರೈತರಲ್ಲಿ ವಿಶ್ವಾಸ ಹೆಚ್ಚಿಸಿದೆ. ಹಾವೇರಿ, ಹುಬ್ಬಳ್ಳಿ, ತುಮಕೂರು ಮತ್ತು ಕಲಬುರಗಿಯಲ್ಲಿ ತಲಾ 15 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಿಸುತ್ತಿದ್ದು, ರಾಮನಗರದಲ್ಲಿ 75 ಕೋಟಿ ರೂಪಾಯಿ ವೆಚ್ಚದಲ್ಲಿ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ನಿರ್ಮಾಣವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com