ಕೆ.ಆರ್. ಮಾರುಕಟ್ಟೆ ಫ್ಲೈಓವರ್ ಮೇಲೆದ್ದು ಬಂದ ನಟ್, ಬೋಲ್ಟ್! ವಾಹನ ಸಂಚಾರಕ್ಕೆ ಅಡ್ಡಿ, ಚಾಲಕರ ಪರದಾಟ

ನಗರದ ಹೃದಯ ಭಾಗ ಕೆ.ಆರ್. ಮಾರುಕಟ್ಟೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಬಾಲಗಂಗಾಧರನಾಥ ಸ್ವಾಮಿ ಫ್ಲೈ ಓವರ್ ನಲ್ಲಿ ನಟ್, ಬೋಲ್ಟ್  ಮೇಲೆ ಬಂದು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ನಟ್, ಬೋಲ್ಟ್ ಮೇಲೆದ್ದು ಬಂದ ಸ್ಥಳದಲ್ಲಿ ಪೊಲೀಸರ ಪರಿಶೀಲನೆ
ನಟ್, ಬೋಲ್ಟ್ ಮೇಲೆದ್ದು ಬಂದ ಸ್ಥಳದಲ್ಲಿ ಪೊಲೀಸರ ಪರಿಶೀಲನೆ

ಬೆಂಗಳೂರು: ನಗರದ ಹೃದಯ ಭಾಗ ಕೆ.ಆರ್. ಮಾರುಕಟ್ಟೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಬಾಲಗಂಗಾಧರನಾಥ ಸ್ವಾಮಿ ಫ್ಲೈ ಓವರ್ ನಲ್ಲಿ ನಟ್, ಬೋಲ್ಟ್  ಮೇಲೆ ಬಂದು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

ಬೋಲ್ಟ್ ಚುಚ್ಚಿ ಹಲವು ವಾಹನಗಳು ಪಂಚರ್ ಆಗಿದ್ದರೆ, ಕೆಲವು ವಾಹನಗಳ ಪಲ್ಟಿಯಾಗಿವೆ. ಇದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ವಾಹನ ಚಾಲಕರು ಪರದಾಡುವಂತಾಗಿದೆ.

ಈ ಸಮಸ್ಯೆ ಬಗ್ಗೆ ಸಂಚಾರಿ ಪೊಲೀಸರು ಬಿಬಿಎಂಪಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ಮೇಲ್ಸುತುವೆ ಸರಿಯಾಗಿ ನಿರ್ವಹಣೆ ಮಾಡದ ಪಾಲಿಕೆ ವಿರುದ್ಧ ಚಾಲಕರು ಕಿಡಿಕಾರಿದ್ದಾರೆ. ವೇಗವಾಗಿ ಬಂದ ವಾಹನ ಪಲ್ಟಿ ಆದ್ರೆ ಯಾರು ಹೊಣೆ ಅಂತಾ ಚಾಲಕರು ಪ್ರಶ್ನೆ ಮಾಡ್ತಿದ್ದಾರೆ.

ಸದ್ಯ ಬೋಲ್ಟ್ ಎದ್ದ ಜಾಗದಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ತೆರಳಿದ್ದಾರೆ. ಇದರಿಂದಾಗಿ ಫ್ಲೈ ಓವರ್ ಮೇಲೆ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ. ಹೀಗಾಗಿ ಈ ಫ್ಲೈ ಓವರ್ ಮೇಲೆ ಸಂಚರಿಸುವಾಗ ವಾಹನ ಸವಾರರು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ತೊಂದರೆ ತಪ್ಪಿದಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com