ಬೆಂಗಳೂರು: ಸಂಸ್ಥೆಗೆ ಸೇರಿದ 35 ಲಕ್ಷ ರೂ. ತನ್ನ ಖಾತೆಗೆ ವರ್ಗಾಯಿಸಿಕೊಂಡು ಅಕೌಂಟೆಂಟ್ ಪರಾರಿ

ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಸೇರಿದ ರೂ.35 ಲಕ್ಷ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡ ಅಕೌಂಟೆಂಟ್ ಒಬ್ಬ ಪರಾರಿಯಾಗಿರುವ ಘಟನೆ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಸೇರಿದ ರೂ.35 ಲಕ್ಷ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡ ಅಕೌಂಟೆಂಟ್ ಒಬ್ಬ ಪರಾರಿಯಾಗಿರುವ ಘಟನೆ ನಡೆದಿದೆ.

ಜಿ.ಆರ್.ಶಾಂತಕುಮಾರ್ (32) ಪರಾರಿಯಾಗಿರುವ ಅಕೌಂಟೆಂಟ್ ಆಗಿದ್ದಾನೆ. ಸಹಕಾರನಗರ 5ನೇ ಬ್ಲಾಕ್‌ನಲ್ಲಿ ವಾಸವಾಗಿರುವ ಉದ್ಯಮಿ ಮಸೂದ್ ಅಲಿ (62) ಎಂಬುವರು ದೂರು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಖಾಸಗಿ ಸಂಸ್ಥೆಯೊಂದರ ಬ್ಯಾಂಕ್'ನ ಸಂಪೂರ್ಣ ವಹಿವಾಟುಗಳನ್ನು ಶಾಂತಕುಮಾರ್ ನಿರ್ವಹಿಸುತ್ತಿದ್ದರು. ಸಂಸ್ಥೆಗೆ ಸೇರಿದ ರೂ.35 ಲಕ್ಷ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಡಿದ್ದು, ಪ್ರತಿ ಬ್ಯಾಂಕ್ ವಹಿವಾಟಿನ ಒಟಿಪಿ ಮತ್ತು ಎಸ್‌ಎಂಎಸ್ ಕಳುಹಿಸಲು ಬ್ಯಾಂಕ್‌ನಲ್ಲಿ ನೋಂದಾಯಿಸಿದ್ದ ಕಂಪನಿಯ ಮೊಬೈಲ್ ಫೋನ್ ನ್ನೂ ಕೂಡ ಕಳವು ಮಾಡಿ ಪರಾರಿಯಾಗಿದ್ದಾನೆಂದು ದೂರಿನಲ್ಲಿ ಹೇಳಿದ್ದಾರೆ.

ಸಂಸ್ಥೆಯು ನಗರದಲ್ಲಿನ ಅನೇಕ ಮಳಿಗೆಗಳಿಗೆ ತಂಪು ಪಾನೀಯಗಳನ್ನು ವಿತರಿಸುವ ಕೆಲಸ ಮಾಡುತ್ತಿದೆ. ಆರೋಪಿಗಳ ವಿರುದ್ಧ ಕೊಡಿಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನವೆಂಬರ್ 15 ರಂದು ಅವರು ಸಂಸ್ಥೆಯ ಹಣವನ್ನು ಶಾಂತಕುಮಾರ್ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಓಡಿಹೋಗುವುದಕ್ಕೂ ಮುನ್ನ ಕಚೇರಿಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನೂ ಕೂಡ ಡಿಲಿಟ್ ಮಾಡಿದ್ದಾರೆ. ಇದೀಗ ಮೊಬೈಲ್ ಸಂಖ್ಯೆಯನ್ನು ಆಧರಿಸಿ ಪತ್ತೆ ಮಾಡುವ ಕಾರ್ಯ ಆರಂಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com