ಬೆಂಗಳೂರು: ಮನೆ ಕೆಲಸದಾಕೆ ಜೊತೆಗೆ ಲೈಂಗಿಕ ಕ್ರಿಯೆ ನಡೆಸುವಾಗ ಸಾವು; ಬಯಲಾಯ್ತು ಶವವಾಗಿ ಪತ್ತೆಯಾಗಿದ್ದ ಉದ್ಯಮಿ ಸಾವಿನ ರಹಸ್ಯ!

ಬೆಂಗಳೂರಿನ ಜಿಪಿ ನಗರದಲ್ಲಿ 67 ವರ್ಷದ ಉದ್ಯಮಿ ಬಾಲ ಸುಬ್ರಮಣಿಯನ್ ದೇಹವು ಪಾಸ್ಟಿಕ್ ಚೀಲದಲ್ಲಿ ಶವವಾಗಿ ಪತ್ತೆಯಾಗಿದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ, ಇದೀಗ ಈ ಪ್ರಕರಣಕ್ಕೆ ಒಂದು ಇನ್ಟ್ರೆಸ್ಟಿಂಗ್ ಟ್ವಿಸ್ಟ್ ಸಿಕ್ಕಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರಿನ ಜಿಪಿ ನಗರದಲ್ಲಿ 67 ವರ್ಷದ ಉದ್ಯಮಿ ಬಾಲ ಸುಬ್ರಮಣಿಯನ್ ದೇಹವು ಪಾಸ್ಟಿಕ್ ಚೀಲದಲ್ಲಿ ಶವವಾಗಿ ಪತ್ತೆಯಾಗಿದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ, ಇದೀಗ ಈ ಪ್ರಕರಣಕ್ಕೆ ಒಂದು ಇನ್ಟ್ರೆಸ್ಟಿಂಗ್ ಟ್ವಿಸ್ಟ್ ಸಿಕ್ಕಿದೆ.

ಇದೇ ನವೆಂಬರ್‌ 17ರಂದು ಬೆಂಗಳೂರಿನ ಜೆಪಿ ನಗರದ 6ನೇ ಹಂತದ ರೋಸ್ ಗಾರ್ಡನ್‌ ಬಳಿ ಚೀಲ ಮತ್ತು ಬೆಡ್‍ಶೀಟ್‍ನಲ್ಲಿ ಸುತ್ತಿದ್ದ ರೀತಿಯಲ್ಲಿ ಸಂಶಯಾಸ್ಪದವಾಗಿ ಮೃತದೇಹವೊಂದು ಪತ್ತೆಯಾಗಿತ್ತು. ಮೃತದೇಹದ ಮೈಮೇಲೆ ಯಾವುದೇ ಗಾಯದ ಗುರುತು ಇರಲಿಲ್ಲ. ಹಾಗಾಗಿ ಇದು ಕೊಲೆ ಅಲ್ಲ ಅಂತ ಮೇಲ್ನೋಟಕ್ಕೆ ಗೊತ್ತಾಗಿತ್ತು. ಆದರೆ ಆ ವ್ಯಕ್ತಿ ಸತ್ತಿದ್ದಂತೂ ನಿಜ. ಹಾಗಾದ್ರೆ ಆತ ಯಾರು? ನಿಗೂಢವಾಗಿ ಸತ್ತಿದ್ದು ಹೇಗೆ? ಈ ರೀತಿ ಬ್ಯಾಗ್‌ನಲ್ಲಿ ಶವ ತುಂಬಿ ಎಸೆದಿದ್ದು ಯಾರು? ಇತ್ಯಾದಿ ಪ್ರಶ್ನೆಗಳು ಉದ್ಭವಿಸಿದ್ದವು.

67 ವರ್ಷದ ಉದ್ಯಮಿ ತನ್ನ (35) ಮನೆಕೆಲಸದ ಮಹಿಳೆಯ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇತನು ನವೆಂಬರ್ 16 ರಂದು ತನ್ನ ಮನೆಕೆಲಸದ ಮಹಿಳೆಯ ಮನೆಗೆ ಭೇಟಿ ನೀಡಿದ್ದ ಮತ್ತು ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿದ್ದಾರೆ.

ಇನ್ನು ಇದನ್ನು ಪರಿಶೀಲಿಸಿದಾಗ ಅದು 67 ವರ್ಷದ ಟ್ರಾನ್ಸ್ ಪೋರ್ಟ್ ಉದ್ಯಮಿ ಬಾಲಸುಬ್ರಮಣಿ ಎನ್ನುವವರ ಶವ ಎನ್ನುವುದು ತಿಳಿದು ಬಂದಿತ್ತು. ಆದ್ರೆ ಅವರು ಈ ರೀತಿ ಶವವಾಗಿ ಪತ್ತೆಯಾಗಿದ್ದೇಕೆ?  ಎಂಬ ಪ್ರಶ್ನೆಗಳು ಉದ್ಭವಿಸಿದ್ದವು.ನವೆಂಬರ್ 16 ರಂದು ಬಾಲಸುಬ್ರಮಣಿಯನ್ ನಾಪತ್ತೆಯಾಗಿದ್ದರು. ಅಂದು ಸಂಜೆ ವೇಳೆಗೆ ಅವರು ಕುಟುಂಬದ ಸಂಪರ್ಕ ಕಳೆದುಕೊಂಡು, ನಾಪತ್ತೆಯಾಗಿದ್ದರು. ಅಂದು ಅವರು ತಮ್ಮ ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್‍ಗೆ ಕರೆದುಕೊಂಡು ಹೋಗಿ, ವಾಪಸ್ ಬಂದಿದ್ದರು. ಅದೇ ದಿನ ಸಂಜೆ ಸುಮಾರು 4.55ರ ವೇಳೆಗೆ ತಮ್ಮ ಸೊಸೆಗೆ ಕರೆ ಮಾಡಿದ್ದರು. ಸ್ವಲ್ಪ ಕೆಲಸ ಇದೆ, ಮುಗಿಸಿಕೊಂಡು ಬರ್ತೀನಿ ಅಂತ ಹೇಳಿದ್ದರು. ಬಳಿಕ ರಾತ್ರಿ ವೇಳೆಗೆ ಕರೆ ಮಾಡಿದ್ರೆ ಅವರ ಮೊಬೈಲ್ ಸ್ವಿಚ್ಛ್ ಆಫ್ ಆಗಿತ್ತು.

ಮಹಿಳೆಯನ್ನು ವಿಚಾರಣೆ ನಡೆಸಿದಾಗ, ಈ ಬಗ್ಗೆ ಒಪ್ಪಿಕೊಂಡಿದ್ದಾಳೆ. ಪೊಲೀಸರು ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಬಹುದು ಎಂದು ಮನೆಯವರು ಆತಂಕಗೊಂಡಿದ್ದರಿಂದ ಪತಿ ಮತ್ತು ಸಹೋದರನ ಸಹಾಯದಿಂದ ಶವವನ್ನು ರಸ್ತೆಯಲ್ಲಿ ಎಸೆದಿದ್ದಾಳೆ. ಬಾಲ ಸುಬ್ರಮಣಿಯನ್ ತನ್ನ ಮನೆಕೆಲಸದ ಮಹಿಳೆಯೊಂದಿಗೆ ಬಹಳ ದಿನಗಳಿಂದ ಸಂಬಂಧ ಹೊಂದಿದ್ದನು ಮತ್ತು ಅವನು ವಾರಕ್ಕೆ ಎರಡು ಬಾರಿ ಅವಳ ಮನೆಗೆ ಭೇಟಿ ನೀಡುತ್ತಿದ್ದನು ಎಂದು ತಿಳಿದು ಬಂದಿದೆ. ಬಾಲ ಸುಬ್ರಮಣಿಯನ್ ಕಳೆದ ವರ್ಷ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com