ರಾಮನಗರ: ಧಾರ್ಮಿಕ ಮತಾಂತರದ ವಿರುದ್ಧ ದೂರು ಸಲ್ಲಿಸಿದ ಹಿಂದೂ ಜಾಗರಣ ವೇದಿಕೆ

ಹಿಂದೂ ಜಾಗರಣ ವೇದಿಕೆ ಮತ್ತು ಗ್ರಾಮಸ್ಥರು ಬುಧವಾರ ರಾಮನಗರ ಜಿಲ್ಲೆಯ ಫಾರ್ಮ್ ಹೌಸ್‌ನಲ್ಲಿ ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ರಾಮನಗರ: ಹಿಂದೂ ಜಾಗರಣ ವೇದಿಕೆ ಮತ್ತು ಗ್ರಾಮಸ್ಥರು ಬುಧವಾರ ರಾಮನಗರ ಜಿಲ್ಲೆಯ ಫಾರ್ಮ್ ಹೌಸ್‌ನಲ್ಲಿ ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.

ಎಂ.ಕೆ ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ತೋಟದ ಮನೆಯನ್ನು ಖಾಲಿ ಮಾಡುವಂತೆ ಹಾಗೂ ಸರ್ಕಾರಿ ಜಾಗದಲ್ಲಿ ಅಳವಡಿಸಿರುವ ಶಿಲುಬೆಗಳನ್ನು ತೆರವು ಮಾಡುವಂತೆ ಒತ್ತಾಯಿಸಿದರು.

ದೂರಿನ ಪ್ರಕಾರ, ಚನ್ನಪಟ್ಟಣ ಪಟ್ಟಣ ಸಮೀಪದ ಕನ್ನಮಂಗಲ ಗ್ರಾಮದಲ್ಲಿ ಮಿಷನರಿಗಳು ಅಕ್ರಮವಾಗಿ ಪ್ರಾರ್ಥನಾ ಮಂದಿರವನ್ನು ನಿರ್ಮಿಸಿಕೊಂಡಿದ್ದಾರೆ. ಪ್ರತಿನಿತ್ಯ 200ಕ್ಕೂ ಹೆಚ್ಚು ಜನರನ್ನು ರಾಜ್ಯದ ಇತರೆ ಭಾಗಗಳಿಂದ ಕರೆತಂದು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ಜನರ ಬ್ರೈನ್ ವಾಶ್ ಮಾಡಲು ಡಿಜೆ ಸಂಗೀತ ಮತ್ತು ಸುಧಾರಿತ ಧ್ವನಿವರ್ಧಕಗಳನ್ನು ಬಳಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಗ್ರಾಮಸ್ಥರು ನೀಡಿದ ದೂರುಗಳನ್ನು ಪರಿಹರಿಸಲು ಅಧಿಕಾರಿಗಳು ವಿಫಲರಾದಾಗ, ಅವರು ಹಿಂದೂ ಜಾಗರಣ ವೇದಿಕೆಯನ್ನು ಸಂಪರ್ಕಿಸಿದರು. ಅಕ್ರಮ ಪ್ರಾರ್ಥನಾ ಮಂದಿರವನ್ನು ತೆರವು ಮಾಡಬೇಕು ಮತ್ತು ಸ್ಥಳೀಯ ಆಡಳಿತದ ಪರವಾನಗಿ ಷರತ್ತುಗಳಿಗೆ ಜಮೀನು ಬಳಕೆ ಸೀಮಿತಗೊಳಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಸರ್ಕಾರಿ ಜಾಗದಲ್ಲಿ ಅಳವಡಿಸಿರುವ ಏಸುಕ್ರಿಸ್ತರ ಶಿಲುಬೆ ಹಾಗೂ ಪ್ರತಿಮೆಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಮತ್ತು ಹಿಂದೂ ಸಂಘಟನೆಗಳು ಒತ್ತಾಯಿಸಿವೆ.

ಜನರನ್ನು ಮತಾಂತರಗೊಳಿಸಲು ನಡೆಯುವ ಧಾರ್ಮಿಕ ಕಾರ್ಯಗಳಿಂದಾಗಿ ಶಬ್ದ ಮಾಲಿನ್ಯ ಉಂಟಾಗುತ್ತಿರುವ ಕೂಡ ಮತ್ತೊಂದು ಉಪದ್ರವವಾಗಿದೆ. ಬೇರೆ ಕಡೆಯಿಂದ ಜನರನ್ನು ಕರೆತಂದು ಮತಾಂತರ ಮಾಡುವುದನ್ನು ತಡೆಯುವಂತೆಯೂ ದೂರಿನಲ್ಲಿ ಆಗ್ರಹಿಸಲಾಗಿದೆ.

ಡೆನ್ನಿಸ್ ಜಾರ್ಜ್ ಮತ್ತು ಅವರ ಕುಟುಂಬ, ಅಲ್ವಿನ್ ಮತ್ತು ಅವರ ಸಂಗಡಿಗರನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಿದ ಗ್ರಾಮಸ್ಥರು, ಈ ಬೆಳವಣಿಗೆಯ ಬಗ್ಗೆ ಪ್ರಶ್ನಿಸಿದಾಗ ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಯನ್ನೂ ನಡೆಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com