ಕರ್ನಾಟಕದಲ್ಲಿ ಪಾರ್ಶ್ವ ಸೂರ್ಯಗ್ರಹಣ ಗೋಚರ: ಬೆಂಗಳೂರು ಬಹುತೇಕ ಸ್ತಬ್ಧ

ದೀಪಾವಳಿ ಅಮಾವಾಸ್ಯೆ ದಿನ (ಅ.25) ರಂದು ಸೂರ್ಯ ಗ್ರಹಣ ಸಂಭವಿಸಿದ್ದು, ರಾಜ್ಯದ ಹಲವು ನಗರಗಳಲ್ಲಿ ಭಾಗಶಃ ಗ್ರಹಣ ಗೋಚರವಾಗಿದೆ. 
ಕರ್ನಾಟಕದಲ್ಲಿ ಪಾರ್ಶ್ವ ಸೂರ್ಯ ಗ್ರಹಣ
ಕರ್ನಾಟಕದಲ್ಲಿ ಪಾರ್ಶ್ವ ಸೂರ್ಯ ಗ್ರಹಣ

ಬೆಂಗಳೂರು: ದೀಪಾವಳಿ ಅಮಾವಾಸ್ಯೆ ದಿನ (ಅ.25) ರಂದು ಸೂರ್ಯ ಗ್ರಹಣ ಸಂಭವಿಸಿದ್ದು, ರಾಜ್ಯದ ಹಲವು ನಗರಗಳಲ್ಲಿ ಭಾಗಶಃ ಗ್ರಹಣ ಗೋಚರವಾಗಿದೆ. 
    
ಸಂಜೆ 5:12 ರ ವೇಳೆಯಲ್ಲಿ ಗೋಚರಿಸಿದ ಗ್ರಹಣಕ್ಕೆ ಸಂಜೆ 6 ಗಂಟೆ ವೇಳೆಗೆ ಸೂರ್ಯಾಸ್ತದೊಂದಿಗೆ ಮುಕ್ತಿ ದೊರೆಯಿತು.  ಗ್ರಹಣದ ಪರಿಣಾಮ ಬೆಂಗಳೂರು ಬಹುತೇಕ ಕಡೆ ಸ್ತಬ್ಧವಾಗಿ ಜನನಿಬಿಡ ರಸ್ತೆಗಳಲ್ಲಿ ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು ವಿಶೇಷವಾಗಿತ್ತು. ಗ್ರಹಣದ ಪರಿಣಾಮವಾಗಿ ನಗರದಲ್ಲಿ ಬಹುತೇಕ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು 

ಭಾರತದ ಹಲವೆಡೆ ಗ್ರಹಣ ಗೋಚರವಾಗಿದ್ದು, ಮೊದಲಿಗೆ ಅಮೃತಸರ​​ದಲ್ಲಿ ಸಂಜೆ 4 ಗಂಟೆ 19 ನಿಮಿಷಕ್ಕೆ ಗ್ರಹಣ ಗೋಚರವಾಯಿತು

ಸೂರ್ಯಗ್ರಹಣ ಹಿನ್ನೆಲೆ ರಾಜ್ಯದ ಹಲವು ದೇವಸ್ಥಾನಗಳನ್ನೂ ಸಹ ಬಂದ್​ ಮಾಡಲಾಗಿತ್ತು. ಗವಿಪುರಂನ ಗವಿಗಂಗಾಧರೇಶ್ವರ ದೇವಸ್ಥಾನ, ಶಿರಸಿ ಮಾರಿಕಾಂಬ, ಚಾಮುಂಡೇಶ್ವರಿ ದೇವಸ್ಥಾನ, ಧರ್ಮಸ್ಥಳದ ಮಂಜುನಾಥ ದೇವಸ್ಥಾನ, ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಗಳನ್ನು ಬಂದ್ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com