ಬೆಂಗಳೂರು ಸೇರಿ ರಾಜ್ಯಾದ್ಯಂತ ಚಳಿಯ ಅನುಭವ, ಆದರೆ ಚಳಿಗಾಲ ಇನ್ನೂ ಆರಂಭವಾಗಿಲ್ಲ: ಹವಾಮಾನ ಇಲಾಖೆ

ದೀಪಾವಳಿ ಮುಗಿಯುತ್ತಿದ್ದಂತೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಶೀತಹವೆ, ಚಳಿಯ ಅನುಭವವಾಗುತ್ತಿದೆ. ಇತ್ತೀಚೆಗೆ ರಾತ್ರಿಯಲ್ಲಿ ಕನಿಷ್ಠ ತಾಪಮಾನ ಕಡಿಮೆಯಾಗುತ್ತಿದ್ದು, ಚಳಿಗಾಲದ ಆರಂಭ ಎಂದು ಭಾವಿಸಬಹುದು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದೀಪಾವಳಿ ಮುಗಿಯುತ್ತಿದ್ದಂತೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಶೀತಹವೆ, ಚಳಿಯ ಅನುಭವವಾಗುತ್ತಿದೆ. ಇತ್ತೀಚೆಗೆ ರಾತ್ರಿಯಲ್ಲಿ ಕನಿಷ್ಠ ತಾಪಮಾನ ಕಡಿಮೆಯಾಗುತ್ತಿದ್ದು, ಚಳಿಗಾಲದ ಆರಂಭ ಎಂದು ಭಾವಿಸಬಹುದು. 

ಆದರೆ ಭಾರತೀಯ ಹವಾಮಾನ ಇಲಾಖೆಯ (IMD) ಇದು ನಿಜವಾದ ಚಳಿಗಾಲ ಆರಂಭವಲ್ಲ ಎನ್ನುತ್ತಿದ್ದಾರೆ. ಮೊನ್ನೆ ಅಕ್ಟೋಬರ್ 25ರಂದು ಬೆಂಗಳೂರಿನಲ್ಲಿ 15.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು. ಅಕ್ಟೋಬರ್ 26 ರಂದು ನಗರದಲ್ಲಿ ಕನಿಷ್ಠ 15.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. IMD ಅಂಕಿಅಂಶಗಳ ಪ್ರಕಾರ, 2011 ರಿಂದ ಬೆಂಗಳೂರಿನಲ್ಲಿ ಅಕ್ಟೋಬರ್ ನಲ್ಲಿ ಈ ವರ್ಷವೇ ಕನಿಷ್ಠ ತಾಪಮಾನ ದಾಖಲಾಗಿದೆ. 

ಇದುವರೆಗೆ ದಾಖಲಾದ ಕನಿಷ್ಠ ಕನಿಷ್ಠ ತಾಪಮಾನವು ಅಕ್ಟೋಬರ್ 31, 1974 ರಂದು 13.2 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಅಕ್ಟೋಬರ್ 30, 2018 ರಂದು, ಬೆಂಗಳೂರಿನಲ್ಲಿ ಕನಿಷ್ಠ 16.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು, ಇದು ಇಲ್ಲಿಯವರೆಗೆ ಕನಿಷ್ಠ ಎಂದು ಪರಿಗಣಿಸಲಾಗಿದೆ. ಉತ್ತರ-ಆಂತರಿಕ ಕರ್ನಾಟಕದ ಪ್ರದೇಶಗಳು ಕಡಿಮೆ ಕನಿಷ್ಠ ತಾಪಮಾನವನ್ನು ದಾಖಲಿಸಿವೆ, ಬಾಗಲಕೋಟೆ ಮತ್ತು ಬೀದರ್‌ನಲ್ಲಿ 12 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

IMD-ಬೆಂಗಳೂರು-ಪ್ರಭಾರ ನಿರ್ದೇಶಕಿ ಗೀತಾ ಅಗ್ನಿಹೋತ್ರಿ, ಇದು ಚಳಿಗಾಲದ ಆರಂಭವಲ್ಲ ಎಂದಿದ್ದಾರೆ. ಸಿತ್ರಾಂಗ್ ಚಂಡಮಾರುತದಿಂದಾಗಿ ಇದು ತಾತ್ಕಾಲಿಕ ವಿದ್ಯಮಾನವಾಗಿದೆ, ಇದು ಭೂ ಮೇಲ್ಮೈಯಿಂದ ಎಲ್ಲಾ ತೇವಾಂಶವನ್ನು ಹೀರಿಕೊಳ್ಳುತ್ತದೆ. ಪರಿಣಾಮವಾಗಿ, ಯಾವುದೇ ಮೋಡದ ರಚನೆಯಿಲ್ಲ,ದೀರ್ಘ ತರಂಗ ವಿಕಿರಣವು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ, ಜನರು ಚಳಿಗಾಲದಂತಹ ಚಳಿಯನ್ನು ಅನುಭವಿಸುತ್ತಿದ್ದಾರೆ, ಹೀಗಾದಾಗ ಹಗಲಿನ ಉಷ್ಣತೆಯು ಹೆಚ್ಚು ಮತ್ತು ಶುಷ್ಕವಾಗಿರುತ್ತದೆ, ರಾತ್ರಿಯ ತಾಪಮಾನವು ಕಡಿಮೆ ಇರುತ್ತದೆ. 

ಉತ್ತರ ಕರ್ನಾಟಕದ ಕೆಲವು ಭಾಗಗಳು ಒಂದು ವಾರದಿಂದ ಕನಿಷ್ಠ ತಾಪಮಾನವಿದೆ. IMD ವಾಸ್ತವವಾಗಿ ನಾಲ್ಕು ದಿನಗಳ ನಂತರ ಮಳೆಯಾಗುವ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವ್ಯವಸ್ಥೆಗಳು ರೂಪುಗೊಳ್ಳುತ್ತಿದ್ದು, ತಮಿಳುನಾಡಿನಲ್ಲಿ ಈಗಾಗಲೇ ಮಳೆಯಾಗುತ್ತಿದೆ. ಹಾಗಾಗಿ ಅಕ್ಟೋಬರ್ 29 ರಿಂದ ಈಶಾನ್ಯ ಮಾನ್ಸೂನ್ ಆಗಮನವಾಗಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com