2023ರ ವಿಧಾನಸಭೆ ಚುನಾವಣೆಗೆ 'ಎಲೆಕ್ಷನ್ ಹಿಂದೂ' ರಾಹುಲ್ ಗಾಂಧಿ ತಯಾರಿ: ಬಿಜೆಪಿ ಟೀಕೆ

ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವಕ್ಕೆ ಆಗಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರೊಂದಿಗೆ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿದರು. ಈ ವೇಳೆಯಲ್ಲಿನ ವಿಡಿಯೊವನ್ನು ಹಂಚಿಕೊಂಡಿರುವ ಬಿಜೆಪಿ ಸರಣಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.
ರಾಹುಲ್ ಗಾಂಧಿಯವರಿಗೆ ಲಿಂಗದೀಕ್ಷೆ ಮಾಡಿದ ಮುರುಘಾ ಮಠದ ಶ್ರೀಗಳು
ರಾಹುಲ್ ಗಾಂಧಿಯವರಿಗೆ ಲಿಂಗದೀಕ್ಷೆ ಮಾಡಿದ ಮುರುಘಾ ಮಠದ ಶ್ರೀಗಳು
Updated on

ಬೆಂಗಳೂರು: ಸಿದ್ದರಾಮಯ್ಯನವರ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆಗೆ ಆಗಮಿಸಿರುವ ರಾಹುಲ್ ಗಾಂಧಿ ವಿರುದ್ಧ ಕರ್ನಾಟಕ ಕಾಂಗ್ರೆಸ್ ಕಿಡಿಕಾರಿದೆ. ರಾಹುಲ್ ಗಾಂಧಿಯನ್ನು 'ಎಲೆಕ್ಷನ್ ಹಿಂದೂ' ಎಂದು ಕರೆದಿದೆ.

ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವಕ್ಕೆ ಆಗಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರೊಂದಿಗೆ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿದರು. ಈ ವೇಳೆಯಲ್ಲಿನ ವಿಡಿಯೊವನ್ನು ಹಂಚಿಕೊಂಡಿರುವ ಬಿಜೆಪಿ ಸರಣಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.

'ಎಲೆಕ್ಷನ್ ಹಿಂದೂ' ರಾಹುಲ್ ಗಾಂಧಿ 2023ರ ವಿಧಾನಸಭೆ ಚುನಾವಣೆಗೆ ತಯಾರಾಗುತ್ತಿದ್ದಾರೆ' ಎಂದು ಬಿಜೆಪಿ ಟೀಕಿಸಿದೆ.

ಸಿದ್ದರಾಮಯ್ಯ ಅಮೃತ ಮಹೋತ್ಸವ ಮತ್ತು ಕರ್ನಾಟಕ. ಮೂರು ಜನರು ಹತ್ಯೆಗೀಡಾಗಿದ್ದಾರೆ. ಕಳೆದೆರೆಡು ದಿನಗಳಲ್ಲಿ 11 ಸಾವು ಸಂಭವಿಸಿದೆ. ಕಾಂಗ್ರೆಸ್ ಕಾರ್ಯಕರ್ತ ಅಪಘಾತದಲ್ಲಿ ಮೃತ್ಯು. ಕಾಂಗ್ರೆಸ್ಸಿಗರೇ, ಸೂತಕದ ಮನೆಯಲ್ಲಿ ಸಂಭ್ರಮದ ವಾತಾವರಣ ಎಷ್ಟು ಸರಿ!? ನಾಡಿನಾದ್ಯಂತ ಕಂಡು ಕೇಳರಿಯದ ಮಳೆಯಾಗಿ ಅಪಾರ ಸಾವು-ನೋವುಗಳುಂಟಾಗಿದೆ. ಈ ಸಂದರ್ಭದಲ್ಲೂ ಕಾಂಗ್ರೆಸ್‌ ಪಕ್ಷವೇ ಮುಂದೆ ನಿಂತು ಅದ್ದೂರಿ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವುದು ರಾಜ್ಯದ ಜನತೆಯ ಕಣ್ಣೀರಿಗೆ ಮಾಡುತ್ತಿರುವ ಅವಮಾನ ಎಂದು ಆರೋಪಿಸಿದೆ.

ಮುಂದುವರಿದು, ಒಬ್ಬ ಕಾರ್ಯಕರ್ತನನ್ನು ಕಳೆದುಕೊಂಡೆವು ಎಂಬ ಕಾರಣಕ್ಕೆ ನಾವು ಜನೋತ್ಸವ ಕಾರ್ಯಕ್ರಮವನ್ನೇ ರದ್ದು ಮಾಡಿದ್ದೇವೆ. ಆದರೆ,  ಅಮೃತ ಮಹೋತ್ಸವಕ್ಕೆ ಆಗಮಿಸುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತ ಅಪಘಾತದಲ್ಲಿ ಮೃತಪಟ್ಟಾಗಲೂ ಕಾಂಗ್ರೆಸ್‌ ಕೇಕ್‌ ಕತ್ತರಿಸಿಕೊಂಡು ಸಂಭ್ರಮಿಸುತ್ತಿದೆ. ಕಾರ್ಯಕರ್ತನ ಸಾವಿಗೂ ಇಲ್ಲಿ ಬೆಲೆಯಿಲ್ಲ! ಎಂದಿದೆ.

ಗಾಂಧಿ ಕುಟುಂಬದ ಹೊರತಾದ ವ್ಯಕ್ತಿಯ ವೈಭವೀಕರಣವನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಸಹಿಸುವುದಿಲ್ಲ. ದೇವರಾಜ ಅರಸು, ಬಂಗಾರಪ್ಪ ಅವರ ರಾಜಕೀಯ ಜೀವನದ ಅಂತ್ಯ ಹೇಗಾಯಿತು ಎಂಬುದನ್ನು ರಾಜ್ಯದ ಜನತೆ ಮರೆತಿಲ್ಲ. ಎಚ್ಚರಿಕೆಯ ಕರೆಗಂಟೆಯಿದು!. 75ನೇ ವರ್ಷದ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು. ನಕಲಿ ಗಾಂಧಿ ಕುಟುಂಬ ಹೊರತುಪಡಿಸಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ಸಿಗರಿಂದ ಬೇರೊಬ್ಬ ವ್ಯಕ್ತಿಯ 'ವ್ಯಕ್ತಿಪೂಜೆ' ನಡೆಸುವಂತೆ ಮಾಡಿದ ಸಿದ್ದರಾಮಯ್ಯ ಅವರ ಹಠಕ್ಕೂ ಅಭಿನಂದನೆಗಳು! ಎಂದು ಬಿಜೆಪಿ ಟೀಕಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com