10 ಸಾವಿರ ಮಣ್ಣಿನ, ಬೀಜದ ಗಣೇಶ ಮೂರ್ತಿಗಳ ತಯಾರಿ: ಮಾಲಿನ್ಯ ನಿಯಂತ್ರಣ ಮಂಡಳಿ
ಗಣೇಶ ಚತುರ್ಥಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸಲು 10,000 ಮಣ್ಣಿನ ಮತ್ತು ಬೀಜದ ಗಣೇಶ ಮೂರ್ತಿಗಳನ್ನು ತಯಾರಿಸುವುದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹೇಳಿದೆ.
Published: 13th August 2022 11:02 AM | Last Updated: 13th August 2022 12:31 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಗಣೇಶ ಚತುರ್ಥಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸಲು 10,000 ಮಣ್ಣಿನ ಮತ್ತು ಬೀಜದ ಗಣೇಶ ಮೂರ್ತಿಗಳನ್ನು ತಯಾರಿಸುವುದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹೇಳಿದೆ.
ಈ ಉದ್ದೇಶಕ್ಕಾಗಿ ಕೆಎಸ್‌ಪಿಸಿಬಿ ಬೆಂಗಳೂರು ಗಣೇಶ ಉತ್ಸವ ಸಂಸ್ಥೆಯೊಂದಿಗೆ ಕೈಜೋಡಿಸಲಿದ್ದು, ಮಂಡಳಿಯು ಗಿನ್ನೆಸ್ ವಿಶ್ವ ದಾಖಲೆಗೆ ಸೇರುವ ಗುರಿ ಹೊಂದಿದೆ ಎಂದು ಕೆಎಸ್‌ಪಿಸಿಬಿ ಅಧ್ಯಕ್ಷ ಶಾಂತ್ ಎ ತಿಮ್ಮಯ್ಯ ಹೇಳಿದ್ದಾರೆ.

ತಿಮ್ಮಯ್ಯ ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್‌ನಿಂದಾಗಿ ಈ ಹಿಂದೆ ಕೆಎಸ್‌ಪಿಸಿಬಿ (ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ) ಆನ್‌ಲೈನ್ ಅಭಿಯಾನವನ್ನು ನಡೆಸಿತ್ತು. ಅರಿಶಿಣ ಗಣೇಶನನ್ನು ತಯಾರಿಸಿ ಪ್ರಚಾರ ಮಾಡಿತ್ತು. ಈ ಬಾರಿ ಆಗಸ್ಟ್ 28 ರಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ 10,000 ಜನರು ಸ್ವಂತವಾಗಿ ಮೂರ್ತಿಯನ್ನು ತಯಾರಿಸಿ ಉತ್ಸವಕ್ಕೆ ಮನೆಗೆ ಕೊಂಡೊಯ್ಯುವ ವ್ಯವಸ್ಥೆ ಮಾಡಲಾಗುವುದು. ಪರಿಸರ ಸ್ನೇಹಿ ವಿಗ್ರಹಗಳಿಗಾಗಿ ಮಣ್ಣಿನಲ್ಲಿ ಸಸ್ಯ ಬೀಜಗಳನ್ನು ಸೇರಿಸಲಾಗುವುದು ಎಂದು ಅವರು ಹೇಳಿದರು.
ಇದಲ್ಲದೆ, ಭಕ್ತರು ವಿಗ್ರಹಗಳನ್ನು ಮುಳುಗಿಸುವುದರಿಂದ ಮಾಲಿನ್ಯವನ್ನು ತಡೆಗಟ್ಟಲು ಕೆಎಸ್‌ಪಿಸಿಬಿ ಎಲ್ಲಾ ಕೆರೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಗಣೇಶನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ತಿಮ್ಮಯ್ಯ ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿ ಗಣೇಶೋತ್ಸವ ನಿರ್ಬಂಧ ರದ್ದು: ಕಂದಾಯ ಸಚಿವ ಆರ್ ಅಶೋಕ್
ಕೆಎಸ್‌ಪಿಸಿಬಿ ಸುತ್ತೋಲೆಯಲ್ಲಿ ಗಣೇಶ ಮೂರ್ತಿಗಳನ್ನು 5 ಅಡಿಗಳಿಗೆ ಸೀಮಿತಗೊಳಿಸಲಾಗಿದ್ದು, ಧ್ವನಿವರ್ಧಕಗಳು ಮತ್ತು DJ ಸೆಟ್‌ಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಮತ್ತು ಅನುಮತಿಸುವ ಡೆಸಿಬಲ್ ಮಟ್ಟದಲ್ಲಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಗಳವರೆಗೆ ಸ್ಪೀಕರ್‌ಗಳನ್ನು ಅನುಮತಿಸಬಹುದು. ಅಂತೆಯೇ ಮೈಸೂರು ರಾಜಮನೆತನದ ಕುಡಿ ಯಧುವೀರ್ ಒಡೆಯರ್ ಅವರನ್ನು ಕೆಎಸ್‌ಪಿಸಿಬಿಯ ರಾಯಭಾರಿಯಾಗಿ ನೇಮಿಸಲಾಗಿದೆ ಮತ್ತು ಪರಿಸರ ಮತ್ತು ಪರಿಸರ ಸ್ನೇಹಿ ಗಣೇಶನ ಸಂದೇಶದೊಂದಿಗೆ ವೀಡಿಯೊಗಳು ಮತ್ತು ಆಡಿಯೊಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಚಿನ್ನಾಭರಣ ಸಮೇತ ಗಣೇಶ ವಿಸರ್ಜನೆ: ಮೂರು ದಿನಗಳ ಬಳಿಕ ಹುಡುಕಿ ತೆಗೆದ ಸ್ಕೂಬಾ ಡೈವರ್ಸ್!
ಬೆಂಗಳೂರು ಗಣೇಶ ಉತ್ಸವದ ನಂದೀಶ್ ಮರಿಯಣ್ಣ ಮಾತನಾಡಿ, ಸುಮಾರು 1,000 ಲಲಿತಕಲಾ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಮಣ್ಣಿನ ಗಣಪತಿಗಳನ್ನು ಮಾಡಲು ಸಹಾಯ ಮಾಡುತ್ತಾರೆ. ಭಾಗವಹಿಸುವವರಿಗೆ ಆಗಸ್ಟ್ 28 ರಂದು ಮೂರ್ತಿ ಮಾಡಲು ಮಣ್ಣು, ನೀರು, ಬೀಜಗಳು ಮತ್ತು ಮರದ ಹಾಳೆಯನ್ನು ನೀಡಲಾಗುವುದು. “ಸಾಮಾಗ್ರಿ 150 ರೂ. ವೆಚ್ಚವಾಗಲಿದ್ದು, 15 ಲಕ್ಷ ರೂ. ಕೆಎಸ್‌ಪಿಸಿಬಿ ಭಾಗಶಃ ಹಣವನ್ನು ನೀಡುತ್ತಿದ್ದು, ಸ್ನೇಹಿತರು ಮತ್ತು ಹಿತೈಷಿಗಳಿಂದ ಮೊತ್ತವನ್ನು ಸಂಗ್ರಹಿಸಲಾಗುವುದು ಎಂದು ಹೇಳಿದರು.