ಡಾ ಕೆ ಸುಧಾಕರ್
ಡಾ ಕೆ ಸುಧಾಕರ್

ಕೋವಿಡ್ ಸೋಂಕಿತರಿಗೆ ಹೆಚ್ಚುವರಿ ಬಿಲ್: 577 ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ನೋಟಿಸ್; ಡಾ.ಕೆ ಸುಧಾಕರ್

ಸರ್ಕಾರದ ನಿಯಮದ ಹೊರತಾಗಿಯೂ ಕೋವಿಡ್ ಸೋಂಕಿತರಿಂದ ಹೆಚ್ಚುವರಿ ಹಣ ಪಡೆಯುತ್ತಿರುವ 577 ಖಾಸಗಿ ಆಸ್ಪತ್ರೆಗಳಿಗೆ ರಾಜ್ಯ ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ ಎಂದು ಆರೋಗ್ಯ ಸಚಿವ ಡಾ ಸುಧಾಕರ್ ಹೇಳಿದ್ದಾರೆ.

ಬೆಂಗಳೂರು: ಸರ್ಕಾರದ ನಿಯಮದ ಹೊರತಾಗಿಯೂ ಕೋವಿಡ್ ಸೋಂಕಿತರಿಂದ ಹೆಚ್ಚುವರಿ ಹಣ ಪಡೆಯುತ್ತಿರುವ 577 ಖಾಸಗಿ ಆಸ್ಪತ್ರೆಗಳಿಗೆ ರಾಜ್ಯ ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ ಎಂದು ಆರೋಗ್ಯ ಸಚಿವ ಡಾ ಸುಧಾಕರ್ ಹೇಳಿದ್ದಾರೆ.

ಸರ್ಕಾರದ ABARK ಅಡಿಯಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಹೆಚ್ಚುವರಿ ಹಣವನ್ನು ವಿಧಿಸಿದ್ದಕ್ಕಾಗಿ 577 ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆಯು ನೋಟಿಸ್ ನೀಡಿದೆ, ಜೊತೆಗೆ ಆರೋಗ್ಯ ಇಲಾಖೆಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಅಡಿಯಲ್ಲಿ ಹಣವನ್ನು ಕ್ಲೈಮ್ ಮಾಡಿದೆ ಎಂದು ಡಾ ಸುಧಾಕರ್ ಹೇಳಿದ್ದಾರೆ.

ಆಯುಷ್ಮಾನ್ ಭಾರತ್ ಅಡಿಯಲ್ಲಿ ಸರ್ಕಾರವು ಉಲ್ಲೇಖಿಸಿದ ಈ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು SAST ನಿಂದ ಮತ್ತು ಆರೋಗ್ಯ ಕರ್ನಾಟಕ (ABARK) ಯೋಜನೆ ಹಣವನ್ನು ಕ್ಲೈಮ್ ಮಾಡುವುದರ ಜೊತೆಗೆ, ಕೋವಿಡ್ ರೋಗಿಗಳಿಂದ 18.87 ಕೋಟಿ "ಹೆಚ್ಚುವರಿ ಹಣ" ವಸೂಲಿ ಮಾಡಿದ ರಾಜ್ಯದ 577 ಖಾಸಗಿ ಆಸ್ಪತ್ರೆಗಳ ವಿರುದ್ಧ ರಾಜ್ಯ ಆರೋಗ್ಯ ಇಲಾಖೆಯು ದೂರುಗಳನ್ನು ಸ್ವೀಕರಿಸಿದೆ. ಹೀಗಾಗಿ ಈ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದರು. 

"ಈವರೆಗೆ SAST ಆ ಆಸ್ಪತ್ರೆಗಳಿಂದ 1,58,22,359 ರೂಗಳನ್ನು ವಸೂಲಿ ಮಾಡಲಾಗಿದ್ದು, ಅದನ್ನು 403 ರೋಗಿಗಳಿಗೆ ಮರುಪಾವತಿ ಮಾಡಲಾಗಿದೆ. ಉಳಿದ ಮೊತ್ತವನ್ನು ಇತರ ರೋಗಿಗಳಿಗೆ ಮರುಪಾವತಿ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ. ಹಾಗೆಯೇ ನಾವು ಕೆಲವು ಖಾಸಗಿ ಆಸ್ಪತ್ರೆಗಳಿಗೆ ABARK ಅಡಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಬಿಡುಗಡೆ ಮಾಡಬೇಕಾದ ಕೆಲವು ಹಣವನ್ನು ಹಿಡಿದಿಟ್ಟುಕೊಂಡಿದ್ದೇವೆ. ಎಂದು ಹೇಳಿದ್ದಾರೆ. 

ABARK ಅಡಿಯಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ SAST ಅಡಿಯಲ್ಲಿ ರಾಜ್ಯ ಆರೋಗ್ಯ ಇಲಾಖೆ, ಮಾರ್ಚ್ 2020 ರಿಂದ ಮಾರ್ಚ್ 2021 ರವರೆಗೆ ಮೊದಲ ಕೋವಿಡ್ ಅಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ 391.26 ಕೋಟಿ ರೂಪಾಯಿಗಳ ಬಿಲ್‌ಗಳನ್ನು ಪಾವತಿಸಿದೆ. ಏಪ್ರಿಲ್ 2021 ರಿಂದ ಡಿಸೆಂಬರ್ 2021 ರವರೆಗಿನ 2ನೇ ಅಲೆ ವೇಳೆ ಖಾಸಗಿ ಆಸ್ಪತ್ರೆಗಳಿಗೆ 376.76 ಕೋಟಿ ರೂಪಾಯಿಗಳ ಬಿಲ್‌ ಮತ್ತು ಜನವರಿ 2022 ರಿಂದ ಮಾರ್ಚ್ 2022 ರವರೆಗೆ ಮೂರನೇ ಅಲೆ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ 11.80 ಕೋಟಿ ರೂಪಾಯಿಗಳ ಬಿಲ್‌ಗಳನ್ನು ಪಾವತಿ ಮಾಡಿದ್ದೇವೆ ಎಂದು ಅವರು ಹೇಳಿದರು. 

ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ ಕೋವಿಡ್ ಚಿಕಿತ್ಸೆಯ ಸಮಯದಲ್ಲಿ ರೋಗಿಗಳಿಗೆ ಹಣ ವಸೂಲಿ ಮಾಡಿದ 65 ಸರ್ಕಾರಿ ಆಸ್ಪತ್ರೆಗಳ ವಿರುದ್ಧ ದೂರುಗಳನ್ನು ಸಹ ಸ್ವೀಕರಿಸಿದ್ದು, ಖಾಸಗಿ ಕೋವಿಡ್ ರೋಗಿಗಳಿಂದ (ಸರ್ಕಾರದಿಂದ ಉಲ್ಲೇಖಿಸಲ್ಪಡದ) ರಾಜ್ಯ ಸರ್ಕಾರವು ನಿಗದಿಪಡಿಸಿದ / ಮಿತಿಗೊಳಿಸಿದ 'ಕೋವಿಡ್ ಚಿಕಿತ್ಸೆಗಾಗಿ ಪ್ಯಾಕೇಜ್ ವೆಚ್ಚ'ಕ್ಕಿಂತ 'ಹೆಚ್ಚುವರಿ ಹಣವನ್ನು' ವಿಧಿಸುವ ಕುರಿತು 54 ಆಸ್ಪತ್ರೆಗಳ ವಿರುದ್ಧ ಆರೋಗ್ಯ ಇಲಾಖೆಯು 68 ದೂರುಗಳನ್ನು ಸ್ವೀಕರಿಸಿದೆ. ಈ ಪೈಕಿ 53 ದೂರುಗಳು ಬೆಂಗಳೂರಿನಿಂದ ಬಂದಿವೆ. ಮತ್ತು ಅವರಲ್ಲಿ ಹತ್ತು ಮಂದಿ ರಾಜ್ಯದ ಇತರ ಭಾಗದವರು. ಮತ್ತು ಈ ಆಸ್ಪತ್ರೆಗಳು ರೋಗಿಗಳಿಂದ Rs1,86,79,995 ಮೌಲ್ಯದ ಬಿಲ್‌ಗಳನ್ನು ಸಂಗ್ರಹಿಸಿವೆ. ಕೆಲವು ಖಾಸಗಿ ಆಸ್ಪತ್ರೆಗಳು ಇದುವರೆಗೆ ಐದು ರೋಗಿಗಳಿಗೆ 10,35,859 ರೂ.ಗಳನ್ನು ಮರುಪಾವತಿ ಮಾಡಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. 

ಈ ಪ್ರಕರಣಗಳನ್ನು ಕೆಪಿಎಂಇ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳು) ಕಾಯ್ದೆ ಅಥವಾ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಕುಂದುಕೊರತೆ ಪರಿಹಾರ ಸಮಿತಿಗಳು ಮತ್ತು ಆರೋಗ್ಯ ಇಲಾಖೆಯ ನಿರ್ದೇಶನಗಳೊಂದಿಗೆ ಬೆಂಗಳೂರಿನ ಬಿಬಿಎಂಪಿಯಿಂದ ನಿರ್ವಹಿಸಲಾಗುತ್ತದೆ ಎಂದು ಹೇಳಿದರು.
 

Related Stories

No stories found.

Advertisement

X
Kannada Prabha
www.kannadaprabha.com