ಶಾಲಾ ಪ್ರವಾಸಕ್ಕೆ ತೆರಳಿದ್ದ ಬಸ್'ನ ಬ್ರೇಕ್ ಫೇಲ್: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
    
ಮಹಾಬಲೇಶ್ವರ ಬಳಿಯ ಸತಾರಾ ರಸ್ತೆಯ ಘಾಟ್‌ನಲ್ಲಿ ಶಾಲಾ‌ ಪ್ರವಾಸಕ್ಕೆಂದು ಹೋಗಿದ್ದ ಸರ್ಕಾರಿ ಬಸ್ ಬ್ರೇಕ್ ಫೇಲ್​​ ಆಗಿದೆ. ಅದೃಷ್ಟವಶಾತ್ ಚಾಲಕನ ಚಾಣಕ್ಷತನದಿಂದ ಭಾರಿ ಅನಾಹುತ ತಪ್ಪಿದ್ದಾರೆ. ಬಸ್​ನಲ್ಲಿದ್ದ 50 ಶಾಲಾ ಮಕ್ಕಳು ಸೇರಿ ನಾಲ್ವರು ಶಿಕ್ಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಎಸ್.ಡಿ.ಹೈಸ್ಕೂಲ್‌ನ ಮಕ್ಕಳು, ಸಿಬ್ಬಂದಿ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರವಾಸಕ್ಕೆ ಹೋಗಿದ್ದ ವೇಳೆ ಘಾಟ್‌ನಲ್ಲಿ ಬ್ರೇಕ್ ಫೇಲ್ ಆಗಿ ಬಸ್‌ ಪ್ರಪಾತಕ್ಕೆ ಉರುಳುತ್ತಿತ್ತು. ಈ ವೇಳೆ ಚಾಲಕ ಚಾಣಕ್ಷತನದಿಂದ ಕಂದಕಕ್ಕೆ ಉರುಳ್ತಿದ್ದ ಬಸ್‌ನ್ನು ಗುಡ್ಡಕ್ಕೆ ತಾಗಿಸಿ ನಿಲ್ಲಿಸಿದ್ದಾನೆ. ಇದರಿಂದ ಭಾರಿ ಅನಾಹುತ ತಪ್ಪಿದೆ.

ಈ ವೇಳೆ ರಸ್ತೆಯಲ್ಲಿ ಚಲಿಸುತ್ತಿದ್ದ ಇತರ ವಾಹನಗಳು ತಕ್ಷಣವೇ ನಿಲ್ಲಿಸಿ ಗಾಯಗೊಂಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಧಾವಿಸಿದರು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ವೈದ್ಯಕೀಯ ನೆರವು ನೀಡುವಲ್ಲಿ ಸಹಕರಿಸಿದರು. ಎಲ್ಲಾ ವಿದ್ಯಾರ್ಥಿಗಳು ಇದೀಗ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com