ಜಿ-20 ಶೃಂಗಸಭೆ: ಬೆಂಗಳೂರಿನಲ್ಲಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಪೂರ್ವಭಾವಿ ಉನ್ನತ ಮಟ್ಟದ ಸಭೆ
ಭಾರತ ಜಿ-20 ಗುಂಪಿನ ಅಧ್ಯಕ್ಷತೆ ವಹಿಸಿಕೊಂಡ ನಂತರ ಎರಡು ಸಭೆಗಳು ಬೆಂಗಳೂರಿನಲ್ಲಿ ನಿಗದಿಯಾಗಿವೆ. ಡಿಸೆಂಬರ್ 13 ರಿಂದ 15 ರ ವರೆಗೆ ಬೆಂಗಳೂರಿನಲ್ಲಿ ಜಿ 20 ಮೊದಲ ಹಂತದ ಶೃಂಗಸಭೆ ನಡೆಯಲಿದೆ.
Published: 05th December 2022 01:07 PM | Last Updated: 05th December 2022 03:12 PM | A+A A-

ವಂದಿತಾ ಶರ್ಮಾ ನೇತೃತ್ವದಲ್ಲಿನ ಸಭೆಯ ಚಿತ್ರ
ಬೆಂಗಳೂರು: ಭಾರತ ಜಿ-20 ಗುಂಪಿನ ಅಧ್ಯಕ್ಷತೆ ವಹಿಸಿಕೊಂಡ ನಂತರ ಎರಡು ಸಭೆಗಳು ಬೆಂಗಳೂರಿನಲ್ಲಿ ನಿಗದಿಯಾಗಿವೆ. ಡಿಸೆಂಬರ್ 13 ರಿಂದ 15 ರ ವರೆಗೆ ಬೆಂಗಳೂರಿನಲ್ಲಿ ಜಿ 20 ಮೊದಲ ಹಂತದ ಶೃಂಗಸಭೆ ನಡೆಯಲಿದೆ.
ಅದರ ಪೂರ್ವಭಾವಿಯಾಗಿ ಉನ್ನತ ಮಟ್ಟದ ಸಭೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು. ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಬೆಂಗಳೂರಿನಲ್ಲಿ ಡಿಸೆಂಬರ್ 13 ರಿಂದ 15ರವರೆಗೆ ಹಣಕಾಸು ಮತ್ತು ಕೇಂದ್ರೀಯ ಬ್ಯಾಂಕ್ ಗಳ ಪ್ರತಿನಿಧಿಗಳ ಸಭೆ ಹಾಗೂ ಡಿಸೆಂಬರ್ 16 ಮತ್ತು 17 ರಂದು ಜಿ-20 ಚೌಕಟ್ಟು ನಿರೂಪಣೆಗೆ ಸಂಬಂಧಿಸಿದ ತಂಡದ ಸಭೆ ನಡೆಯಲಿದೆ.
ಡಿಸೆಂಬರ್ 1 ರಂದು ಭಾರತ ಜಿ-20 ಶೃಂಗಸಭೆಯನ್ನು ಅಧಿಕೃತವಾಗಿ ವಹಿಸಿಕೊಂಡಿತು. ಹೈದ್ರಾಬಾದ್, ಬೆಂಗಳೂರು ಸೇರಿದಂತೆ ದೇಶಾದ್ಯಂತ ಸುಮಾರು 200 ಸಭೆಗಳು ನಡೆಯುವ ಸಾಧ್ಯತೆಯಿದೆ.