ಬೆಂಗಳೂರು: ಸುಗಮ ಸಂಚಾರಕ್ಕೆ ಮಾರತ್ತಹಳ್ಳಿಯಲ್ಲಿ ಕೆಳಸೇತುವೆ ನಿರ್ಮಾಣ!
ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿನ ಸಂಚಾರ ದಟ್ಟಣೆ ಸಮಸ್ಯೆ ನಿವಾಹಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಾರತ್ತಹಳ್ಳಿಯ ಹೊರ ವರ್ತುಲ ರಸ್ತೆಗೆ ಸಮಾನಾಂತರವಾಗಿರುವ ರೈಲ್ವೆ ಸೇತುವೆಯಲ್ಲಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಳಸೇತುವೆ ನಿರ್ಮಾಣ ಮಾಡುತ್ತಿದೆ.
Published: 07th December 2022 12:23 PM | Last Updated: 07th December 2022 06:27 PM | A+A A-

ಮಾರತ್ತಹಳ್ಳಿ ಸೇತುವೆ ಮೇಲೆ ನಿಧಾನಗತಿಯ ಸಂಚಾರ
ಬೆಂಗಳೂರು: ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿನ ಸಂಚಾರ ದಟ್ಟಣೆ ಸಮಸ್ಯೆ ನಿವಾಹಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಾರತ್ತಹಳ್ಳಿಯ ಹೊರ ವರ್ತುಲ ರಸ್ತೆಗೆ ಸಮಾನಾಂತರವಾಗಿರುವ ರೈಲ್ವೆ ಸೇತುವೆಯಲ್ಲಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಳಸೇತುವೆ ನಿರ್ಮಾಣ ಮಾಡುತ್ತಿದೆ.
ಈ ಕೆಳಸೇತುವೆ ಯೋಜನೆಯು ಕುಂದಲಹಳ್ಳಿ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರವನ್ನು ಸುಗಮಗೊಳಿಸುವ ನಿರೀಕ್ಷೆಯಿದೆ.
ಯೋಜನೆಯಿಂದಾಗಿ 20-30 ದಿನಗಳ ಕಾಲ ಸಂಚಾರಕ್ಕೆ ತೊಂದರೆಯಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಅಧಿಕಾರಿಗಳಉ ಮನವಿ ಮಾಡಿಕೊಂಡಿದ್ದಾರೆ.
ರಸ್ತೆ ಮೂಲಭೂತ ಸೌಕರ್ಯ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ವಿ.ಜಯಶಂಕರ ರೆಡ್ಡಿ ಅವರು ಮಾತನಾಡಿ, ಪ್ರಸ್ತುತ, ವಾಹನ ಸವಾರರು ಮುನ್ನೆಕೊಳಾಲ ಮತ್ತು ಇತರ ಪ್ರದೇಶಗಳಿಗೆ ಯು-ಟರ್ನ್ ತೆಗೆದುಕೊಳ್ಳಲು 1.5 ಕಿಮೀ ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಕಾಮಗಾರಿ ಪೂರ್ಣಗೊಂಡ ಬಳಿಕ ವಾಹನ ಸವಾರರು ಕೆಳಸೇತುವೆಯನ್ನು ಬಳಕೆ ಮಾಡಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಿಷೇಧವಿದ್ದರೂ ಪೀಕ್ ಅವರ್ ನಲ್ಲಿ ಪ್ರಮುಖ ರಸ್ತೆಗಳಿಯುತ್ತಿರುವ ಭಾರೀ ವಾಹನಗಳು: ಕ್ರಮಕ್ಕೆ ಪೊಲೀಸರು ಮುಂದು!
ಈಗಾಗಲೇ ಒಂದು ಬದಿಯ ಕಾಮಗಾರಿ ಪೂರ್ಣಗೊಂಡಿದ್ದು, ಒಂದು ಮುಖ್ಯರಸ್ತೆ ವಾಹನ ಸವಾರರಿಗೆ ತೆರೆದಿರುವುದರಿಂದ ಈ ರಸ್ತೆಯಲ್ಲಿ ನಿಧಾನಗತಿಯ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಕಾಮಗಾರಿಯಿಂದಾಗಿ 20 ದಿನಗಳ ಕಾಲ ವಾಹನ ಸವಾರರಿಗೆ ಸಮಸ್ಯೆಗಳಾಗಬಹುದು, ಅಂಡರ್ ಪಾಸ್ ಕಾಮಗಾರಿ ಪೂರ್ಣಗೊಳ್ಳಲು 30 ದಿನ ಬೇಕು ಎಂದು ತಿಳಿಸಿದ್ದಾರೆ.
ಆರಂಭದಲ್ಲಿ ಪಾಲಿಕೆ ಭೂಸ್ವಾಧೀನ ಸಮಸ್ಯೆಗಳನ್ನು ಎದುರಿಸಿತ್ತು. ಆದರೆ, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಮಧ್ಯೆ ಪ್ರವೇಶಿಸಿದ ಬಳಿಕ ಸಮಸ್ಯೆ ಬಗೆಹರಿದಿತ್ತು ಎಂದು ತಿಳಿದುಬಂದಿದೆ.