ನಿಷೇಧವಿದ್ದರೂ ಪೀಕ್ ಅವರ್ ನಲ್ಲಿ ಪ್ರಮುಖ ರಸ್ತೆಗಳಿಯುತ್ತಿರುವ ಭಾರೀ ವಾಹನಗಳು: ಕ್ರಮಕ್ಕೆ ಪೊಲೀಸರು ಮುಂದು!
ನಗರದ ರಸ್ತೆಗಳಲ್ಲಿ ನಿಷೇಧಾಜ್ಞೆ ಇದ್ದರೂ ಹಲವು ಭಾರೀ ವಾಹನಗಳು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವುದು ಕಂಡು ಬರುತ್ತಿದ್ದು, ಈ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
Published: 07th December 2022 11:15 AM | Last Updated: 07th December 2022 06:26 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ನಗರದ ರಸ್ತೆಗಳಲ್ಲಿ ನಿಷೇಧಾಜ್ಞೆ ಇದ್ದರೂ ಹಲವು ಭಾರೀ ವಾಹನಗಳು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವುದು ಕಂಡು ಬರುತ್ತಿದ್ದು, ಈ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ,
ಪೀಕ್ ಅವರ್ ನಲ್ಲಿ ಭಾರೀ ವಾಹನಗಳು ಯಾವ ಯಾವ ರಸ್ತೆಗಳಲ್ಲಿ ಇಳಿಯುತ್ತಿವೆ ಎಂಬುದರ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸುತ್ತಿದ್ದು, 7.5 ಟನ್ ಕಂಟೈನಲ್ ವಾಹನಗಳ ಚಲನೆಗಳ ಮೇಲೆ ನಿಗಾವಹಿಸಿದ್ದಾರೆಂದು ತಿಳಿದುಬಂದಿದೆ.
ವಿಶೇಷ ಆಯುಕ್ತ (ಸಂಚಾರ) ಎಂ ಎ ಸಲೀಂ ಅವರು ಮಾತನಾಡಿ, ಪಶ್ಚಿಮ ಭಾಗದಿಂದ ಮತ್ತು ಉತ್ತರ ಭಾಗದಿಂದಲೂ ನಗರದ ರಸ್ತೆಗಳಿಗೆ ದೊಡ್ಡ ದೊಡ್ಡ ಟ್ರಕ್ ಗಳು ನುಸುಳುತ್ತಿವೆ ಎಂದು ಹೇಳಿದ್ದಾರೆ.
ವಾಹನಗಳು ಬೈಲೇನ್ ಮೂಲಕ ನಗರದ ರಸ್ತೆಗಳನ್ನು ಪ್ರವೇಶಿಸುತ್ತಿವೆ. ಹೀಗಾಗಿ ಪೊಲೀಸ್ ಇಲಾಖೆಯು ಇದೀಗ ವಾಹನಗಳು ಪ್ರವೇಶಿಸುವ ಸ್ಥಳಗಳನ್ನು ಪಟ್ಟಿ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶಾಲೆಗಳ ಬಳಿ ವಾಹನ ನಿಲುಗಡೆ ನಿಷೇಧ, ಶಾಲಾ ವಾಹನಗಳಿಗೂ ನಿಯಮ ಅನ್ವಯ: ಬೆಂಗಳೂರು ಟ್ರಾಫಿಕ್ ಪೊಲೀಸ್
“ಎಲ್ಲಾ ಸಣ್ಣ ರಸ್ತೆಗಳ ಪಟ್ಟಿಯನ್ನೂ ಸಿದ್ಧಪಡಿಸಲಾಗುತ್ತಿದೆ. ನಕ್ಷೆಗಳನ್ನು ಅಧ್ಯಯನ ಮಾಡಲಾಗುತ್ತಿದ್ದು, ಸಮೀಕ್ಷೆಯನ್ನೂ ಕೂಡ ನಡೆಸುತ್ತಿದ್ದೇವೆ. ನಿಯಮ ಉಲ್ಲಂಘಿಸುತ್ತಿರುವ ವಾಹನಗಳನ್ನು ತಡೆದು ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪೀಕ್ ಅವರ್‌ನಲ್ಲಿ 7.5 ಟನ್ ತೂಕದ ವಾಹನಗಳ ಪ್ರವೇಶವನ್ನು ತಡೆಯಲಾಗುತ್ತದೆ. ಇದು ಉತ್ತಮ ಸಂಚಾರ ನಿರ್ವಹಣೆಯನ್ನು ಖಚಿತಪಡಿಸುತ್ತದೆ ಎಂದಿದ್ದಾರೆ.
ಪೀಕ್ ಅವರ್ ನಲ್ಲಿ ಪ್ರಮುಖ ರಸ್ತೆಗಳಿಗೆ ಟ್ರಕ್‌ಗಳು ಮತ್ತು ಸರಕು ಸಾಗಣೆ ವಾಹನಗಳ ಪ್ರವೇಶದಿಂದ ಭಾರೀ ಸಂಚಾರ ದಟ್ಟಣೆ ಎದುರಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಾಗರೀಕರು ಪೊಲೀಸ್ ಠಾಣೆಗಳಿಗೆ ಸಾಕಷ್ಟು ದೂರುಗಳನ್ನು ದಾಖಲಿಸುತ್ತಿದ್ದಾರೆ.
ಮಾಗಡಿ ರಸ್ತೆಯ ಪ್ರಾವಿಜನ್ ಸ್ಟೋರ್ ಮಾಲೀಕ ಸುಂದರ್ ಲಾಲ್ ಮಾತನಾಡಿ, ನಿಷೇಧದ ಹೊರತಾಗಿಯೂ ಟ್ರಕ್‌ಗಳು ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆಯ ಸಮಯದಲ್ಲಿ ಚಲಿಸುತ್ತಲೇ ಇರುತ್ತವೆ, ಇದು ಶಾಲೆಗೆ ಹೋಗುವ ಮಕ್ಕಳಿಗೆ ಬಹಳ ಸಮಸ್ಯೆಗಳನ್ನು ಎದುರು ಮಾಡುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಔಟರ್ ರಿಂಗ್ ರೋಡ್ ಟ್ರಾಫಿಕ್ ಸಮಸ್ಯೆ: ಸಂಚಾರ ಆಯುಕ್ತರ ಐದು ಅಂಶಗಳ ಯೋಜನೆ!
ಪೀಣ್ಯದ ಮೇಲ್ಸುತುವಗಳಿಂಗ ಟ್ರಕ್ ಗಳು ಬರುತ್ತಿವೆ. ಪೊಲೀಸರು ಮುಖ್ಯರಸ್ತೆಗಳಲ್ಲಿ ಮಾತ್ರ ಕರ್ತವ್ಯ ನಿಭಾಯಿಸುವುದರಿಂದ ಟ್ರಕ್ ಗಳು ನಗರ ಪ್ರವೇಶಿಸುತ್ತಿವೆ. ಈ ಕುರಿತು ಸಂಚಾರಿ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಚಾರ ಸಮಸ್ಯೆ ದೂರಾಗಿಸಲು ನಾಗರೀಕರಿಂದ ಸಲಹೆಗಳನ್ನು ಕೇಳಲಾಗುತ್ತಿದೆ. ವಾಹನಗಳು ನಗರದ ರಸ್ತೆಗಳಿಗೆ ಪ್ರವೇಶಿಸುವ ಸ್ಥಳಗಳ ವಿವರಗಳನ್ನೂ ಕೂಡ ನಾಗರಿಕರು ನೀಡುತ್ತಿದ್ದಾರೆ. ಎಲ್ಲಾ ಮಾಹಿತಿಗಳನ್ನು ಒಟ್ಟುಗೂಡಿಸಲಾಗುತ್ತಿದೆ ಎಂದು ಸಲೀಂ ಅವರು ಹೇಳಿದ್ದಾರೆ.