ಬೆಂಗಳೂರು: ಮೊಬೈಲ್ ಗೆ ದಾಸನಾಗಿದ್ದ ಬಾಲಕ, ಹೋಮ್ ವರ್ಕ್ ಮಾಡಲು ಪೋಷಕರು ಬೈದಿದ್ದಕ್ಕೆ ಆತ್ಮಹತ್ಯೆ

ಮೊಬೈಲ್ ಬಿಟ್ಟ, ಹೋಮ್ ವರ್ಕ್ ಮಾಡಿ ಓದುವ ಕಡೆ ಗಮನ ಹರಿಸುವಂತೆ ಪೋಷಕರು ಬುದ್ದಿ ಹೇಳಿದ್ದಕ್ಕೆ 7ನೇ ತರಗತಿಯ 13 ವರ್ಷದ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೊಬೈಲ್ ಬಿಟ್ಟ, ಹೋಮ್ ವರ್ಕ್ ಮಾಡಿ ಓದುವ ಕಡೆ ಗಮನ ಹರಿಸುವಂತೆ ಪೋಷಕರು ಬುದ್ದಿ ಹೇಳಿದ್ದಕ್ಕೆ 7ನೇ ತರಗತಿಯ 13 ವರ್ಷದ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿದ್ದಾನೆ.

ಯಶಸ್ ಗೌಡ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಬೆಂಗಳೂರು-ಹೊಸೂರು ಮುಖ್ಯರಸ್ತೆಯ ಅತ್ತಿಬೆಲೆ ಎಂಬಲ್ಲಿ ಮಂಗಳವಾರ ರಾತ್ರಿ 8.30ರ ಸುಮಾರಿಗೆ ಬಾಲಕ  ಸ್ಟೋರ್ ರೂಂನ ಸೀಲಿಂಗ್‌ಗೆ ನೇಣು ಬಿಗಿದುಕೊಂಡಿದ್ದಾನೆ. ಯಶಸ್ ತಂದೆ ರೈತನಾಗಿದ್ದು, ಮೃತ ಬಾಲಕನಿಗೋ ಓರ್ವ ಸಹೋದರಿಯಿದ್ದಾಳೆ.

ಸ್ವಾಮಿ ವಿವೇಕಾನಂದ ನಗರದ ಖಾಸಗಿ ಶಾಲೆಯಲ್ಲಿ ಯಶಸ್ ವ್ಯಾಸಂಗ ಮಾಡುತ್ತಿದ್ದ. ಆನ್‌ಲೈನ್ ತರಗತಿಗಳನ್ನು ಪರಿಚಯಿಸಿದಾಗಿನಿಂದ ತನ್ನ ಮಗ ಮೊಬೈಲ್ ಫೋನ್ ಗೆ ವ್ಯಸನಿಯಾಗಿದ್ದ ಎಂದು ತಂದೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಗನಿಂದ ಫೋನ್ ತೆಗೆದುಕೊಳ್ಳುವುದೇ ಕಷ್ಟವಾಗಿತ್ತು. ಶಾಲೆಯಿಂದ ಮನೆಗೆ ಬಂದ ನಂತರ ಫೋನ್ ಹಿಡಿದುಕೊಂಡು ಕುಳಿತು ಬಿಡುತ್ತಿದ್ದ. ಹೋಮ್ ವರ್ಕ್ ಮಾಡುತ್ತಿಲ್ಲ, ಸರಿಯಾಗಿ ಓದುತ್ತಿಲ್ಲ ಎಂದು ಪೋಷಕರು ಕಂಗಾಲಾಗಿದ್ದರು. ಫೋನ್ ಇಲ್ಲದಿದ್ದರೆ, ಹುಡುಗ ಟಿವಿ ನೋಡುತ್ತಾ ಕುಳಿತುಕೊಳ್ಳುತ್ತಿದ್ದ ಎಂದು ತನಿಖಾ ತಂಡದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಒಂದು ಗಂಟೆ ಕಳೆದರೂ ಬಾಲಕ ಹೊರಗೆ ಬಾರದಿದ್ದಾಗ ಆತನ ತಾಯಿ ಒಳಗೆ ಹೋಗಿ ಪರಿಶೀಲಿಸಿದಾಗ ಮಗ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ.

ಪೋಷಕರು ಸಹಾಯಕ್ಕಾಗಿ ಕಿರುಚಾಡಿದ್ದಾರೆ ಮತ್ತು ನೆರೆಹೊರೆಯವರು ಆಂಬ್ಯುಲೆನ್ಸ್‌ಗೆ ಕರೆ ಮಾಡಿದರು. ಯಶಸ್‌ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಅಲ್ಲಿ ಅವನು ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಯಿತು. ಘಟನೆ ಕುರಿತು ರಾತ್ರಿ 10 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಬೆಂಗಳೂರು ಗ್ರಾಮಾಂತರ ಪೊಲೀಸ್ ವ್ಯಾಪ್ತಿಯ ನಗರದ ಹೊರವಲಯದಲ್ಲಿರುವ ಹೊಸಕೋಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸೂಲಿಬೆಲೆ ಠಾಣಾ ವ್ಯಾಪ್ತಿಯ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com