'ಡಿಜಿಟಲ್ ಟಿಕೆಟ್ ವ್ಯವಸ್ಥೆ' ಜಾರಿಗೆ ಬಿಎಂಟಿಸಿ ಮುಂದು!

ಡಿಸೆಂಬರ್ 23 ರಿಂದ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಯುಪಿಐ ಆಧಾರಿತ ಟಿಕೆಟ್ ವ್ಯವಸ್ಥೆಯನ್ನು ಹೊರತರಲು ಸಿದ್ಧತೆ ನಡೆಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಡಿಸೆಂಬರ್ 23 ರಿಂದ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಯುಪಿಐ ಆಧಾರಿತ ಟಿಕೆಟ್ ವ್ಯವಸ್ಥೆಯನ್ನು ಹೊರತರಲು ಸಿದ್ಧತೆ ನಡೆಸಿದೆ.

ಟಿಕೆಟ್‌ಗಳನ್ನು ಖರೀದಿಸಲು ಪ್ರಯಾಣಿಕರು ತಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಸಹ ಬಳಸಬಹುದು. ತಾಂತ್ರಿಕ ದೋಷ ಅಥವಾ ವಹಿವಾಟು ವಿಫಲವಾದಲ್ಲಿ, ನಗದು ಪಾವತಿಸಿ ಭೌತಿಕ ಟಿಕೆಟ್ ಖರೀದಿಸಬೇಕು ಎಂದು ಸಾರಿಗೆ ನಿಗಮ ತಿಳಿಸಿದೆ.

 ಬಿಎಂಟಿಸಿ ನಿರ್ದೇಶಕ (ಐಟಿ) ಸೂರ್ಯ ಸೇನ್ ಅವರು ಮಾತನಾಡಿ, “ಯುಪಿಐ ಆಧಾರಿತ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತರಲು ನಾವು ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು (ಇಟಿಎಂ) ಸಂಗ್ರಹಿಸಿದ್ದೇವೆ. ಎಲ್ಲವೂ ಯೋಜಿಸಿದಂತೆ ನಡೆದರೆ, ಪ್ರಯಾಣಿಕರು ಡಿಸೆಂಬರ್ 23 ರಿಂದ ಈ ಸೇವೆಯನ್ನು ಪಡೆಯಬಹುದು ಎಂದು ಹೇಳಿದ್ದಾರೆ.

ಪ್ರಯಾಣಿಕರು ತಲುಪಬೇಕಿರುವ ಸ್ಥಳಕ್ಕೆ ತಗುಲುವ ಟಿಕೆಟ್ ವೆಚ್ಚವನ್ನು ನಿರ್ವಾಹಕರು ತಿಳಿಸಲಿದ್ದು, ಪ್ರಯಾಣಿಕರು ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಕ್ಯೂಆರ್ ಕೋಟ್ ಸ್ಕ್ಯಾನ್ ಮಾಡಿ ಮೊತ್ತವನ್ನು ಪಾವತಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಬಿಎಂಟಿಸಿ ಬಸ್‌ಗಳಲ್ಲಿ ನಿಯಮಿತವಾಗಿ ಪ್ರಯಾಣಿಸುವ ಪ್ಲಂಬರ್ ಪುರುಷೋತ್ತಮನ್ ಅವರು ಮಾತನಾಡಿ, "ನಾವು ಡಿಜಿಟಲ್ ವಹಿವಾಟಿಗೆ ಒಗ್ಗಿಕೊಂಡಿರುವುದರಿಂದ ಬಿಎಂಟಿಸಿಯ ಇಂತಹ ನಿರ್ಧಾರ ಸ್ವಾಗತಾರ್ಹ ಕ್ರಮವಾಗಿದೆ. ಇನ್ನು ಮುಂದೆ ನಾವು ಹಣ ಡ್ರಾ ಮಾಡಲು ಎಟಿಎಂಗಳಿಗೆ ಓಡಾಡಬೇಕಾಗಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com