
ಸಾಂದರ್ಭಿಕ ಚಿತ್ರ
ರಾಮನಗರ: ನಾಡಬಂದೂಕಿನಲ್ಲಿ ಮಕ್ಕಳು ಅಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ಮಗು ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರದ ಕನಕಪುರ (Kanakapura) ತಾಲೂಕಿನ ಕೋಡಿಹಳ್ಳಿ ಠಾಣೆ ವ್ಯಾಪ್ತಿಯ ಕಾಡುಶಿವನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ತೋಟದ ಮನೆಯಲ್ಲಿ ಇಟ್ಟಿದ್ದ ನಾಡಬಂದೂಕು ಹಿಡಿದು ಆಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಮೂಲ್ಕಿ ಬಳಿ ಅಪ್ರಾಪ್ತ ಬಾಲಕಿ ಜೊತೆ ಯುವಕ ಅಸಭ್ಯ ವರ್ತನೆ: ಕಂಬಕ್ಕೆ ಕಟ್ಟಿಹಾಕಿ ಹಲ್ಲೆ, ಆರೋಪಿಯ ದೂರಿನ ಮೇರೆಗೆ ಕೇಸು
ಇಬ್ಬರು ಸಹೋದರರು ಆಟವಾಡುತ್ತಿದ್ದಾಗ ಸಾದಿಕ್ (16) ಎಂಬಾತ ಬಂದೂಕಿನ ಟ್ರಿಗರ್ ಒತ್ತಿದ ಪರಿಣಾಮ ಗುಂಡು ತಗುಲಿ ಶಮಾ (7) ಎಂಬ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾಡುಶಿವನಹಳ್ಳಿ ಮಲ್ಲೇಶ್ ಅವರ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಬಂದ ಸಾದಿಕ್ ಪೋಷಕರು ಮಲ್ಲೇಶ್‌ನ ತೋಟದ ಮನೆಯಲ್ಲಿದ್ದರು. ಮೃತನ ತಂದೆ, ತಾಯಿ ತೋಟದ ಕೆಲಸದಲ್ಲಿ ನಿರತರಾಗಿದ್ದಾಗ, ಮಕ್ಕಳಾದ ಸಾದಿಕ್ ಮತ್ತು ಶಮಾ ಮನೆಯಲ್ಲಿ ಆಟವಾಡುತ್ತಿದ್ದರು.
ಇದನ್ನೂ ಓದಿ: ಕಲಬುರಗಿ: ಶಿಥಿಲಾವಸ್ಥೆಯಲ್ಲಿರುವ ಓವರ್ ಹೆಡ್ ಟ್ಯಾಂಕ್ ಗೆ ಬಿದ್ದು 18 ಮಂಗಗಳು ಸಾವು
ಈ ವೇಳೆ ತೋಟದ ಮನೆಯಲ್ಲಿದ್ದ ಬಂದೂಕನ್ನು ಕಂಡ ಮಕ್ಕಳು ತೆಗೆದುಕೊಂಡಿದ್ದಾರೆ. ಇಬ್ಬರು ಆಟವಾಡುತ್ತಿದ್ದಾಗ ಸಾದಿಕ್ ಬಂದೂಕಿನ ಟ್ರಿಗರ್ ಒತ್ತಿದ್ದಾನೆ. ಗುಂಡು ಶಮಾಗೆ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ವಿಷಯ ತಿಳಿದ ಕೋಡಿಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಸುರಕ್ಷತಾ ಕ್ರಮ ಪಾಲಿಸದೆ ಮನೆಯಲ್ಲಿ ಬಂದೂಕು ಇಟ್ಟಿದ್ದ ಮಾಲೀಕ ಮಲ್ಲೇಶ್ ಮೇಲೆ ನಿರ್ಲಕ್ಷ್ಯ ಆರೋಪ ಹಾಗೂ ಗುಂಡು ಹಾರಿಸಿದ ಸಾದಿಕ್ ಮೇಲೆ ಪ್ರಕರಣ ದಾಖಲಿಸಿದ್ದಾರೆ.