ಬೆಂಗಳೂರು: ಬಿಲ್ಡರ್ ಗಳ ಜೊತೆ ಕಾನೂನು ಹೋರಾಟ ನಂತರ ಕೊನೆಗೂ ಮನೆ ಮಾಲೀಕರಿಗೆ ನೋಂದಾಯಿತ ಮಾರಾಟ ಪತ್ರ

ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕ (RERA-K) ಹೊರಡಿಸಿರುವ ಆದೇಶಗಳನ್ನು ನಿರ್ಲಕ್ಷಿಸುವ ಬಿಲ್ಡರ್‌ಗಳಿಗೆ ಕಠಿಣ ಸಂದೇಶವನ್ನು ರವಾನಿಸುವ ರೀತಿಯಲ್ಲಿ ಈ ಆದೇಶವಿದೆ.
ಅಪಾರ್ಟ್ ಮೆಂಟ್
ಅಪಾರ್ಟ್ ಮೆಂಟ್

ಬೆಂಗಳೂರು: ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕ (RERA-K) ಹೊರಡಿಸಿರುವ ಆದೇಶಗಳನ್ನು ನಿರ್ಲಕ್ಷಿಸುವ ಬಿಲ್ಡರ್‌ಗಳಿಗೆ ಕಠಿಣ ಸಂದೇಶವನ್ನು ರವಾನಿಸುವ ರೀತಿಯಲ್ಲಿ ಈ ಆದೇಶವಿದೆ. ಆರ್ ಎಂವಿ2ನೇ ಹಂತದಲ್ಲಿ 130 ಕೋಟಿ ರೂಪಾಯಿಗಳ ವಸತಿ ಅಪಾರ್ಟ್‌ಮೆಂಟ್ ಸಮುಚ್ಚಯದ ಬಿಲ್ಡರ್‌ಗೆ ಸೇರಿದ 11 ಅಪಾರ್ಟ್‌ಮೆಂಟ್ ನ್ನು ಬೆಂಗಳೂರು ನಗರ ಉಪ ಆಯುಕ್ತರು ಹರಾಜು ಪ್ರಕ್ರಿಯೆಗೆ ಇಟ್ಟಿದ್ದಾರೆ. 

ಅಪಾರ್ಟ್ ಮೆಂಟಿನಲ್ಲಿ ಮನೆ ಖರೀದಿದಾರರಿಗೆ ನೀಡಬೇಕಾದ ಬಡ್ಡಿ ಹಣವನ್ನು ಪಾವತಿಸಲು ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಯೋಜನೆಗೆ ಸಂಬಂಧಿಸಿದ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, ರಿಯಲ್ ಎಸ್ಟೇಟ್ ಡೆವಲಪರ್, KRSNA ಪ್ರಾಜೆಕ್ಟ್ಸ್, RERA ಒತ್ತಾಯದ ನಂತರ ಕಳೆದ ಹದಿನೈದು ದಿನಗಳಲ್ಲಿ ಡಾಲರ್ಸ್ ಕಾಲೋನಿಯಲ್ಲಿರುವ ಈ ಐಷಾರಾಮಿ 'ಕೃಷ್ಣ ಲ್ಯಾಬರ್ನಮ್' ನಲ್ಲಿ ಒಂಬತ್ತು ಅಪಾರ್ಟ್‌ಮೆಂಟ್ ಖರೀದಿದಾರರ ಮಾರಾಟ ಪತ್ರಗಳನ್ನು (ನಿರ್ಣಾಯಕ ಮಾಲೀಕತ್ವದ ದಾಖಲೆಗಳು) ನೋಂದಾಯಿಸಿದೆ.

ರೇರಾ ಇದೇ ರೀತಿಯ ಆದೇಶಗಳನ್ನು ಹೊರಡಿಸಿದ್ದರೂ ಸಹ ಪ್ರವರ್ತಕರಾದ ಡಾ ಕೆ ಬಲರಾಮನ್ ಅವರು ನಿರಾಕರಿಸಿದ್ದರು.
2014 ರಲ್ಲಿ ಪ್ರಸ್ತಾಪಿಸಲಾದ 50 ಅಪಾರ್ಟ್‌ಮೆಂಟ್ ಘಟಕಗಳನ್ನು 2016 ಮತ್ತು 2017 ರಲ್ಲಿ ವಿವಿಧ ದಿನಾಂಕಗಳಲ್ಲಿ ಖರೀದಿದಾರರಿಗೆ ಹಸ್ತಾಂತರಿಸಬೇಕಾಗಿತ್ತು ಎಂದು ಖರೀದಿದಾರರನ್ನು ಪ್ರತಿನಿಧಿಸಿದ ವಕೀಲ ಪ್ರಶಾಂತ್ ಮಿರ್ಲೆ ಹೇಳುತ್ತಾರೆ. 3 ಬೆಡ್ ರೂಂ ಅಪಾರ್ಟ್ ಮೆಂಟಿನ ಯೂನಿಟ್‌ಗೆ 2 ಕೋಟಿ ರೂಪಾಯಿ ವೆಚ್ಚವಾಗಿದ್ದರೆ 4ಬೆಡ್ ರೂಂ ಅಪಾರ್ಟ್ ಮೆಂಟ್ ಒಂದಕ್ಕೆ 2.5 ಕೋಟಿ ರೂಪಾಯಿ ಆಗಿದೆ. ಮನೆ ಖರೀದಿದಾರರು ತಮ್ಮ ಅಪಾರ್ಟ್‌ಮೆಂಟ್‌ಗಳ ಒಟ್ಟು ವೆಚ್ಚದ ಶೇಕಡಾ 92ರಷ್ಟನ್ನು ಬಿಲ್ಡರ್‌ಗೆ ಪಾವತಿಸಿದ್ದಾರೆ ಎಂದು ವಿವರಿಸಿದರು.

ಯೋಜನೆಯು ವಿಳಂಬವಾಗುತ್ತಿದೆ ಎಂದು ಖರೀದಿದಾರರು ಅರಿತುಕೊಂಡಾಗ, ಅವರಲ್ಲಿ 12 ಮಂದಿ RERA-K ಗೆ ದೂರು ಸಲ್ಲಿಸಿದರು. ವಿಳಂಬಕ್ಕೆ ಪರಿಹಾರವನ್ನು ಕೋರಿದರು. ಅವರಿಗೆ ಅಕ್ಟೋಬರ್ 3, 2019 ರಂದು ಪರಿಹಾರವನ್ನು ನೀಡಲಾಯಿತು, ಆದರೆ ಅದನ್ನು ಪಾವತಿಸಲು ಪ್ರಾಧಿಕಾರದ ಆದೇಶವನ್ನು ಪಾಲಿಸಲು ಪ್ರವರ್ತಕರು ವಿಫಲರಾಗಿದ್ದಾರೆ.

ಎಲ್ಲಾ ಖರೀದಿದಾರರಿಗೆ ಅವರ ಆಸ್ತಿಯನ್ನು ಖರೀದಿಸಿದ ಸಮಯದಿಂದ ಲೆಕ್ಕಹಾಕಿದ ಒಟ್ಟು ಬಡ್ಡಿಯು ಸುಮಾರು 14 ಕೋಟಿ ರೂಪಾಯಿಗಳಾಗಿದೆ. ಹೀಗಾಗಿ ಮಾರಾಟವಾಗದ 11 ಘಟಕಗಳನ್ನು ಡಿಸಿ ಲಗತ್ತಿಸಿ ಹರಾಜು ಹಾಕುವ ಮೂಲಕ ಹಣ ವಸೂಲಿ ಮಾಡಬಹುದು ಎಂದು ವಕೀಲರು ವಿವರಿಸಿದರು.

RERA ಅಧಿಕಾರಿಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಈ ವಿಷಯ ತಿಳಿಸಿದ್ದು, ಬಿಲ್ಡರ್ 47 ಅಪಾರ್ಟ್‌ಮೆಂಟ್‌ಗಳಿಗೆ ಆಕ್ಯುಪೆನ್ಸಿ ಪ್ರಮಾಣಪತ್ರವನ್ನು(OC) ಪಡೆದಿದ್ದಾರೆ. “ಆದಾಗ್ಯೂ, BWSSB ಮತ್ತು BESCOM ಸಂಪರ್ಕಗಳಿಗೆ ಖರೀದಿದಾರರು ಪಾವತಿಸುವ ಶುಲ್ಕವನ್ನು ನಾಗರಿಕ ಉಪಯುಕ್ತತೆ ಇಲಾಖೆಗಳಿಗೆ ಹಸ್ತಾಂತರಿಸಲಾಗಿಲ್ಲ. ಹೀಗಾಗಿ, ಕಾವೇರಿ ನೀರು ಪೂರೈಕೆಯಾಗದೆ ಎಲ್ಲರಿಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಮಾತ್ರ ನೀಡಲಾಗಿದೆ ಎಂದು ಮಿರ್ಲೆ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com