ನೀರು ಅವರಪ್ಪನ ಆಸ್ತಿಯಲ್ಲ, ಕರ್ನಾಟಕಕ್ಕೆ ನೀರು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ; ಮಹಾರಾಷ್ಟ್ರ ಶಾಸಕರಿಗೆ ಕಾರಜೋಳ ತಿರುಗೇಟು

ಕರ್ನಾಟಕಕ್ಕೆ ನೀರು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ನೀರು ಅವರಪ್ಪನ ಆಸ್ತಿಯಲ್ಲ ಎಂದು ಮಹಾರಾಷ್ಟ್ರ ಶಾಸಕರನಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಬುಧವಾರ ತಿರುಗೇಟು ನೀಡಿದ್ದಾರೆ.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ

ಬೆಳಗಾವಿ: ಕರ್ನಾಟಕಕ್ಕೆ ನೀರು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ನೀರು ಅವರಪ್ಪನ ಆಸ್ತಿಯಲ್ಲ ಎಂದು ಮಹಾರಾಷ್ಟ್ರ ಶಾಸಕರನಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಬುಧವಾರ ತಿರುಗೇಟು ನೀಡಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿದ್ದ ಎನ್'ಸಿಪಿ ಶಾಸಕ ಜಯಂತ್ ಪಾಟೀಲ್ ಅಣೆಕಟ್ಟು ಎತ್ತರ ಹೆಚ್ಚಿಸಿ, ಕರ್ನಾಟಕಕ್ಕೆ ನೀರು ಬಿಡಬಾರದು ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವರ ಕಾರಜೋಳ ಅವರು, ಮಹಾರಾಷ್ಟ್ರ ಶಾಸಕರು ನಮ್ಮ ಮುಖ್ಯಮಂತ್ರಿಗಳಿಗೆ ಅವಮಾನ ಮಾಡಿರುವುದು ಖಂಡನಾರ್ಹ. ನೀರು ಅವರ ಆಸ್ತಿಯಲ್ಲ. ಅವರ ಅಪ್ಪನ ಆಸ್ತಿಯೂ ಅಲ್ಲ. ಅಣೆಕಟ್ಟು ಎತ್ತರ ಹೆಚ್ಚಳ ಮಾಡುವುದು ಆತನಿಗೆ ಸಂಬಂಧಿಸಿದ್ದಲ್ಲ. ಅಣೆಕಟ್ಟು ಅವರಿಗೆ ಸೇರಿದ್ದಲ್ಲ. ಸದನದಲ್ಲಿ ಸರಿಯಾಗಿ ಮಾತನಾಡಬೇಕೆಂದು ಹೇಳಿದರು.

ಗೂಂಡಾಗಿರಿ ನಡವಳಿಕೆ ಸರಿಯಲ್ಲ. ಆತ ಸುಸಂಸ್ಕೃತರಾಗಿದ್ದರೆ ಮಾತ್ರ ಸಮಾಜ ಸೇವೆಗೆ ಯೋಗ್ಯ. ಇಲ್ಲವೆಂದರೆ ಬಸ್ ಸ್ಟ್ಯಾಂಡ್ ನಲ್ಲಿರುವುದಕ್ಕೆ ಯೋಗ್ಯ ನಿದ್ದಾನೆ. ಗಡಿಯಲ್ಲಿ ನೆಲೆಸಿರುವವರು ನೆಮ್ಮದಿಯಿಂದ ಇದ್ದಾರೆ. ಇಂತಹ ಹೇಳಿಕೆಗಳಿಂದ ಗಡಿಯಲ್ಲಿರುವವರಿಗೆ ಸಮಸ್ಯೆಯಾಗಲಿದೆ. ಎರಡೂ ರಾಜ್ಯದವರಿಗೂ ಯಾವುದೇ ರೀತಿಯ ಸಮಸ್ಯೆಯಾಗಬಾರದು. ಪ್ರವಾಸಿಗರು, ಕೂಲಿ-ನಾಲಿ ಮಾಡುವವರಿಗೆ ತೊಂದರೆಯಾಗಬಾರದು. ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಗಡಿ ಜೊತೆಗೆ ನೀರಿನ ಕ್ಯಾತೆ ತೆಗೆಯಲಾಗಿದೆ. ನೀರನ್ನು ತಡೆಯುವುದಕ್ಕೆ ಕೆಟ್ಟ ಭಾಷೆಯಲ್ಲಿ ಹೇಳುವುದಾದರೆ ಅವರ ಅಪ್ಪನಿಂದಲೂ ಸಾಧ್ಯವಿಲ್ಲ. ನೀರಿನ ವಿಚಾರದ ನ್ಯಾಯಾಧೀಕರಣದಲ್ಲಿ ತೀರ್ಮಾನವಾಗಿದೆ. ನೀರಿನ ಸಂಬಂಧ ಯಾರು ಹೇಳಿದ್ದಾರೋ, ಅದು ಅವರ ಅಪ್ಪನಿಂದಲೂ ಸಾಧ್ಯವಿಲ್ಲ. ಅವನೊಬ್ಬ ಮೂರ್ಖ ಎಂದು ವಾಗ್ದಾಳಿ ನಡೆಸಿದರು.

ನಮ್ಮ ನೆಲದಲ್ಲಿರುವವರ ಭಾಷೆ, ಮರಾಠಿಯಾಗಿರಬಹುದು. ಆದರೆ, ಅವರು ಕನ್ನಡ ತಾಯಿಯ ಮಕ್ಕಳು. ಅದಕ್ಕಾಗಿಯೇ ಚುನಾವಣೆಯಲ್ಲಿ ಎಂಇಎಸ್ ಪುಂಡರನ್ನು ಗೆಲ್ಲಿಸಿಲ್ಲ  ಎಂದರು.

ಈ ನಡುವೆ ವಿವಾದ ಸಂಬಂಧ ಸದನದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಎರಡು ರಾಜ್ಯಗಳ ನಡುವಿನ ದೀರ್ಘಾವಧಿಯ ಗಡಿ ವಿವಾದವನ್ನು ನಿಭಾಯಿಸಲು ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ಅಸಮರ್ಥವಾಗಿವೆ ಎಂದು ವಾಗ್ದಾಳಿ ನಡೆಸಿದರು.

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಶಾಂತಿ ಕಾಪಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದರೂ ಮಹಾರಾಷ್ಟ್ರ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. "ಮಹಾರಾಷ್ಟ್ರದ ಸಚಿವರು ಇಂತಹ ಹೇಳಿಕೆ ನಿಲ್ಲಿಸದಿದ್ದರೆ, ನಾವು ಕೂಡ ಮಾತನಾಡಲು ಸಮರ್ಥರಾಗಿದ್ದೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com