ಕೋವಿಡ್-19: BF.7 ರೂಪಾಂತರಿ ವೈರಸ್ ತಳಿ ಸೋಂಕಿತರಿಗೆ ಉಚಿತ ಚಿಕಿತ್ಸೆ: ರಾಜ್ಯ ಸರ್ಕಾರ ಘೋಷಣೆ
ದೇಶಾದ್ಯಂತ ಮತ್ತೊಂದು ಕೋವಿಡ್ ಅಲೆಯ ಭೀತಿ ಸೃಷ್ಟಿಸಿರುವ ಒಮಿಕ್ರಾನ್ ಬಿಎಫ್.7 ರೂಪಾಂತರಿ ತಳಿ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದೆ.
Published: 27th December 2022 12:41 PM | Last Updated: 27th December 2022 12:41 PM | A+A A-

ಆರ್ ಅಶೋಕ್ ಮತ್ತು ಸಚಿವ ಸುಧಾಕರ್
ಬೆಂಗಳೂರು: ದೇಶಾದ್ಯಂತ ಮತ್ತೊಂದು ಕೋವಿಡ್ ಅಲೆಯ ಭೀತಿ ಸೃಷ್ಟಿಸಿರುವ ಒಮಿಕ್ರಾನ್ ಬಿಎಫ್.7 ರೂಪಾಂತರಿ ತಳಿ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದೆ.
ಕರ್ನಾಟಕದಲ್ಲಿ ಕೋವಿಡ್-19 ಜಾಗೃತಿ ಕುರಿತು ಬೆಳಗಾವಿಯ ಸುವರ್ಣ ಸೌಧದಲ್ಲಿ ಆರೋಗ್ಯ ಸಚಿವ @mla_sudhakar ಅವರೊಂದಿಗೆ, ಕಂದಾಯ ಮತ್ತು ಆರೋಗ್ಯ ಇಲಾಖೆಯ ಜಂಟಿ ಸಭೆ ನಡೆಸಲಾಯಿತು.
— R. Ashoka (ಆರ್. ಅಶೋಕ) (@RAshokaBJP) December 26, 2022
ಕೋವಿಡ್ ವಿರುದ್ಧ ಹೋರಾಡಲು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ.
ಭಯ ಬೇಡ, ಜಾಗೃತಿ ಇರಲಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ. pic.twitter.com/ctwj3HZS6k
ಪ್ರಸ್ತುತ ದೇಶದಲ್ಲಿ ಕೋವಿಡ್‌ನ ಹೊಸ ತಳಿ ಬಿಎಫ್ 7 ಕಾಣಿಸಿಕೊಂಡಿದ್ದು, ಈ ಹೊಸ ತಳಿ ಕರ್ನಾಟಕ ರಾಜ್ಯದಲ್ಲೂ ಕೂಡಾ ಕಾಣಿಸಿಕೊಂಡಿದೆ. ಹೀಗಾಗಿ ರಾಜ್ಯ ಸರ್ಕಾರ ಕೋವಿಡ್ ಮಾರ್ಗಸೂಚಿಯನ್ನು ಹೊರಡಿಸಿದ್ದು, ಈ ನಡುವೆ ಈಗ ಬಿಎಫ್ 7 ಸೋಂಕಿತರಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರವು ಸೋಮವಾರ ಘೋಷಿಸಿದೆ.
ಇದನ್ನೂ ಓದಿ: ಮತ್ತೆ ಕೋವಿಡ್ ಭೀತಿ: ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಗಳಿಗೆ ಬೇಡಿಕೆ ಹೆಚ್ಚಳ
ಈ ಕುರಿತು ನಡೆದ ತಜ್ಞರ ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್ ಅಶೋಕ್ ಅವರು, 'ನಾವು ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಎಲ್ಲ ಶಂಕಿತ ಪ್ರಕರಣ ಹೊಂದಿರುವವರನ್ನು ಐಸೋಲೇಟ್ ಮಾಡುತ್ತೇವೆ. ಚಿಕಿತ್ಸೆ ಕೂಡಾ ಇಲ್ಲಿ ನೀಡಲಾಗುತ್ತದೆ. ಹಾಗೆಯೇ ಕೋವಿಡ್‌ನ ಹೊಸ ತಳಿ BF.7 ಸೋಂಕಿತರಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೆಲವು ದೇಶಗಳಲ್ಲಿ ಕೋವಿಡ್ ಹೆಚ್ಚುತ್ತಿರುವುದರಿಂದ, ಸರ್ಕಾರ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಗೆ ಸಚಿವ ಡಾ. ಸುಧಾಕರ್ ಜೊತೆ ಭೇಟಿ ನೀಡಿ ಆಸ್ಪತ್ರೆಯ ಮೂಲಸೌಕರ್ಯಗಳ ಪರಿಶೀಲನೆ ನಡೆಸಲಾಯಿತು.
— R. Ashoka (ಆರ್. ಅಶೋಕ) (@RAshokaBJP) December 26, 2022
ರಾಜ್ಯದ ಆಸ್ಪತ್ರೆಗಳಲ್ಲಿ ಸಿದ್ಧತೆಯನ್ನು ಖಾತ್ರಿ ಪಡಿಸಿಕೊಳ್ಳಲು ನಾಳೆ ಅಣಕು ಡ್ರಿಲ್ ನಡೆಸಲಾಗುತ್ತಿದೆ. pic.twitter.com/3pY1r3Whyf
ಅಂತೆಯೇ ಎಲ್ಲ ಜಿಲ್ಲೆಗಳಲ್ಲಿ ಸಮಿತಿಯನ್ನು ರಚನೆ ಮಾಡಲಾಗಿದ್ದು, ಈ ಸಮಿತಿಯು ಎಲ್ಲ ಆಸ್ಪತ್ರೆ ಹಾಗೂ ಕೋವಿಡ್ ಕೇಂದ್ರ ಮೊದಲಾದವುಗಳಿಗೆ ಭೇಟಿ ನೀಡಲಿದೆ. ಆಸ್ಪತ್ರೆಯಲ್ಲಿ ಹೇಗೆ ಸಿದ್ಧತೆ ನಡೆಸಲಾಗಿದೆ, ಆಕ್ಸಿಜನ್ ಪ್ಲಾಂಟ್ ವ್ಯವಸ್ಥೆ ಹೇಗಿದೆ, ಐಸಿಯು ವೆಂಟಿಲೇಟರ್ ಎಷ್ಟಿದೆ, ಸ್ಥಿತಿ ಹೇಗಿದೆ ಎಂದು ಪರಿಶೀಲಿಸಲಿದೆ ಎಂದು ಕೂಡಾ ಹೇಳಿದ್ದಾರೆ.