ರಾಜ್ಯದ ವಿವಿಧೆಡೆ ಮಳೆಯ ಅಬ್ಬರ ಮುಂದುವರಿಕೆ: ಇಬ್ಬರು ಸಾವು

ರಾಜ್ಯದ ವಿವಿಧೆಡೆ ಮಳೆಯ ಅಬ್ಬರ ಇಂದು ಕೂಡಾ  ಮುಂದುವರೆದಿದೆ. ನಿನ್ನೆ ದಿನ ಭೂಕುಸಿತ, ಸಾವು- ನೋವಿನ ವರದಿಯಾಗಿದೆ.  ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ಎಂಬಲ್ಲಿ ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕಾರು ಆಕಸ್ಮಿಕವಾಗಿ ಹೊಳೆಗೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಜಲಾವೃತಗೊಂಡ ಮನೆ
ಜಲಾವೃತಗೊಂಡ ಮನೆ

ಮಂಗಳೂರು: ರಾಜ್ಯದ ವಿವಿಧೆಡೆ ಮಳೆಯ ಅಬ್ಬರ ಇಂದು ಕೂಡಾ  ಮುಂದುವರೆದಿದೆ. ನಿನ್ನೆ ದಿನ ಭೂಕುಸಿತ, ಸಾವು- ನೋವಿನ ವರದಿಯಾಗಿದೆ.   ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ಎಂಬಲ್ಲಿ ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕಾರು ಆಕಸ್ಮಿಕವಾಗಿ ಹೊಳೆಗೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅವರನ್ನು ವಿಟ್ಲ ಸಮೀಪದ ಕುಂಡಡ್ಕ ನಿವಾಸಿ ಧನುಷ್ (26) ಮತ್ತು ಮಂಜೇಶ್ವರ ನಿವಾಸಿ ಧನುಷ್ (21) ಎಂದು ಗುರುತಿಸಲಾಗಿದೆ. 

ಪುತ್ತೂರಿನಿಂದ ಕಾಣಿಯೂರು ಕಡೆಗೆ ಹೋಗುತ್ತಿದ್ದ ಮಾರುತಿ 800 ಕಾರು ಮಧ್ಯರಾತ್ರಿ ವೇಳೆಗೆ ಪಲ್ಟಿಯಾಗಿದೆ. ಆದರೆ ಕೆಲವರು ರೇಲಿಂಗ್‌ ಮತ್ತು ಕಾರಿನ ಭಾಗಗಳನ್ನು ಮುರಿದು ನೋಡಿದಾಗ ಬೆಳಿಗ್ಗೆ 6 ಗಂಟೆಗೆ ಘಟನೆ ಬೆಳಕಿಗೆ ಬಂದಿದೆ. 12:10 ಕ್ಕೆ ವೇಗವಾಗಿ ಬಂದ ಕಾರು ರೇಲಿಂಗ್‌ಗೆ ಡಿಕ್ಕಿ ಹೊಡೆದು ನಂತರ ಹೊಳೆಯಲ್ಲಿ ಬಿದ್ದಿರುವುದು ಸಮೀದಿಯ ಮಸೀದಿಯ ಸಿಸಿಟಿವಿ ದೃಶ್ಯಾವಳಿಯಿಂದ ತಿಳಿದುಬಂದಿದೆ. ಶೋಧ ಕಾರ್ಯ ಆರಂಭಿಸಿದ ನಂತರ ಸ್ಥಳದಿಂದ 60 ಮೀಟರ್ ದೂರದಲ್ಲಿ ಕಾರು ಪತ್ತೆಯಾಗಿದೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯು ಹಲವೆಡೆ ಕಂಪನವನ್ನು ಉಂಟುಮಾಡುತ್ತಿದೆ. ಭಾನುವಾರ ಬೆಳಗ್ಗೆ 6.22ಕ್ಕೆ ಕೊಡಗು ಜಿಲ್ಲೆಯಲ್ಲಿ 1.8 ತೀವ್ರತೆಯ ಭೂಕಂಪನ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಡಗಿನ ಗಡಿಭಾಗದ ಅರಂತೋಡು ಗ್ರಾಮ ಪಂಚಾಯತ್‌ನ ಆಗ್ನೇಯಕ್ಕೆ 1.1 ಕಿ.ಮೀ ದೂರದಲ್ಲಿ ಭೂಕಂಪನವಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಎಂದು  ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಹೆಬ್ರಿ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಆಗುಂಬೆ ಘಾಟ್‌ನ ನಾಲ್ಕನೇ ಮತ್ತು 10ನೇ ತಿರುವಿನಲ್ಲಿ ಭೂಕುಸಿತ ಉಂಟಾಗಿದ್ದು, ಎನ್‌ಎಚ್ 169ರಲ್ಲಿ ಸಂಚಾರ ಸ್ಥಗಿತಗೊಂಡಿದೆ. ರಸ್ತೆಯನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದ್ದರೂ, ಸೋಮವಾರದ ವೇಳೆಗೆ ಸಂಚಾರ ಮರುಸ್ಥಾಪಿಸುವ ಸಾಧ್ಯತೆಯಿಲ್ಲ ಎಂದು ಅಧಿಕಾರಿಗಳು ಹೇಳಿದರು.

ದಕ್ಷಿಣ ಕನ್ನಡದಲ್ಲಿ ಕಾಳಿ ನದಿಯು ಅಣೆಕಟ್ಟಿನ ಮೇಲೆ ಹರಿಯುತ್ತಿದ್ದು, ಕದ್ರಾ ಪಟ್ಟಣಕ್ಕೆ ಸಂಪರ್ಕವನ್ನು ಕಡಿತಗೊಳಿಸಿದೆ. ನದಿ ಅಪಾಯದ ಮಟ್ಟ ಮೀರಿದ್ದು,  ಹಲವು ಗ್ರಾಮಗಳ ಜನರಲ್ಲಿ ಎಚ್ಚರಿಕೆ ವಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com