ಮಂಗಳೂರು: ಗಾಳಿ ಮಳೆಗೆ ಹೊಟೇಲ್ ನ ಪಾರ್ಕಿಂಗ್ ಛಾವಣಿಯಿಂದ ಧರೆಗುರುಳಿದ ಶೀಟ್, ಕಾರುಗಳು ಜಖಂ

ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಮಳೆಯ ಅವಾಂತರ ಮುಂದುವರಿದಿದೆ. ಭಾರೀ ಮಳೆ ಗಾಳಿಗೆ ಮಂಗಳೂರಿನ ಕೆ ಎಸ್ ರಾವ್ ರಸ್ತೆಯಲ್ಲಿರುವ ಗಣೇಶ್ ಮಹಲ್ ಹೊಟೇಲ್ ನ ಪಾರ್ಕಿಂಗ್ ಜಾಗದ ಮೆಟಲ್ ಶೀಟ್ ನ ಛಾವಣಿ ಕುಸಿದಿದೆ. 
ಕಾರುಗಳ ಮೇಲೆ ಬಿದ್ದ ಶೀಟ್
ಕಾರುಗಳ ಮೇಲೆ ಬಿದ್ದ ಶೀಟ್

ಮಂಗಳೂರು: ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಮಳೆಯ ಅವಾಂತರ ಮುಂದುವರಿದಿದೆ. ಭಾರೀ ಮಳೆ ಗಾಳಿಗೆ ಮಂಗಳೂರಿನ ಕೆ ಎಸ್ ರಾವ್ ರಸ್ತೆಯಲ್ಲಿರುವ ಗಣೇಶ್ ಮಹಲ್ ಹೊಟೇಲ್ ನ ಪಾರ್ಕಿಂಗ್ ಜಾಗದ ಮೆಟಲ್ ಶೀಟ್ ನ ಛಾವಣಿ ಕುಸಿದಿದೆ. 

ಈ ಸಂದರ್ಭದಲ್ಲಿ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಏಳಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಜಖಂ ಆಗಿವೆ. ನಿನ್ನೆ ಮಧ್ಯಾಹ್ನ ಬೀಸಿದ ಭಾರೀ ಗಾಳಿಗೆ ಹೊಟೇಲ್ ಗೆ ಊಟಕ್ಕೆ ಬಂದಿದ್ದ ಗ್ರಾಹಕರ ಕಾರುಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. 

ಇನ್ನು ಮಂಗಳೂರಿನ ಸಮುದ್ರ ಕಿನಾರೆಯಲ್ಲಿ ಕಡಲು ಕೊರೆತ ಹೆಚ್ಚಾಗಿದ್ದು ಪಣಂಬೂರಿನ ಹೊರವಲಯ ಮೀನಾಕಳಿಯ ಎಂಬಲ್ಲಿ ಕಾಂಕ್ರೀಟ್ ರಸ್ತೆ ಕುಸಿದಿದೆ.  ಕಡಲು ಕೊರೆತಕ್ಕೆ ಮನೆಯೊಂದರ ಭಾಗ ಕುಸಿದಿದೆ. ಇಲ್ಲಿನ ನಿವಾಸಿಗಳನ್ನು ಮೊದಲೇ ಬೇರೆಡೆಗೆ ವರ್ಗಾಯಿಸಲಾಗಿತ್ತು. 

ಮುಂದಿನ ಕೆಲ ದಿನಗಳವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com