ಈದ್ಗಾ ಮೈದಾನ ವಿವಾದ: ಸಹಿ, ರಕ್ತದಾನ ಅಭಿಯಾನ ಆಯೋಜಿಸಿದ ಚಾಮರಾಜಪೇಟೆ ನಾಗರಿಕ ಒಕ್ಕೂಟ

ಚಾಮರಾಜಪೇಟೆಯ ಈದ್ಗಾ ಮೈದಾನ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಾತಂತ್ರ್ಯ ದಿನಾಚರಣೆಯಂದು ಕಾರ್ಯಕ್ರಮ ಮತ್ತು ಇತರೆ ದಿನಗಳಂದು ಧಾರ್ಮಿಕ ಕಾರ್ಯಕ್ರಮಗಳ ಆಯೋಜಿಸುವ ಹಕ್ಕು ಪಡೆಯಲು ಬೆಂಬಲ ಪಡೆಯಲು ಚಾಮರಾಜಪೇಟೆ ನಾಗರಿಕ ವೇದಿಕೆ ಒಕ್ಕೂಟವು ಸಹಿ ಅಭಿಯಾನವನ್ನು ಆಯೋಜಿಸುತ್ತಿದೆ. 
ಚಾಮರಾಜಪೇಟೆ ಈದ್ಗಾ ಮೈದಾನ
ಚಾಮರಾಜಪೇಟೆ ಈದ್ಗಾ ಮೈದಾನ

ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಾತಂತ್ರ್ಯ ದಿನಾಚರಣೆಯಂದು ಕಾರ್ಯಕ್ರಮ ಮತ್ತು ಇತರೆ ದಿನಗಳಂದು ಧಾರ್ಮಿಕ ಕಾರ್ಯಕ್ರಮಗಳ ಆಯೋಜಿಸುವ ಹಕ್ಕು ಪಡೆಯಲು ಬೆಂಬಲ ಪಡೆಯಲು ಚಾಮರಾಜಪೇಟೆ ನಾಗರಿಕ ವೇದಿಕೆ ಒಕ್ಕೂಟವು ಸಹಿ ಅಭಿಯಾನವನ್ನು ಆಯೋಜಿಸುತ್ತಿದೆ. 

ಒಕ್ಕೂಟವು ಇದೇ ಭಾನುವಾರ ಮೈದಾನದಲ್ಲಿ ರಕ್ತದಾನ ಶಿಬಿರವನ್ನೂ ಆಯೋಜಿಸಲಿದ್ದು, ಈ ನಿಟ್ಟಿನಲ್ಲಿ ನಿವಾಸಿಗಳಿಗೆ ಸಹಾಯ ಮಾಡುವಂತೆ ಒತ್ತಾಯಿಸಿ ಸಾವಿರಾರು ಸಹಿಗಳನ್ನು ಕ್ರೋಢೀಕರಿಸಿ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಳುಹಿಸುವ ಗುರಿ ಹೊಂದಿದ್ದೇವೆ ಎಂದು ಒಕ್ಕೂಟದ ಸದಸ್ಯರು ಹೇಳಿದ್ದಾರೆ.

“ಕಳೆದ ವಾರ ನಾವು ಚಾಮರಾಜಪೇಟೆ ಬಂದ್ ಮಾಡಿದ್ದೆವು ಮತ್ತು ಈಗ ಈ ಸಹಿ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ಆಟದ ಮೈದಾನ ಪಾಲಿಕೆ ಆಸ್ತಿ ಎಂಬ ಬಿಬಿಎಂಪಿ ದಾಖಲೆ ಸಂಗ್ರಹಿಸಿದ್ದೇವೆ. ಹಾಗಾಗಿ ಗಣೇಶ ಚತುರ್ಥಿ, ಸ್ವಾತಂತ್ರ್ಯ ದಿನಾಚರಣೆಯಂತಹ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬೇಕು ಎಂದು ಆಗ್ರಹಿಸುತ್ತೇವೆ. ಭಾನುವಾರ ನೂರಾರು ಮಂದಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಚಾಮರಾಜಪೇಟೆ ನಿವಾಸಿ ಶಶಾಂಕ್ ತಿಳಿಸಿದರು.

ಇತ್ತೀಚೆಗೆ ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆದು ಅಂಬೇಡ್ಕರ್ ಜಯಂತಿ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ ಮತ್ತಿತರ ಸರ್ಕಾರಿ ಕಾರ್ಯಕ್ರಮಗಳಿಗೆ ಆಟದ ಮೈದಾನವನ್ನು ಬಳಸಲು ಅನುಮತಿ ನೀಡುವಂತೆ ಸೂಚಿಸಿದ್ದರು.

ಬಿಬಿಎಂಪಿಯು ವಕ್ಫ್ ಮಂಡಳಿಗೆ ನೋಟಿಸ್ ಕಳುಹಿಸಿದ್ದು, ಜಮೀನಿನ ಮಾಲೀಕತ್ವದ ಬಗ್ಗೆ ನಿರ್ಧರಿಸಲು ಕಾನೂನು ಇಲಾಖೆಯೊಂದಿಗೆ ಪರಿಶೀಲಿಸಿ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವಂತೆ ಕೋರಿದೆ. 2.5 ಎಕರೆ ಈದ್ಗಾ ಭೂಮಿಯನ್ನು ವಕ್ಫ್ ಭೂಮಿ ಎಂದು ಸರ್ಕಾರಿ ಗೆಜೆಟ್ ಅಧಿಸೂಚನೆ ಮಾಡಿದ ನಂತರ 1965 ರಿಂದ ಖಾತಾ ಅರ್ಜಿ ಸಲ್ಲಿಸಲು ಮಂಡಳಿ ವಿಫಲವಾಗಿದೆ. 1974 ರ ದಾಖಲೆಗಳು ಭೂಮಿಯನ್ನು ಪಾಲಿಕೆ ಆಸ್ತಿ ಎಂದು ತೋರಿಸುತ್ತವೆ ಮತ್ತು ಮಾಲೀಕತ್ವವನ್ನು ಸಾಬೀತುಪಡಿಸಲು ತನ್ನ ನೋಟಿಸ್‌ಗೆ ಮಂಡಳಿಯ ಪ್ರತಿಕ್ರಿಯೆಗಾಗಿ ಕಾಯುತ್ತಿದೆ ಎಂದು ಪಾಲಿಕೆ ವಾದಿಸಿತ್ತು.

'ಈದ್ಗಾ ಮೈದಾನ ಸರ್ಕಾರದ ಸ್ವತ್ತು'; ದಾಖಲೆ ಬಿಡುಗಡೆ ಮಾಡಿದ್ದ ಒಕ್ಕೂಟ
ಚಾಮರಾಜಪೇಟೆಯ ಈದ್ಗಾ ಮೈದಾನ (Idgah Maidan) ಸರ್ಕಾರದ ಸ್ವತ್ತು ಎಂಬುದಕ್ಕೆ ನಾಗರಿಕ ಒಕ್ಕೂಟ ಮತ್ತೊಂದು ದಾಖಲೆ (Document) ಬಿಡುಗಡೆ ಮಾಡಿದೆ. ದಾಖಲೆಯಲ್ಲಿ ಮೈಸೂರು ಸಂಸ್ಥಾನದ ಅಧೀನಕ್ಕೆ ಒಳಪಡುವ ಸ್ವತ್ತು ಎಂದು ಉಲ್ಲೇಖವಾಗಿದೆ. 1950ರಲ್ಲೇ ಮೈದಾನ ಮೈಸೂರು ಸಂಸ್ಥಾನದ ಅಧೀನಕ್ಕೆ ಒಳಪಟ್ಟಿತ್ತು. ಮೈದಾನ ಯಾವುದೇ ದರ್ಗಾಕ್ಕೆ ನೀಡಿಲ್ಲ. ಇದು ಸರ್ಕಾರಿ ಸ್ವತ್ತು ಎಂದು ಗಡಿ ಸಮೇತ ಉಲ್ಲೇಖವಾಗಿರುವ ದಾಖಲೆಯನ್ನು ಒಕ್ಕೂಟ ಬಿಡುಗಡೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com