ಬಿಎಸ್ ಎನ್ ಎಲ್
ಬಿಎಸ್ ಎನ್ ಎಲ್

ತೊಂದರೆಗೊಳಗಾದ ಗ್ರಾಹಕಗೆ 30,000 ರೂ. ಪಾವತಿಸಲು ಬಿಎಸ್ ಎನ್ ಎಲ್ ಗೆ ನಿರ್ದೇಶನ

ಬಿಬಿಎಂಪಿ ಕೈಗೊಂಡಿರುವ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ವೇಳೆ ಭೂಗತ ಕೇಬಲ್‌ ಹಾಳಾದ ಹಿನ್ನೆಲೆಯಲ್ಲಿ ಲ್ಯಾಂಡ್‌ಲೈನ್ ಮತ್ತು ಬ್ರಾಡ್‌ಬ್ಯಾಂಡ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ 30,000 ರೂ. ಪಾವತಿಸುವಂತಾಗಿದೆ. 

ಬೆಂಗಳೂರು: ಬಿಬಿಎಂಪಿ ಕೈಗೊಂಡಿರುವ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ವೇಳೆ ಭೂಗತ ಕೇಬಲ್‌ ಹಾಳಾದ ಹಿನ್ನೆಲೆಯಲ್ಲಿ ಲ್ಯಾಂಡ್‌ಲೈನ್ ಮತ್ತು ಬ್ರಾಡ್‌ಬ್ಯಾಂಡ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ 30,000 ರೂ. ಪಾವತಿಸುವಂತಾಗಿದೆ. 

ಶಿವಾಜಿನಗರದ ನಿವಾಸಿ ವಿ. ಚಂದ್ರಕಾಂತನ್ ಗೆ ಸೇವಾ ಲೋಪ ಪರಿಹಾರವಾಗಿ 15,000 ರೂ, ಮಾನಸಿಕ ಯಾತನೆಗಾಗಿ ರೂ. 10,000 ಮತ್ತು ವ್ಯಾಜ್ಯ ವೆಚ್ಚಕ್ಕಾಗಿ ರೂ. 5,000 ಪಾವತಿಸುವಂತೆ ಬಿಎಸ್ ಎನ್ ಎಲ್ ಗೆ  ಮೂರನೇ ಹೆಚ್ಚುವರಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚಿಸಿದೆ.

ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ ಅಥವಾ ಗೇಲ್‌ನಿಂದ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದಾಗ ಸೇವೆಗಳಿಗೆ ಅಡ್ಡಿಯಾಗುತ್ತಿದೆ ಎಂದು ಆಯೋಗದ ಅಧ್ಯಕ್ಷ ಕೆ.ಶಿವರಾಮ, ಸದಸ್ಯರಾದ ಕೆ.ಎಸ್.ರಾಜು, ರೇಖಾ ಸಾಯಣ್ಣನವರ್ ಅವರನ್ನೊಳಗೊಂಡ ಆಯೋಗ ಹೇಳಿತು. 

ದೂರುದಾರರು ಸೇವೆಗಳನ್ನು ಪಡೆಯದಿದ್ದರೂ ಡಿಸೆಂಬರ್ 2020 ರವರೆಗೆ ನಿಯಮಿತವಾಗಿ ಬಿಲ್‌ಗಳನ್ನು ಪಾವತಿಸುತ್ತಿದ್ದರು ಎಂಬ ಅಂಶವನ್ನು ಪರಿಗಣಿಸಿರುವ ಆಯೋಗ, ಸೇವೆಯ ಕೊರತೆಯಿಂದಾಗಿ, ದೂರುದಾರರು ಮಾನಸಿಕವಾಗಿ, ಆರ್ಥಿಕವಾಗಿ ಮತ್ತು ವೃತ್ತಿಪರವಾಗಿ ನೊಂದಿದ್ದಾರೆ. ಇದು ಸೇವೆಯ ಕೊರತೆಗೆ ಸಮಾನವಾಗಿದೆ ಎಂದು ಹೇಳಿದೆ. 

ದೂರುದಾರರು 2008 ರಿಂದ ಲ್ಯಾಂಡ್‌ಲೈನ್ ಮತ್ತು ಬ್ರಾಡ್‌ಬ್ಯಾಂಡ್ ಸಂಪರ್ಕ ಎರಡಕ್ಕೂ ಚಂದಾದಾರರಾಗಿದ್ದಾರೆ. ಸೇವೆಯು ಆರಂಭದಲ್ಲಿ ಉತ್ತಮವಾಗಿತ್ತು. 2016 ರಲ್ಲಿ, ದೂರುದಾರರು ಟಿನ್ ಫ್ಯಾಕ್ಟರಿಯಿಂದ ಶಿವಾಜಿನಗರಕ್ಕೆ ಸ್ಥಳಾಂತರಗೊಂಡರು. ನಂತರ ಸಮಸ್ಯೆಗಳು ಪ್ರಾರಂಭವಾಗಿದೆ. ಕೇಬಲ್‌  ದೋಷವನ್ನು ಸರಿಪಡಿಸಲು ಅವರು ಹಲವಾರು ದೂರುಗಳನ್ನು ನೀಡಿದರು, ಆದರೆ ಅದನ್ನು ಪರಿಹರಿಸಲು ಬಿಎಸ್‌ಎನ್‌ಎಲ್ ವಿಫಲವಾಗಿದೆ. ಇದರಿಂದ ಅವರ ಕಚೇರಿ ಕೆಲಸ ಸ್ಥಗಿತಗೊಂಡಿದ್ದು, ಅಪಾರ ನಷ್ಟ ಅನುಭವಿಸುವಂತಾಗಿದೆ ಎಂದು ದೂರುದಾರರು ವಾದಿಸಿದ್ದಾರೆ.

ಜುಲೈ 2019 ರಲ್ಲಿ ಕೇವಲ ಒಂದು ದೂರನ್ನು ಸ್ವೀಕರಿಸಿ,  ಅದನ್ನು ಪರಿಹರಿಸಲಾಗಿದೆ ಎಂದು ಬಿಎಸ್ ಎನ್ ಎಲ್ ಹೇಳಿದೆ. ಆ ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಕೆಲಸದಿಂದಾಗಿ ಭೂಗತ ಕೇಬಲ್ ಹಾನಿಗೊಳಗಾದ ನಂತರ ಆಗಸ್ಟ್ 2020 ಮತ್ತು ಅಕ್ಟೋಬರ್ 5, 2020 ರ ನಡುವೆ ಸೇವೆಯಲ್ಲಿ ಅಡಚಣೆ ಉಂಟಾಗಿದ್ದು, ನಂತರ ಸೇವೆಯನ್ನು ಮರುಸ್ಥಾಪಿಸಲಾಗಿದೆ ಎಂದು ಬಿಎಸ್ಎನ್ಎಲ್ ಹೇಳಿದೆ. 

Related Stories

No stories found.

Advertisement

X
Kannada Prabha
www.kannadaprabha.com