ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜಿನ ಇಬ್ಬರು ಪಿಯು ವಿದ್ಯಾರ್ಥಿನಿಯರು ನಾಪತ್ತೆ !

ನಗರದ ಪ್ರತಿಷ್ಠಿತ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ಇಬ್ಬರು ಬಾಲಕಿಯರು  ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಬುಧವಾರ ತಡರಾತ್ರಿ ಎಫ್‌ಐಆರ್ ದಾಖಲಿಸಲು ವಿದ್ಯಾರ್ಥಿಗಳ ಪೋಷಕರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದ ಪ್ರತಿಷ್ಠಿತ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ಇಬ್ಬರು ಬಾಲಕಿಯರು  ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಬುಧವಾರ ತಡರಾತ್ರಿ ಎಫ್‌ಐಆರ್ ದಾಖಲಿಸಲು ವಿದ್ಯಾರ್ಥಿಗಳ ಪೋಷಕರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

19 ವರ್ಷದ ಇಬ್ಬರು ವಿದ್ಯಾರ್ಥಿನಿಯರು ವಸಂತ ನಗರ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜು ಮುಗಿದ ನಂತರ ಇಬ್ಬರು ವಿದ್ಯಾರ್ಥಿನಿಯರು ಕಂಬೈನ್ ಸ್ಟಡಿ ಮಾಡಲು ತಮ್ಮ ಮನೆಯಲ್ಲಿ ಭೇಟಿಯಾಗುತ್ತಿದ್ದರು ಎಂದು ಪೋಷಕರು ತಿಳಿಸಿದ್ದಾರೆ. ಸೋಮವಾರ ಪುಸ್ತಕ ಕೊಡುವ ನೆಪದಲ್ಲಿ ಹೊರಟ ವಿದ್ಯಾರ್ಥಿನಿ ಸಂಜೆಯವರೆಗೂ ಮನೆಗೆ ಬಾರಲಿಲ್ಲ, ಹೀಗಾಗಿ ಆಕೆಯ ತಂದೆ ಆಕೆಗೆ ಕರೆ ಮಾಡಿದ್ದಾರೆ.

ಈ ವೇಳೆ ತಾನು ಮನೆಗೆ ಬರುವುದು ತಡವಾಗುತ್ತದೆ ಎಂದು ಹೇಳಿದ್ದಾಳೆ. ಇದಕ್ಕೆ ಕೋಪಗೊಂಡ ಆಕೆಯ ತಂದೆ ಏರು ಧ್ವನಿಯಲ್ಲಿ ಮಾತನಾಡಿ ಏಕೆ ತಡವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ, ಕೂಡಲೇ ಆಕೆ ಕರೆಯನ್ನು ಕಟ್ ಮಾಡಿದ್ದಾಳೆ. ಇದಾದ ನಂತರ ಆಕೆಯ ತಂದೆ ಅವಳನ್ನು ಸಂಪರ್ಕಿಸಲು ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ ಮೇಸೆಜ್ ಕಳುಹಿಸಿದ್ದ ವಿದ್ಯಾರ್ಥಿನಿ ನಾನು ನನ್ನ ಸ್ನೇಹಿತೆಯೊಂದಿಗೆ ಹೋಗುತ್ತಿರುವುದಾಗಿಯೂ, ಹುಡುಕುವ ಪ್ರಯತ್ನ ಮಾಡದಂತೆ ತಿಳಿಸಿದ್ದಾಳೆ.

ನಂತರ ಅವರು, ಆಕೆಯ ಸ್ನೇಹಿತೆಯ ಪೋಷಕರಿಗೆ ಕರೆ ಮಾಡಿದಾಗ, 2 ದಿನಗಳಿಂದ ಮನೆಗೆ ಬಂದಿಲ್ಲವೆಂದು ಅವರು ಮಾಹಿತಿ ನೀಡಿದ್ದಾರೆ. ಆಘಾತಕ್ಕೊಳಗಾದ ಇಬ್ಬರು ಬಾಲಕಿಯರ ಪೋಷಕರು ಸ್ನೇಹಿತರು ಮತ್ತು ಸಂಬಂಧಿಕರನ್ನು ಸಂಪರ್ಕಿಸಿದ್ದಾರೆ, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಯಾವುದೇ ಸುಳಿವು ಸಿಗದಿದ್ದಾಗ ಅವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ ಹುಡುಗಿಯರ ಪತ್ತೆಗೆ ತಂಡಗಳನ್ನು ರಚಿಸಿದ್ದಾರೆ. ಕೇರಳ ಮತ್ತು ತಮಿಳುನಾಡು ಸೇರಿದಂತೆ ಎಲ್ಲಾ ಠಾಣೆಗಳಿಗೂ ಸಂದೇಶ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com