ಮಂಗಳೂರು: ಸರ್ವ ಧರ್ಮೀಯರ ಶಾಂತಿ ಪಾಲನಾ ಸಭೆಯಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ- ಅಲೋಕ್ ಕುಮಾರ್
ಕೇವಲ 10 ದಿನಗಳ ಅಂತರದಲ್ಲಿ ಮೂವರ ಬರ್ಬರ ಹತ್ಯೆಯಿಂದ ನಲುಗಿರುವ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಸಮ್ಮುಖದಲ್ಲಿ ಇಂದು ಶಾಂತಿ ಪಾಲನಾ ಸಭೆ ನಡೆಯಿತು.
Published: 30th July 2022 07:27 PM | Last Updated: 30th July 2022 08:09 PM | A+A A-

ಎಡಿಜಿಪಿ ಅಲೋಕ್ ಕುಮಾರ್, ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್
ಮಂಗಳೂರು: ಕೇವಲ 10 ದಿನಗಳ ಅಂತರದಲ್ಲಿ ಮೂವರ ಬರ್ಬರ ಹತ್ಯೆಯಿಂದ ನಲುಗಿರುವ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಸಮ್ಮುಖದಲ್ಲಿ ಇಂದು ಶಾಂತಿ ಪಾಲನಾ ಸಭೆ ನಡೆಯಿತು. ಮುಸ್ಲಿಂ ಮುಖಂಡರು ಸೇರಿದಂತೆ ಎಲ್ಲಾ ಸಮುದಾಯಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಂಡರು.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್ ಕುಮಾರ್, ಸರ್ವ ಧರ್ಮೀಯರ ಶಾಂತಿ ಪಾಲನಾ ಸಭೆಯಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು. ನಮ್ಮೊಂದಿಗೆ ಸಹಕರಿಸುವಂತೆ ಅವರಿಗೆ ಮನವಿ ಮಾಡಿದ್ದೇವೆ. ಆದ್ದರಿಂದ ಈ ಪ್ರದೇಶದಲ್ಲಿ ಶಾಂತಿ ಹದಗೆಡುವುದಿಲ್ಲ. ಯುವಕನ ಹತ್ಯೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಯಾರನ್ನು ಬಂಧಿಸಿಲ್ಲ, ಆದರೆ, ಶಂಕಿತರನ್ನು ವಿಚಾರಿಸಲಾಗುತ್ತಿದೆ ಎಂದು ತಿಳಿಸಿದರು.
Karnataka | This meeting has resulted in positive outcome. We've asked them to join hands with us, so peace in area is not fragile. No arrests yet made but suspects picked up & are being questioned: ADGP Alok Kumar after peace meeting in Mangaluru's youth murder case pic.twitter.com/PnwsPyW3Bb
— ANI (@ANI) July 30, 2022
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಿಂದ ಇಲ್ಲಿಯವರೆಗೂ 37 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಶೀಘ್ರದಲ್ಲಿಯೇ ಪ್ರಕರಣವನ್ನು ಭೇದಿಸಲಾಗುವುದು, ಇಂಟರ್ ನೆಟ್ ನಿರ್ಬಂಧ ಮೂಲಕ ಸಾಮಾನ್ಯ ಜನರಿಗೆ ತೊಂದರೆ ಕೊಡಲು ಬಯಸುವುದಿಲ್ಲ, ಜವಾಬ್ದಾರಿಯುತವಾಗಿ ಬಳಸಲು ಸೂಚನೆ ನೀಡಲಾಗಿದೆ ಎಂದರು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಅಂತಿಮಯಾತ್ರೆ ವೇಳೆ ಲಾಠಿಚಾರ್ಜ್: ಬೆಳ್ಳಾರೆ, ಸುಬ್ರಹ್ಮಣ್ಯ ಠಾಣೆಯ ಪಿಎಸ್ಐಗಳ ವರ್ಗಾವಣೆ
ಶಾಂತಿ ಪಾಲನಾ ಸಭೆಯಲ್ಲಿ ಮುಸ್ಲಿಂ ಮುಖಂಡರು ಸೇರಿದಂತೆ ಎಲ್ಲ ಧರ್ಮಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಮುಸ್ಲಿಂ ಮುಖಂಡರಿಂದ ಮತ್ತೊಂದು ಸಭೆ ನಡೆದಿದೆ. ಎಲ್ಲಾ ಸಮುದಾಯಗಳ ಮುಖಂಡರನ್ನು ಭೇಟಿ ಮಾಡಿದ್ದು, ಅವುಗಳ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದರು.
Karnataka | Since yesterday 21+16 people have been taken to custody & interrogated. We are very sure we will be able to crack the case very soon. We do not want to further trouble the common man by banning internet, just be cautious & responsible: N Shashi Kumar, CP Mangaluru pic.twitter.com/gX6wANmBYr
— ANI (@ANI) July 30, 2022